ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಇದೀಗ ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯನಟಿ, ಯೂಟ್ಯೂಬರ್ ಲಿಲ್ಲಿ ಸಿಂಗ್ ಬೆಂಬಲ ನೀಡಿದ್ದಾರೆ. 63 ನೇ ಗ್ರ್ಯಾಮಿ ಪ್ರಶಸ್ತಿ ವೇದಿಕೆಯನ್ನುಅವರು ರೈತ ಆಂದೋಲನವನ್ನು ಬೆಂಬಲಿಸಲು ಬಳಸಿಕೊಂಡರು. ಅವರು ಗ್ರ್ಯಾಮಿ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುವಾಗ “ನಾನು ರೈತರ ಜೊತೆ ನಿಲ್ಲುತ್ತೇನೆ” ಎಂದು ಬರೆದಿರುವ ಮಾಸ್ಕ್ ಅನ್ನು ಧರಿಸಿದ್ದರು.
ಈ ಚಿತ್ರವನ್ನು ತನ್ನ ಟ್ವಿಟ್ಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ಲಿಲ್ಲಿ ಸಿಂಗ್, “ರೆಡ್ ಕಾರ್ಪೆಟ್ / ಅವಾರ್ಡ್ ಶೋಗಳಲ್ಲಿನ ಚಿತ್ರಗಳು ಯಾವಾಗಲೂ ಹೆಚ್ಚಿನ ಪ್ರಚಾರ ಪಡೆಯುತ್ತದೆ. ಹೋರಾಟದೊಂದಿಗೆ ಇರಲು ಭಯಪಡಬೇಡಿ. #ನಾನು ರೈತರೊಂದಿಗೆ ನಿಲ್ಲುತ್ತೇನೆ #ಗ್ರ್ಯಾಮಿ” ಎಂದು ಟ್ವೀಟ್ ಮಾಡಿದ್ದಾರೆ.
I know red carpet/award show pictures always get the most coverage, so here you go media. Feel free to run with it ✊? #IStandWithFarmers #GRAMMYs pic.twitter.com/hTM0zpXoIT
— Lilly // #LateWithLilly (@Lilly) March 15, 2021
ಇದನ್ನೂ ಓದಿ: ರೈತ ಹೋರಾಟ: ಕಡು ಬೇಸಿಗೆ ಎದುರಿಸಲು ಸಿದ್ದರಾಗುತ್ತಿದ್ದಾರೆ ಅನ್ನದಾತರು!
ಲಿಲ್ಲಿ ಸಿಂಗ್ ಕೆನಡಾ ಮೂಲದ ಯೂಟ್ಯೂಬರ್, ಹಾಸ್ಯನಟಿಯಾಗಿದ್ದಾರೆ. 2010 ರಲ್ಲಿ ಯೂಟ್ಯೂಬ್ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದ ಅವರು 2016 ರಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂಟ್ಯೂಬರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದರು. ಯೂಟ್ಯೂಬ್‌ನಲ್ಲಿ ಇದುವರೆಗೂ 1.49 ಕೋಟಿಗೂ ಅಧಿಕ ಸಬ್‌ಸ್ಕ್ರೈಬರ್ ಅನ್ನು ಹೊಂದಿದ್ದಾರೆ.
ಗ್ರ್ಯಾಮಿಸ್ ಪ್ರಶಸ್ತಿ ಪ್ರಧಾನ ಸಮಾರಂಭವು ವಿಶ್ವದ ಅತಿದೊಡ್ಡ ಸಂಗೀತ ತಾರೆಯರನ್ನು ಸ್ವಾಗತಿಸಿದ್ದು, ಈ ಕಾರ್ಯಕ್ರಮವನ್ನು ವಿಶ್ವದಾದ್ಯಂತ ಲಕ್ಷಾಂತರ ಜನರು ವೀಕ್ಷಿಸುತ್ತಾರೆ. ಮಾಡೆಲ್ ಅಮಂಡಾ ಸೆರ್ನಿ, ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಸುನಿಲ್ ಸಿಂಗ್ ಮತ್ತು ಭಾರತೀಯ ನಟಿ ಶ್ರುತಿ ಸೇಠ್ ಲಿಲ್ಲಿ ಸಿಂಗ್ ಅವರ ಟ್ವೀಟ್‌ಗಗೆ ಪ್ರತಿಕ್ರಿಯಿಸಿದ್ದಾರೆ.
ರೈತ ಹೋರಾಟಕ್ಕೆ ಅಂತರಾಷ್ಟ್ರೀಯ ಬೆಂಬಲ ಸಿಗುತ್ತಿರುವುದು ಇದುವೆ ಮೊದಲೇನಲ್ಲ. ಫೆಬ್ರವರಿಯ ಆರಂಭದಲ್ಲಿ ರೈತರನ್ನು ಬೆಂಬಲಿಸಿ ಜಾಗತಿಕ ಸಂಗೀತ ಐಕಾನ್ ರಿಹಾನ್ನಾ ಟ್ವೀಟ್ ಮಾಡಿದ್ದು ಭಾರಿ ಸುದ್ದಿಯಾಗಿತ್ತು. ಇದು ಹೋರಾಟಕ್ಕೆ ಇನ್ನಷ್ಟು ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ನೀಡುವಂತೆ ಮಾಡಿತ್ತು.
ಇದನ್ನೂ ಓದಿ: Breaking: ಮಾ. 26ಕ್ಕೆ ಸಂಪೂರ್ಣ ಭಾರತ್ ಬಂದ್ – ಹೋರಾಟನಿರತ ರೈತರ ಕರೆ



ಕಾಂಜಿ ಪಿಂಜಿ ಎಲ್ಲ ರೈತರ ಹೆಸರಲ್ಲಿ ಹಣ ಮಡ್ಕೊತ ಇದ್ದಾರೆ..ಜೊತೆಗೆ ರೈತರು ಎನಿಸಿ ಕೊoಡವರು ಬೆಂಗಾಲ್ ಚುನಾವಣಾ ಪ್ರಚಾರ ದಲ್ಲಿ ಕಾಂಗ್ರೆಸ್ ಪರ್ ಪ್ರಚಾರ ದಲ್ಲಿ ಇದ್ದಾರೆ ಹೀಗಾಗಿ ಅವರು ಯಾರು ಅಂತ ಪ್ರತ್ಯೇಕ ಹೇಳ ಬೇಕಾಗಿಲ್ಲ