ಭಾರತೀಯ ನೌಕಾಪಡೆ ಹಡಗಿನಿಂದ ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರಕ್ಕೆ ತಳ್ಳಿದ ಆರೋಪ: ತನಿಖೆ ಪ್ರಾರಂಭಿಸಿದ ವಿಶ್ವಸಂಸ್ಥೆ

ಭಾರತೀಯ ನೌಕಪಡೆಯ ಹಡಗಿನಿಂದ ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರಕ್ಕೆ ತಳ್ಳಲಾಗಿದೆ ಎಂಬ ಆರೋಪದ ಕುರಿತು ತಜ್ಞರು ತನಿಖೆ ಪ್ರಾರಂಭಿಸಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ಕುರಿತು ಮೇ 15ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ “ಕಳೆದ ವಾರ ರೋಹಿಂಗ್ಯಾ ನಿರಾಶ್ರಿತರನ್ನು ಭಾರತೀಯ ನೌಕಾಪಡೆಯ ಹಡಗಿನಿಂದ ಅಂಡಮಾನ್ ಬಳಿ ಬಲವಂತವಾಗಿ ಸಮುದ್ರಕ್ಕೆ ತಳ್ಳಲಾಗಿದೆ ಎಂಬ ವಿಶ್ವಾಸಾರ್ಹ ವರದಿಗಳಿಂದ ಗಾಬರಿಗೊಂಡ ವಿಶ್ವಸಂಸ್ಥೆಯ ತಜ್ಞರು, ಇಂತಹ ‘ಊಹಿಸಲಾಗದ’ ಮತ್ತು ‘ಒಪ್ಪಿಕೊಳ್ಳಲಾಗದ’ ಕೃತ್ಯದ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ” ಎಂದಿದೆ. … Continue reading ಭಾರತೀಯ ನೌಕಾಪಡೆ ಹಡಗಿನಿಂದ ರೋಹಿಂಗ್ಯಾ ನಿರಾಶ್ರಿತರನ್ನು ಸಮುದ್ರಕ್ಕೆ ತಳ್ಳಿದ ಆರೋಪ: ತನಿಖೆ ಪ್ರಾರಂಭಿಸಿದ ವಿಶ್ವಸಂಸ್ಥೆ