ಸತತ ಮೂರನೇ ತಿಂಗಳು ಭಾರತದ ರಫ್ತು ಪ್ರಮಾಣದಲ್ಲಿ ಕುಸಿತವಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಶೇ 0.8 ರಷ್ಟು ಕುಸಿತ ಕಂಡು ಬಂದಿದೆ ಎಂದು ಶನಿವಾರ ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.
ಒಂದು ನಿರ್ದಿಷ್ಟ ಅವಧಿಯಲ್ಲಿ ದೇಶವೊಂದರ ಆಮದು ಪ್ರಮಾಣ ರಫ್ತು ಪ್ರಮಾಣಕ್ಕಿಂತ ಹೆಚ್ಚು ಇರುವ ಸ್ಥಿತಿಯನ್ನು ವ್ಯಾಪಾರ ಕೊರತೆ (Trade Deficit) ಎನ್ನುತ್ತಾರೆ. ಇದನ್ನು ನೆಗೆಟಿವ್ ಬ್ಯಾಲೆನ್ಸ್ ಆಫ್ ಟ್ರೇಡ್ ಎಂದೂ ಕೂಡ ಕರೆಯುತ್ತಾರೆ.
ಆಮದಿನಲ್ಲಿ ಹೆಚ್ಚಳವಾಗಿದ್ದು, ಒಟ್ಟು ವ್ಯಾಪಾರ ಕೊರತೆ (Trade Deficit) 15.71 ಬಿಲಿಯನ್ ಡಾಲರ್‌ಗೆ ಹಿಗ್ಗಿದೆ. 2020ರ ಡಿಸೆಂಬರ್‌ನಲ್ಲಿ ರಫ್ತು ಪ್ರಮಾಣ 26.89 ಬಿಲಿಯನ್ ಡಾಲರ್ ಇದ್ದರೆ, 2019ರ ಡಿಸೆಂಬರ್‌ನಲ್ಲಿ ಅದು 27.11 ಬಿಲಿಯನ್ ಡಾಲರ್ ಆಗಿತ್ತು. ಅಂದರೆ ಶೇ 0.8ರಷ್ಟು ಕುಸಿತವಾಗಿದೆ. ಜುಲೈ ನಂತರ ಈಗ ಡಿಸೆಂಬರ್‌ನಲ್ಲಿ ಕಂಡು ಬಂದ ವ್ಯಾಪಾರ ಕೊರತೆ ಹೆಚ್ಚಿನ ಪ್ರಮಾಣದ್ದಾಗಿದೆ.
ಇದೇ ಸಮಯದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಾಲದ ಅಧಿಕೃತ ಅಂಕಿಅಂಶಗಳ ಪ್ರಕಾರ, 2020-21ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ, ಭಾರತದ ಒಟ್ಟು ಸಾಲ ಶೇಕಡಾ 5.6 ರಷ್ಟು ಹೆಚ್ಚಳಗೊಂಡು 107.04 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಇದನ್ನೂ ಓದಿ: ಸೆಪ್ಟಂಬರ್ ತಿಂಗಳವರೆಗೆ ಕೇಂದ್ರ ಸರ್ಕಾರ ಮಾಡಿದ ಒಟ್ಟು ಸಾಲ 107.04 ಲಕ್ಷ ಕೋಟಿ!


