Homeನಿಜವೋ ಸುಳ್ಳೋಭಾರತ ಸರ್ಕಾರವು ಆನ್‌ಲೈನ್‌ ಕಾನ್ಫರೆನ್ಸ್‌ಗಾಗಿ ZOOM ಬದಲು NAMASTE ಆಪ್‌ ಬಿಡುಗಡೆ ಮಾಡಿದೆಯೇ?

ಭಾರತ ಸರ್ಕಾರವು ಆನ್‌ಲೈನ್‌ ಕಾನ್ಫರೆನ್ಸ್‌ಗಾಗಿ ZOOM ಬದಲು NAMASTE ಆಪ್‌ ಬಿಡುಗಡೆ ಮಾಡಿದೆಯೇ?

- Advertisement -
- Advertisement -

ಕೊರೋನಾ ಭೀತಿಯಿಂದಾಗಿ ದೇಶದಾದ್ಯಂತ ಲಾಕ್ಡೌನ್ ಘೋಷಿಸುತ್ತಿದ್ದಂತೆ ಆನ್‌ಲೈನ್‌ನಲ್ಲಿ ಮೀಟಿಂಗ್‌ ಮಾಡುವುದಕ್ಕಾಗಿ ಪ್ರಸಿದ್ದವಾದ APP ಎಂದರೇ ’ZOOM’. ಗೆಳೆಯ ಗೆಳತಿಯರ ವಿಡಿಯೋ ಚಾಟಿಂಗ್, ಫ್ಯಾಮಿಲಿ ಚಾಟಿಂಗ್ ಯಿಂದ Work From Home ಕೆಲಸ ಮಾಡುತ್ತಿರುವ ಕಚೇರಿ ಸಿಬ್ಬಂದಿಗಳ ವರೆಗೆ ಎಲ್ಲರೂ ತಮ್ಮ ಸಂವಹನಕ್ಕಾಗಿ ಈ ZOOM APP ಅನ್ನೇ ಬಳಸುತ್ತಿದ್ದರು.

ಆದರೆ, ಈ ZOOM APP ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಶನ್ ಮೂಲಕ ವ್ಯಯಕ್ತಿಕ ಮಾಹಿತಿಯನ್ನು ಕದಿಯಲಾಗುತ್ತಿದೆ ಎಂಬ ಸುದ್ದಿ ಕಳೆದ ವಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಇದರ ಬಳಕೆ ಕ್ರಮೇಣ ಕಡಿಮೆಯಾಗಿದೆ. ಭಾರತದ ಗೃಹ ಸಚಿವಾಲಯ ಸಹ ಈ APP ಅನ್ನು ಬಳಸದಂತೆ ಸೂಚನೆ ನೀಡಿದೆ.

ವಿಚಾರ ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲವೇನೋ? ಆದರೆ, ಇದರ ಬೆನ್ನಿಗೆ ಕೇಂದ್ರ ಸರ್ಕಾರ Make in India ಯೋಜನೆಯ ಅಡಿಯಲ್ಲಿ ’NAMASTE’ ಎಂಬ ಹೆಸರಿನ ವಿಡಿಯೋ ಕಾನ್ಪರೆನ್ಸ್ ಅಪ್ಲಕೇಷನ್ ಒಂದನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಹರಿದಾಡಲು ಆರಂಭಿಸಿದೆ.

ಸತ್ಯವೇನು?

ನಮಸ್ತೆ ವಿಡಿಯೋ APP ಸುದ್ದಿ ಸದ್ದು ಮಾಡುತ್ತಿದ್ದಂತೆ ಇದರ ಸತ್ಯಾಸತ್ಯತೆ ಅರಿಯಲು ಮುಂದಾದರೆ ಲಭ್ಯವಾದ ಮಾಹಿತಿ ಬೇರೊಂದು ಕಥೆಯನ್ನು ಹೇಳುತ್ತಿದೆ. Namaste ಎಂಬುದು ಅದೊಂದು ಖಾಸಗಿ ಕಂಪೆನಿ. ಕೇಂದ್ರ ಕಚೇರಿ ಮುಂಬೈನಲ್ಲಿದೆ. ಇದು ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವ ಆನ್‌ಲೈನ್ ಕಂಪೆನಿಯಾಗಿದ್ದು, ಸರ್ಕಾರ ಈ ಕಂಪೆನಿಯನ್ನೋ ಅಥವಾ ಆಪ್‌ ಅನ್ನೊ ಪ್ರಾರಂಭಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತಿರುವ ಸರ್ಕಾರಿ ಪೋರ್ಟಲ್‌ಗಳಾದ MyGovIndia ಮತ್ತು PIB ಈ ಸುದ್ದಿಯನ್ನು ನಿರಾಕರಿಸಿದೆ. ಅಷ್ಟೇ ಅಲ್ಲ “ಇದೊಂದು ನಕಲಿ ಸುದ್ದಿ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟೀಕರಣ ನೀಡಿದೆ. ಅಲ್ಲದೆ, ಇಂತಹ ಸುಳ್ಳು ಸುದ್ದಿಗಳಿಂದ ಜನ ಆದಷ್ಟು ದೂರ ಇರಿ ಸುರಕ್ಷಿತವಾಗಿರಿ” ಎಂದು ತಿಳಿಸಿದೆ.


ಇದನ್ನೂ ಓದಿ: Fact Check: ಆಸ್ಟ್ರೇಲಿಯಾದ ಸೂಪರ್‌ ಮಾರ್ಕೆಟ್‌ಗಳಲ್ಲಿ ಚೀನಿಯರಿಗೆ ಪ್ರವೇಶವಿಲ್ಲವೇ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...