HomeUncategorizedಆರ್ಥಿಕ ಕುಸಿತ: ಮೋದಿಗೆ ಕಳಂಕ ತಪ್ಪಿಸಲು ಬಲಿಪಶು ಆಗುತ್ತಿದ್ದಾರಾ ನಿರ್ಮಲಾ ಸೀತಾರಾಮನ್!?

ಆರ್ಥಿಕ ಕುಸಿತ: ಮೋದಿಗೆ ಕಳಂಕ ತಪ್ಪಿಸಲು ಬಲಿಪಶು ಆಗುತ್ತಿದ್ದಾರಾ ನಿರ್ಮಲಾ ಸೀತಾರಾಮನ್!?

- Advertisement -
- Advertisement -

ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಿ, ಪ್ರಮುಖ ಜವಾಬ್ದಾರಿ ಹೊತ್ತಿರುವ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದ ನಾಲ್ಕೇ ತಿಂಗಳಿಗೆ ಆರ್ಥಿಕ ಕುಸಿತದ ಮೇನ್ ವಿಲನ್' ರೂಪದಲ್ಲಿ ಎಲ್ಲರೆದುರು ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆ ಗಂಭೀರವಾಗಿ ಪತನವಾಗಲು, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಗಿಂತಲೂ ಪ್ರಧಾನಿ ಮೋದಿಯವರ ಯಡವಟ್ಟು ಆರ್ಥಿಕ ನೀತಿಗಳು ಕಾರಣಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೊನ್ನೆಯಷ್ಟೇ ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ತರ್ ಡುಪ್ಲೋ ತುಂಬಾ ಹಿಂದೆಯೇ ಕರಾಳ ದಿನಗಳಿಗೆ ಕಾರಣವಾಗುತ್ತದೆಂದು ಅಂದಾಜಿಸಿದ್ದ `ನೋಟು ಅಮಾನ್ಯೀಕರಣ’ವನ್ನು ಹೇರುವುದರ ಹಿಂದೆ ಅರ್ಥ ಸಚಿವ ಜೇಟ್ಲಿ, ಆರ್.ಬಿ.ಐ. ಆಡಳಿತ ಮಂಡಳಿಗೆ ಯಾವ ಪಾತ್ರವೂ ಇರಲಿಲ್ಲ. ಅಷ್ಟರ ಮಟ್ಟಿಗೆ ಮೋದಿಯವರ ನೀತಿಗಳು ಇವತ್ತಿನ ಆರ್ಥಿಕ ದುಸ್ಥಿತಿಗೆ ಕಾರಣ. ಆದರೆ ಈಗ ಪರಿಸ್ಥಿತಿಯನ್ನು ಎತ್ತ ತಿರುಗಿಸಲಾಗುತ್ತಿದೆಯೆಂದರೆ, ಈ ಸಮಸ್ತ ಕುಸಿತಕ್ಕೆ ನಾಲ್ಕು ತಿಂಗಳ ಹಿಂದಷ್ಟೇ ಹಣಕಾಸು ಇಲಾಖೆಯ ಹೊಣೆ ಹೊತ್ತ ನಿರ್ಮಲಾ ಸೀತಾರಾಮನ್ ಖಳನಾಯಕಿಯಾಗಿ ಬಿಂಬಿತವಾಗುತ್ತಿದ್ದಾರೆ. ನಿರ್ಮಲಾ ಕೂಡಾ, ಆರ್ಥಿಕ ಕುಸಿತದ ಕುರಿತಾಗಿ ಕೇಳಿಬರುತ್ತಿರುವ ಟೀಕೆಗಳನ್ನು ವೈಯಕ್ತಿಕವಾಗಿ ಸ್ವೀಕರಿಸಿ `ಅಗ್ರೆಸಿವ್’ ಆಗಿ ಪ್ರತಿಕ್ರಿಯಿಸುತ್ತಿರೋದು, ಇಡೀ ರಂಗವೇದಿಕೆಯಿಂದ ಹಿಂದೆ ಸರಿಯಲು ಮೋದಿಗೆ ಅನುವು ಮಾಡಿಕೊಡುತ್ತಿದೆ. ಸ್ವತಃ ಮೋದಿ ಅಭಿಮಾನಿಗಳು, ಮೋದಿಯನ್ನು ಹಾಡಿ ಹೊಗಳಿದ್ದ ದೊಡ್ಡದೊಡ್ಡ ಉದ್ಯಮಿಗಳು ನಿರ್ಮಲಾರನ್ನೇ ಟಾರ್ಗೆಟ್ ಮಾಡಿ ಟೀಕೆಗಳನ್ನು ಸುರಿಸುತ್ತಿದ್ದಾರೆ.

ನೋ ಡೌಟ್, ವಿತ್ತ ಸಚಿವೆಯಾಗಿ ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಗೆ ಅವರೇ ಉತ್ತರದಾಯಿ ಆಗುತ್ತಾರೆ. ಟೀಕೆಗಳೂ ಅವರಿಗೇ ಸಲ್ಲುತ್ತವೆ. ಆದರೆ ಕಳೆದ ಬಿಜೆಪಿ ಅವಧಿಯಲ್ಲಿ ಪರಿಸ್ಥಿತಿ ಹೀಗೇ ಇತ್ತಾ? ಕಡೇಪಕ್ಷ ಹಣಕಾಸು ಸಚಿವರ ಜೊತೆ ಚರ್ಚಿಸಿಯೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತೇ? ಈ ಪ್ರಶ್ನೆಗಳಿಗೆ ಉತ್ತರ ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಕುಸಿತ ಶುರುವಾಗಿ, ದೇಶ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ ಅದಕ್ಕೆ ಕಾರಣರಾದವರು ಹಿನ್ನೆಲೆಗೆ ಸರಿದು, ಹುದ್ದೆಯ ಕಾರಣಕ್ಕೆ ನಿರ್ಮಲಾ ಸೀತಾರಾಮನ್ ಅವರನ್ನು ಮುಂದೆ ಬಿಡುತ್ತಿರೋದು ನೋಡಿದರೆ, ಬಲಿಪಶು ಮಾಡಲಾಗುತ್ತಿದೆಯಾ? ಎಂಬ ವಾದವೀಗ ಮುನ್ನೆಲೆಗೆ ಬರುತ್ತಿದೆ. ಅಂದಹಾಗೆ, ಕಳೆದ ಸರ್ಕಾರದ ಅವಧಿಯಲ್ಲೂ ಮನೋಹರ್ ಪಾರಿಕ್ಕರ್ ರಕ್ಷಣಾ ಮಂತ್ರಿಯಾಗಿದ್ದರೂ, ರಕ್ಷಣಾ ಇಲಾಖೆಯನ್ನೇ ಬೈಪಾಸ್ ಮಾಡಿದ್ದ ಪ್ರಧಾನಿ ಮಂತ್ರಿ ಕಾರ್ಯಾಲಯ ಏಕಪಕ್ಷೀಯವಾಗಿ ವ್ಯವಹಾರ ಕುದುರಿಸಿದ್ದ `ರಫೇಲ್ ಖರೀದಿ’ ಹಗರಣ ಮಾಧ್ಯಮಗಳ ಮೂಲಕ ದೊಡ್ಡ ಬಿರುಗಾಳಿ ಎಬ್ಬಿಸುವ ಹೊತ್ತಿಗೆ ಸರಿಯಾಗಿ ನಿರ್ಮಲಾ ಸೀತಾರಾಮನ್ ಅವರನ್ನು ಪಾರಿಕ್ಕರ್ ಜಾಗದಲ್ಲಿ ಪ್ರತಿಷ್ಠಾಪಿಸಿ, ಕಳಂಕ ಮೆತ್ತಿಸಿಕೊಳ್ಳುವಂತೆ ಮಾಡಿದ್ದು ಕಾಕತಾಳೀಯವೇ ಇರಬಹುದು!

ಪೂರ್ಣ ಪ್ರಮಾಣದ ಹಣಕಾಸು ಸಚಿವೆಯಾಗಿ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಂಡ ಘಳಿಗೆಯಲ್ಲೇ ಆರ್ಥಿಕತೆ ಇಳಿಜಾರಿನತ್ತ ಮುಖ ಮಾಡಿತ್ತು. ಭಾರತದ ಆರ್ಥಿಕ ಬೆಳವಣಿಗೆ ಕಳೆದ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಶೇ.6ಕ್ಕೆ ಕುಸಿದಿದ್ದರೆ, 2018-19ನೇ ಸಂಪೂರ್ಣ ವಿತ್ತ ವರ್ಷದಲ್ಲಿ ಅದರ ಸರಾಸರಿ ವೇಗ ಶೇ.6.8ಕ್ಕೆ ಕ್ಷೀಣಗೊಂಡಿತ್ತು. ಇನ್ನು 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಚಾರಿತ್ರಿಕ ಕನಿಷ್ಠ ಶೇ.5ರತ್ತ ದಾಪುಗಾಲಿಡಲು ಶುರು ಮಾಡಿತ್ತು. ಅಂತೆಯೇ ದೇಶದ ನಿರುದ್ಯೋಗ ದರ 2017ರಲ್ಲೇ ಶೇ.6ಕ್ಕೆ ದಾಖಲೆಯ ಕುಸಿತ ಕಂಡಿತ್ತು. ಅಂತಹ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದು!

ಇನ್ನು ನಿರ್ಮಲಾ ಸೀತಾರಾಮನ್ ಜುಲೈನಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಿದರು. ಆಗ ಹಿಂದಿದ್ದ ಹಲವು ಸಂಪ್ರದಾಯಗಳನ್ನು ಮುರಿದರು. ದಿನಬೆಳಗಾದರೆ ದೇವರು, ಹಬ್ಬ ಹರಿದಿನಗಳ ಬಗ್ಗೆ ಟ್ವೀಟ್ ಮಾಡುವ ನಿರ್ಮಲಾ ಸೀತಾರಾಮನ್ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಆರ್ಥಿಕತಜ್ಞರಾದ ಶಮಿಕಾ ರವಿ ಮಾತನಾಡಿ, ಭಾರತ ಆರ್ಥಿಕತೆಯ ಕುಸಿತ ಗಂಭೀರ ಪರಿಣಾಮ ಬೀರಲಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸಲು ಪ್ರಮುಖ ತಂತ್ರಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಲೋಚಿಸಬೇಕಿದೆ ಎಂದು ಹೇಳಿದ್ದರು. ಬಿಜೆಪಿ ಎಂ.ಪಿ ಸುಬ್ರಮಣಿಯನ್ ಸ್ವಾಮಿ ಕೂಡ ನಿರ್ಮಲಾ ಸೀತಾರಾಮನ್ ಅವರ ಕಾರ್ಯ ವೈಖರಿಯನ್ನು ಖಂಡಿಸಿದ್ದರು. ನೆಲಕಚ್ಚುತ್ತಿರುವ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಮೋದಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಸೂಕ್ಷ್ಮ ಚಿಂತನೆಯ ಅವಶ್ಯಕತೆಯ ಬಗ್ಗೆ ತಿಳಿಸಿದ್ದರು.

ಪ್ರತಿಷ್ಠಿತ ಜೆಎನ್.ಯು ವಿವಿಯಲ್ಲಿ ಎಂಎ, ಎಂ.ಫಿಲ್  (ಎಕನಾಮಿಕ್ಸ್) ಪಡೆದಿದ್ದ ನಿರ್ಮಲಾ, ಓದು-ವಿದ್ಯಾರ್ಹತೆ-ಅನುಭವದ ನಿಟ್ಟಿನಲ್ಲಿ ಹಣಕಾಸು ಸಚಿವೆಯ ಹುದ್ದೆಗೆ ಲಾಯಕ್ಕಾದವರೇ ಇರಬಹುದು. ಆದರೆ, ದೇಶದ ಆರ್ಥಿಕ ಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿತ್ತೆಂದರೆ, (ಹದಗೆಡಿಸಲಾಗಿತ್ತೆಂದರೆ) ತುಂಬಾ ದೃಢ ಮತ್ತು ದೂರಾಲೋಚನೆಯ ನಿರ್ಧಾರಗಳಿಂದ ಮಾತ್ರ ಅದನ್ನು ನಿಭಾಯಿಸಲು ಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು. ಆದರೆ ನಿರ್ಮಲಾಗೆ ಅಂತಹ ಸ್ವಾತಂತ್ರ್ಯವೂ ಇರಲಿಲ್ಲ, ಆ ಬಗೆಯ ಇಚ್ಛೆ ನಿರ್ಮಲಾ ಅವರಿಗೂ ಇದ್ದಂತಿರಲಿಲ್ಲ. ಅವರು ಮಂಡಿಸಿದ ಮೊದಲ ಬಜೆಟ್ಟಿನ ಕ್ರಮಗಳು ಹಾಗೂ ಆ ನಂತರದಲ್ಲಿ ಅವರೇ ಆ ಕ್ರಮಗಳಿಂದ ತೆಗೆದುಕೊಂಡ ಯೂ-ಟರ್ನ್ ಗಳು ಇದಕ್ಕೆ ಸಾಕ್ಷಿ. ಈಗ ಅವರ ಪತಿಯೇ ಅವರನ್ನು ಟೀಕಿಸುವಂತಹ ಸಂದರ್ಭ ಬಂದೊದಗಿದೆ. ದುರಂತವೆಂದರೆ, ಈಗಲೂ ಕೇಂದ್ರದ ಬಿಜೆಪಿ ಸರ್ಕಾರದ ಬಳಿ ಸಮರ್ಪಕ ಪರಿಹಾರದ ನೀಲನಕ್ಷೆಗಳು ಗೋಚರಿಸುತ್ತಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...