ಬಿಜೆಪಿಯಲ್ಲಿ ಅನಪೇಕ್ಷಿತವಾಗಿ ಉಂಟಾದ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (BAMUL) ಚುನಾವಣೆ ಕಾಂಗ್ರೆಸ್ ಪರವಾಗಿರುವ ಸಾಧ್ಯತೆಯಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಬಿಜೆಪಿಯೊಳಗೆ ಆಂತರಿಕ ಕಲಹ
ಬಿಜೆಪಿ ನಾಯಕರಾದ ಎಸ್.ಟಿ.ಸೋಮಶೇಖರ್ ಮತ್ತು ಎಸ್.ಆರ್.ವಿಶ್ವನಾಥ್ ಅವರ ನಡುವಿನ ವಿವಾದವು ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಸೋಮಶೇಖರ್ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದರೊಂದಿಗೆ ಕೊನೆಗೊಂಡಿತ್ತು.
ಮಾಜಿ ಸಂಸದ, ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಸೇರಿದಂತೆ ಮೂವರು ಬಮುಲ್ ನಿದೇಶಕರು ಅವಿರೋಧವಾಗಿ ಆಯ್ಕೆಯಾದರೆ, ಉಳಿದ 11 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಈ ಮಧ್ಯೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹೋದರನೂ ಆಗಿರುವ ಡಿ.ಕೆ. ಸುರೇಶ್ ಅವರು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಊಹಿಸಲಾಗಿದೆ.
ಈ ನಡುವೆ, ವಿಶ್ವನಾಥ್ ಮತ್ತು ಸೋಮಶೇಖರ್ ಅವರ ಬೆಂಬಲಿಗರ ನಡುವಿನ ಘರ್ಷಣೆಯು ರಾಜ್ಯ ಬಿಜೆಪಿಯೊಳಗಿನ ತೀವ್ರ ಆಂತರಿಕ ಒಳಜಗಳವನ್ನು ಬಹಿರಂಗಪಡಿಸಿದೆ. ಸೋಮಶೇಖರ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ, ವಿಶ್ವನಾಥ್ ಅವರ ಬೆಂಬಲಿಗರು ಅವರನ್ನು ಪಕ್ಷದಿಂದ ತಕ್ಷಣ ಹೊರಹಾಕಬೇಕೆಂದು ಒತ್ತಾಯಿಸಿದ್ದಾರೆ.
ಸಹಕಾರಿ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳು ಪಕ್ಷದ ಆಧಾರದ ಮೇಲೆ ನಡೆಯುವುದಿಲ್ಲವಾದರೂ, ಗ್ರಾಮೀಣ ಮತದಾರರಲ್ಲಿ ಒಕ್ಕೂಟಗಳ ಪ್ರಭಾವವನ್ನು ಪರಿಗಣಿಸಿ ಅವು ಅಪಾರ ರಾಜಕೀಯ ಮಹತ್ವವನ್ನು ಹೊಂದಿವೆ. ಜೊತೆಗೆ ರಾಜ್ಯದ ಸಹಕಾರಿ ವ್ಯವಸ್ಥೆಯಲ್ಲಿ ಇದು ನಾಯಕನ ರಾಜಕೀಯ ಸ್ಥಾನಮಾನದ ಮಾಪಕವಾಗಿಯೂ ಕಾರ್ಯನಿರ್ವಹಿಸುತ್ತವೆ.
ಬಮುಲ್ ಮಂಡಳಿಯ 14 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಡಿ.ಕೆ. ಸುರೇಶ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಕೆಎಂಎಫ್ ಅಧ್ಯಕ್ಷ ಹುದ್ದೆಗೆ ಅವರು ಆಕಾಂಕ್ಷಿಯೆ ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದ್ದಾರೆ.
“ಈಗ ನನ್ನ ಗಮನ ಬಮುಲ್ ಅನ್ನು ಪ್ರಾಮಾಣಿಕ ಮತ್ತು ಸಮರ್ಥ ವ್ಯಕ್ತಿಗಳು ಮುನ್ನಡೆಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು” ಎಂದು ಸುರೇಶ್ ಅವರು ಹೇಳಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಎರಡರ ಮೇಲೂ ದಾಳಿ ಮಾಡಿದ ಅವರು, “ಅವರು ‘ಸತ್ಯ ಹರಿಶ್ಚಂದ್ರ’ರಂತೆ ವರ್ತಿಸುತ್ತಿದ್ದರೂ, ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯದಂತಹ ಅನೈತಿಕ ರಾಜಕೀಯ ತಂತ್ರಗಳನ್ನು ರೂಪಿಸಿದ ಪಕ್ಷಗಳು ಇವು” ಎಂದು ಹೇಳಿದ್ದಾರೆ. ಬಿಜೆಪಿಯೊಳಗೆ ಆಂತರಿಕ ಕಲಹ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಆಂಧ್ರಪ್ರದೇಶ| ಮೂರು ವರ್ಷದ ದಲಿತ ಬಾಲಕಿಯನ್ನು ಅತ್ಯಾಚಾರಗೈದು ಭೀಕರ ಕೊಲೆ
ಆಂಧ್ರಪ್ರದೇಶ| ಮೂರು ವರ್ಷದ ದಲಿತ ಬಾಲಕಿಯನ್ನು ಅತ್ಯಾಚಾರಗೈದು ಭೀಕರ ಕೊಲೆ

