ಕೊರೊನಾ ಸೋಂಕಿನಿಂದ ಗುಣಮುಖರಾದ ಪಾದರಾಯನಪುರ ವಾರ್ಡ್ ಕಾರ್ಪೋರೇಟರ್ ಇಮ್ರಾನ್ ಪಾಷ ಮೆರವಣಿಗೆ ನಡೆಸಿದ್ದಕ್ಕೆ ಅವರನ್ನು ಪೊಲೀಸರು ಬಂಧಿಸಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲುರನ್ನು ಯಾವಾಗ ಬಂಧಿಸುತ್ತೀರಿ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಟೀಕಾಪ್ರಹಾರ ನಡೆಸಿದ್ದಾರೆ.
ಭಾನುವಾರ ವಿಕ್ಟೋರಿಯಾ ಆಸ್ಪತ್ರೆಯಿಂದ ಇಮ್ರಾನ್ ಪಾಷ ಬಿಡುಗಡೆಯಾದ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಜೈಕಾರ ಕೂಗಿದ್ದರು. ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಯ ಕಾರಾಗೃಹ ಸೆಲ್‌ನಲ್ಲಿರಿಸಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಮ್ರಾನ್ ಪಾಷರನ್ನು ಬಂಧಿಸಿದ್ದು ಸರಿ. ಆದರೆ ಚಿತ್ರದುರ್ಗದಲ್ಲಿ ನೂರಾರು ಜನರನ್ನು ಸೇರಿಸಿ ಮೆರವಣಿಗೆ ಮಾಡಿದ, ಸೇಬಿನ ಹಾರವನ್ನು ಹಾಕಿಸಿಕೊಂಡ, ಸಾಮಾಜಿಕ ಅಂತರದ ನಿಯಮಗಳನ್ನು ಗಾಳಿಗೆ ತೂರಿದ ಆರೋಗ್ಯ ಸಚಿವ ಬಿ.ಶ್ರೀರಾಮುಲುರವರನ್ನು ಯಾವಾಗ ಬಂಧಿಸುತ್ತೀರಿ ಎಂದು ಪ್ರಶ್ನಿಸಿದ್ದರೆ.
ಆರೋಗ್ಯ ಸಚಿವರಾದ ಶ್ರೀರಾಮುಲು ಅವರಿಗೆ ಸೇಬಿನ ಹಾರ ಹಾಕಿ ಕನಿಷ್ಠ ಅಂತರವನ್ನು ಕಾಪಾಡದೆ ವಿಜೃಂಭಣೆಯ ಮೆರವಣಿಗೆ ಮಾಡುತ್ತಿರುವ ದೃಶ್ಯಗಳು. ಕೊರೊನಾ ಸಮಯದಲ್ಲಿ ಸಾಮಾನ್ಯಜನರು ಓಡಾಡಿದರೆ ಲಾಠಿಯಲ್ಲಿ ಗೊಡೆಯುವ ಪೋಲಿಸರು ಈ ರೀತಿಯ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣ ವಾಗಿವೆ.#NaanuGauri #coronaliveupdates #shreeRamulu
Posted by Naanu Gauri on Tuesday, June 2, 2020
ಕೊರೋನ ರೋಗದಿಂದ ಗುಣಮುಖರಾಗಿ ಪಾದರಾಯಣ ಪುರಕ್ಕೆ ಮೆರವಣಿಗೆ ಮೂಲಕ ಬಂದ ಕಾರ್ಪೋರೇಟರ್ ಇಮ್ರಾನ್ ಪಾಷ ಬಂಧನ.. ಕಾನೂನು ಉಲ್ಲಂಘಿಸಿದರೆ ಬಂಧಿಸಿ… ಸರಿಯಾದ ಕ್ರಮ. ಬಂಧಿಸಲೇಬೇಕು.
ಇದಕ್ಕಿಂತ ಮೊದಲು ಅದ್ದೂರಿ ಮೆರವಣಿಗೆ ಮಾಡಿ ಕಾನೂನು ಉಲ್ಲಂಘಿಸಿದ ಆರೋಗ್ಯ ಸಚಿವ ರಾಮುಲು ಬಂಧನ ಇದಕ್ಕಿಂತ ಮೊದಲೇ ಮಾಡಬೇಕಿತ್ತು. ಯಾಕೆ ಬಂಧನವಿಲ್ಲ?
ರಾಮನಿಗೊಂದು ನ್ಯಾಯ ರಹೀಮನಿಗೊಂದು ನ್ಯಾಯನಾ? ಎಂದು ಸಿದ್ದಿಕ್ ಪುತ್ತುರ್‌ರವರು ಪ್ರಶ್ನಿಸಿದ್ದಾರೆ.
ಪಾದರಾಯನಪುರದ ಕಾರ್ಪೋರೇಟರ್ ಇಮ್ರಾನ್ ಪಾಷ ಮೆರವಣಿಗೆ ಮಾಡಿದ್ದಕ್ಕೆ ಅರೆಸ್ಟ್ ಮಾಡಿದ್ದೀರಾ, ಸಂತೋಷ. ಎಲ್ಲಾರಿಗೂ ಒಂದೇ ಕಾನೂನು. ಮೆರವಣಿಗೆ ಮಾಡ್ಕೊಂಡ ಶ್ರೀರಾಮುಲು, ಜಮೀರ್, ರೇಣುಕಾಚಾರ್ಯರನ್ನ ಅರೆಸ್ಟ್ ಮಾಡೋ ತಾಕತ್ತು ಪೋಲಿಸ್ ಇಲಾಖೆಗೆ ಇಲ್ವಾ? ಎಂದು ಜಯರಾಜ್ ನಾಯ್ಡು ಎಂಬುವವರ ಪ್ರಶ್ನಿಸಿದ್ದಾರೆ.
ರೋಡ್ ಷೋ ಮಾಡಿದ ಇಮ್ರಾನ್ ಪಾಷ ಮೇಲೆ ಹಾಕಿದ ಕೇಸ್… ಬಹಿರಂಗ ಸಮಾವೇಶ ಮಾಡಿದ ಶ್ರೀರಾಮುಲು ಮೇಲೆ ಯಾಕೆ ಹಾಕಿಲ್ಲ ಪೋಲೀಸರು? ಕಾನೂನು ಯಾರಪ್ಪನ ಮನೇದು? ಎಂದು ಸತೀಶ್ ಪಾಳೇಗಾರ್‌ರವರು ಕಿಡಿಕಾರಿದ್ದಾರೆ.
ಜನರು ಸೇರಿದ್ದಕ್ಕೆ ಇಮ್ರಾನ್ ಪಾಷ್ ಬಂಧನ ಆಯ್ತು… ಹಾಗಾದರೆ ಆರೋಗ್ಯ ಸಚಿವ ಶ್ರೀರಾಮುಲು ಯಾವಾಗ ಅರೆಸ್ಟ್ ಮಾಡುತ್ತಿರಾ ಹೇಳಿ… ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವಾಗ ಅರೆಸ್ಟ್ ಮಾಡುತ್ತಿರಾ ಹೇಳಿ ಎಂದು ರಾಜಶೇಖರ್ ಎಸ್ ಅಂಗಡಿಯವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. (ಗಜೇಂದ್ರ ಗಡದಲ್ಲಿ ಸಿದ್ದರಾಮಯ್ಯ ನವರು ಭೇಟಿ ನೀಡಿದಾಗ ನೂರಾರು ಜನ ಒಂದೆಡೆ ಸೇರಿ ಘೋಷಣೆ ಕೂಗಿದ್ದರು)
ಕೊರೋನ ರೋಗದಿಂದ ಗುಣಮುಖರಾಗಿ ಪಾದರಾಯಣ ಪುರಕ್ಕೆ ಮೆರವಣಿಗೆ ಮೂಲಕ ಬಂದ ಕಾರ್ಪೋರೇಟರ್ ಇಮ್ರಾನ್ ಪಾಷ ಬಂಧನ..ಕಾನೂನು ಉಲ್ಲಂಘಿಸಿದರೆ ಬಂಧಿಸಿ… ಬಂಧಿಸಲೇಬೇಕು.ಇದಕ್ಕಿಂತ ಮೊದಲು ಅದ್ದೂರಿ ಮೆರವಣಿಗೆ ಮಾಡಿ ಕಾನೂನು ಉಲ್ಲಂಘಿಸಿದ ಆರೋಗ್ಯ ಸಚಿವ ರಾಮುಲು ಬಂಧನ ಯಾವಾಗ?@CMofKarnataka @HMOKarnataka @BZZameerAhmed @siddaramaiah
— itz addu (@AdduItz) June 7, 2020
ಕಾರ್ಪೋರೇಟರ್ ಇಮ್ರಾನ್ ಪಾಷ ನಡೆಸಿದ ಮೆರವಣಿಗೆಯನ್ನು ಖಂಡಿಸುತ್ತೇನೆ. ಅದೇ ರೀತಿ ಚಿತ್ರದುರ್ಗದಲ್ಲಿ ಶ್ರೀರಾಮುಲು ನಡೆಸಿದ ಮೆರವಣಿಗೆ ವಿರುದ್ಧ ಈ ಸರ್ಕಾರ ಮತ್ತು ಆಡಳಿತ ಯಾಕೆ ಕಾನೂನು ಕ್ರಮ ಕೈಗೊಳ್ಳಲಿಲ್ಲ.?ಇದು ಖಂಡಿತಾ ಹಿಟ್ಲರ್ ಆಡಳಿತ.@CMofKarnataka @BZZameerAhmedK @BJP4Karnataka @siddaramaiah @DKShivakumar @BSYBJP
— Srinivas SP (@SrinivasSP12) June 7, 2020
ಬೆಂಗಳೂರಿನಲ್ಲಿ ಕೊರೊನಾದಿಂದ ಗುಣಮುಖರಾದ ಪಾದರಾಯನಪುರದ ಕಾರ್ಪೋರೇಟರ್ ಇಮ್ರಾನ್ ಪಾಷಾ ಅದ್ದೂರಿ ಮೆರವಣಿಗೆ ಸರಿಯಲ್ಲ, ಇವರೆಲ್ಲಾ 420 ಗಳು.
ಇಮ್ರಾನ್ ಪಾಷಾ ಯುದ್ದ ಗೆದ್ದು ಬಂದಿದ್ದಾರಾ……?
ಈ ರೀತಿ ಕಾನೂನು ಗಾಳಿಗೆ ತೂರಿ ಮೆರವಣಿಗೆ ಮಾಡಿದ್ದು ದೇಶ ದ್ರೋಹದ ಕೆಲಸ.
ದುರುದ್ದೇಶ ಪೂರಕವಾಗಿ ಈ ರೀತಿ ಕೆಲಸ ಮಾಡುತ್ತಿದ್ದಾರೆ. pic.twitter.com/Jg6F6KW9SJ
— M P Renukacharya (@MPRBJP) June 7, 2020
ಒಟ್ಟಿನಲ್ಲಿ ಈ ಎಲ್ಲಾ ಜನಪ್ರತಿನಿಧಿಗಳು ಸಹ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೀಗಿರುವಾಗ ಎಲ್ಲರಿಗೂ ಕಾನೂನುಗಳು ಅನ್ವಯವಾಗಬೇಕು. ಕೆಲವರಿಗೆ ಅದರಿಂದ ವಿನಾಯಿತಿ ನೀಡುವುದರಿಂದ ಮತ್ತಷ್ಟು ಉಲ್ಲಂಘನೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅಧಿಕಾರದಲ್ಲಿರುವವರು ಮರೆಯಬಾರದು.
ಇದನ್ನೂ ಓದಿ: ಜನಾಂಗೀಯತೆಯ ಬಗ್ಗೆ ಬಾಲಿವುಡ್ ತಾರೆಗಳ ಇಬ್ಬಂದಿತನವನ್ನು ಬಯಲಿಗೆಳೆದ ನೆಟ್ಟಿಗರು


