ಒಳ ಮೀಸಲಾತಿ: ಸಿವಿಲ್ ಸೇವೆಗಳ ನೇಮಕಾತಿ ಹೊಸ ಅಧಿಸೂಚನೆಗೆ ತಡೆ

ರಾಜ್ಯ ನಾಗರಿಕ (ಸಿವಿಲ್) ಸೇವೆಗಳಲ್ಲಿನ ಹುದ್ದೆಗಳ ನೇಮಕಾತಿಗಾಗಿ ಹೊಸ ಅಧಿಸೂಚನೆ ಹೊರಡಿಸುವುದನ್ನು ತಡೆ ಹಿಡಿಯುವಂತೆ ಸಿಬ್ಬಂದಿ ಹಾಗೂ ಅಡಳಿತ ಸುಧಾರಣೆ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳ ನೇಮಕಾತಿಗೆ ಹೊಸದಾಗಿ ಅಧಿಸೂಚನೆ ಹೊರಡಿಸದಂತೆ 2024ರ ನವೆಂಬರ್ 25ರಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ, ಕೆಲವು ನೇಮಕಾತಿ ಪ್ರಾಧಿಕಾರಗಳು ಈ ಸೂಚನೆಯನ್ನು ಉಲ್ಲಂಘಿಸುತ್ತಿವೆ ಎನ್ನಲಾಗಿದೆ. ಹಾಗಾಗಿ, ಆದೇಶ ಉಲ್ಲಂಘಿಸಿ ಹೊಸ ಅಧಿಸೂಚನೆ ಹೊರಡಿಸುವ ನೇಮಕಾತಿ ಪ್ರಾಧಿಕಾರಗಳ ವಿರುದ್ದ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು … Continue reading ಒಳ ಮೀಸಲಾತಿ: ಸಿವಿಲ್ ಸೇವೆಗಳ ನೇಮಕಾತಿ ಹೊಸ ಅಧಿಸೂಚನೆಗೆ ತಡೆ