ಚೀನಾದೊಂದಿಗಿನ ಗಡಿ ಬಿಕ್ಕಟ್ಟಿನ ಕುರಿತು ವಿರೋಧ ಪಕ್ಷಗಳ ನಾಯಕರು ಕೇಂದ್ರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಕ್ಕಟ್ಟಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಿ ತೀವ್ರವಾಗಿ ಟೀಕಿಸಿದ್ದಾರೆ.
ಗಾಲ್ವಾನ್ ಕಣಿವೆಯ ಸಂಘರ್ಷದ ಕುರಿತು ಪ್ರಧಾನಮಂತ್ರಿಯ ಹೇಳಿಕೆಗಳ ಕುರಿತು ರಾಹುಲ್ ಗಾಂಧಿ ಸರಣಿ ಟ್ವೀಟ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ‘ಸುರೇಂದರ್ ಮೋದಿ’ ಎಂದು ಕರೆದಿದ್ದಾರೆ. ರಾಹುಲ್ ಗಾಂಧಿ ತನ್ನ ಸರಣಿ ಪ್ರಶ್ನೆಗಳಲ್ಲಿ, ‘ಪ್ರಧಾನಿ ಏಕೆ ಮೌನವಾಗಿದ್ದಾರೆ?’, ‘ಅವರು ಯಾಕೆ ತಲೆಮರೆಸಿಕೊಂಡಿದ್ದಾರೆ?’ ಭಾರತ ಸರ್ಕಾರವು ನಿದ್ರಿಸುತ್ತಿದೆ ಮತ್ತು ಸಮಸ್ಯೆಯನ್ನು ನಿರಾಕರಿಸುತ್ತಿದೆ ಎಂದು ಆರೋಪಿಸಿದ್ದಾರೆ.
Why is the PM silent?
Why is he hiding?Enough is enough. We need to know what has happened.
How dare China kill our soldiers?
How dare they take our land?— Rahul Gandhi (@RahulGandhi) June 17, 2020
Once RM is done commenting on the hand symbol, can he answer:
Have the Chinese occupied Indian territory in Ladakh?
— Rahul Gandhi (@RahulGandhi) June 9, 2020
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿಲುವುಗಳ ಕುರಿತು ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಭಾರತೀಯ ಸೇನೆಗೆ ರಾಜ್‌ನಾಥ್ ಸಿಂಗ್ ಏಕೆ ಅವಮಾನಿಸುತ್ತಿದ್ದಾರೆ ಎಂದು ಕೇಳಿದ್ದಾರೆ.
If it was so painful:
1. Why insult Indian Army by not naming China in your tweet?
2. Why take 2 days to condole?
3. Why address rallies as soldiers were being martyred?
4. Why hide and get the Army blamed by the crony media?
5. Why make paid-media blame Army instead of GOI? https://t.co/mpLpMRxwS7— Rahul Gandhi (@RahulGandhi) June 17, 2020
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡಾ ಗಾಲ್ವಾನ್ ವ್ಯಾಲಿಯ ಪರಿಸ್ಥಿತಿಯ ಬಗ್ಗೆ ಸತ್ಯವನ್ನು ಬಹಿರಂಗಪಡಿಸುವಂತೆ ಪ್ರಧಾನಿ ಮೋದಿಯವರನ್ನು ಆಗ್ರಹಿಸಿದ್ದಾರೆ. ಅಲ್ಲದೆ ಚೀನಾ ಆಕ್ರಮಿಸಿದ ಭಾರತದ ಭಾಗಗಳ ಬಗ್ಗೆ ಮಾಹಿತಿ ನೀಡಲು ಪ್ರಧಾನಿಯವರನ್ನು ಕೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಗಡಿ ಸಂಘರ್ಷದ ಸಂಭಂದಿಸಿ ಪ್ರಧಾನಿ ಮೋದಿಯವರ ಪ್ರತಿಕ್ರಿಯೆಯನ್ನು ಖಂಡಿಸಿದ್ದಾರೆ.
प्रधानमंत्री जी, आपके कल बयान के बाद चीन ने दुस्साहस किया – कहा पूरी गलवान घाटी उनकी है
पूरी गलवान घाटी भारत मां का अभिन्न अंग है!
चुप मत रहिए, चीन को मुंह तोड़ जवाब दे बता दीजिए-
गलवान घाटी हमारी थी,हमारी है और सदैव हमारी रहेगीडरिए-घबराइये मत
पीछे मत हटे
यही राष्ट्र धर्म है! pic.twitter.com/2DfomQ8lQD— Randeep Singh Surjewala (@rssurjewala) June 20, 2020
ತೃಣಮೂಲ ಕಾಂಗ್ರೆಸ್ ನ ಯುವ ವಿಂಗ್ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ, ಚೀನಿಯರು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆಯೇ ಇಲ್ಲವೇ ಎಂದು ಕೇಳಿದ್ದಾರೆ.
Respected @AmitShah Ji, Bengal has not heard you speak during these times of crisis, but we hope today you would take a minute to answer this:
"Are the Chinese occupying our territory or not?"
“চীন আমাদের ভূমির অংশ দখল করছে কি না?”
— Abhishek Banerjee (@abhishekaitc) June 9, 2020
ಭಾರತದ ಭೂಪ್ರದೇಶಕ್ಕೆ ಯಾರೂ ಪ್ರವೇಶಿಸದಿದ್ದರೆ 20 ಸೈನಿಕರು ಹೇಗೆ ಸತ್ತರು ಎಂದು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
On the LAC
An eye for an eye
A tooth for a toothNo protocol can stand in the way of “self defence” if our soldiers are attacked
No protocol can prevent soldiers from carrying arms for protection
Neither 1996 nor 2005 CBM’s prevent our soldiers from carrying weapons
— Kapil Sibal (@KapilSibal) June 19, 2020
ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ.


