ಮೇ 29ರಿಂದ 31ರವರೆಗೆ ಚೆನ್ನೈನ ತಮಿಳುನಾಡು ಸರ್ಕಾರಿ ಸಂಗೀತ ಕಾಲೇಜಿನಲ್ಲಿ ನಡೆಯಬೇಕಿದ್ದ ಇಸ್ರೇಲಿ ಚಲನಚಿತ್ರೋತ್ಸವವನ್ನು ಮುಂದೂಡಿರುವುದಾಗಿ ‘ಇಂಡೋ ಸಿನಿ ಅಪ್ರಿಸಿಯೇಷನ್ ಫೌಂಡೇಶನ್ (ಐಸಿಎಎಫ್)’ ಸೋಮವಾರ (ಮೇ 26) ತಿಳಿಸಿದೆ.
ಗಾಝಾದಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ನರಮೇಧವನ್ನು ಖಂಡಿಸಿ ಬರಹಗಾರರ ಗುಂಪುಗಳು, ರಾಜಕಾರಣಿಗಳು ಮತ್ತು ಹೋರಾಟಗಾರರು ಸೇರಿದಂತೆ ವಿವಿಧ ಕಡೆಗಳಿಂದ ‘ಚಲನಚಿತ್ರೋತ್ಸವ’ ಆಯೋಜನೆಗೆ ತೀವ್ರ ವಿರೋಧ ವ್ಯಕ್ತವಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
“ಕೆಲವು ಅನಿರೀಕ್ಷಿತ ಮತ್ತು ಅನಿವಾರ್ಯ ಸಂದರ್ಭಗಳಿಂದಾಗಿ” ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಐಸಿಎಎಫ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ತಿಳಿಸಿದೆ.
ಭಾರತದಲ್ಲಿ ಇಸ್ರೇಲಿ ಚಲನಚಿತ್ರೋತ್ಸವ ರದ್ದಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮೊದಲು, ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌ಎಫ್‌ಡಿಸಿ) 2024ರ ಆಗಸ್ಟ್ 21 ಮತ್ತು 22 ಮುಂಬೈನ ರಾಷ್ಟ್ರೀಯ ಚಲನಚಿತ್ರ ವಸ್ತುಸಂಗ್ರಹಾಲಯದಲ್ಲಿ (ಎಮ್‌ಎಂಐಸಿ) ನಡೆಯಬೇಕಿದ್ದ ಚಲನಚಿತ್ರೋತ್ಸವವನ್ನು ರದ್ದುಗೊಳಿಸಿತ್ತು.
ಭಾರತ ಪ್ಯಾಲೆಸ್ಟೈನ್ ಸಾಲಿಡಾರಿಟಿ ಫೋರಂ ಆಯೋಜಿಸಿದ್ದ ಆನ್‌ಲೈನ್ ಅರ್ಜಿ ಮತ್ತು ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಈ ಕ್ರಮ ಕೈಗೊಳ್ಳಲಾಗಿತ್ತು.
ಗಾಝಾದಲ್ಲಿ ಇಸ್ರೇಲ್ ಆಕ್ರಮಣ ನಡೆಸುತ್ತಿರುವ ಹಿನ್ನೆಲೆ, ಆ ದೇಶದ ಚಲಚಿತ್ರೋತ್ಸವ ಆಯೋಜಿಸದಂತೆ ಅನೇಕ ಬರಹಗಾರರ ಗುಂಪುಗಳು, ರಾಜಕಾರಣಿಗಳು ಮತ್ತು ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಸಂಸದ ಸಸಿಕಾಂತ್ ಸೆಂಥಿಲ್ ಪ್ರಮುಖರು ಕಾರ್ಯಕ್ರಮ ರದ್ದುಗೊಳಿಸುವಂತೆ ಐಸಿಎಎಫ್ ಅನ್ನು ಒತ್ತಾಯಿಸಿದ್ದರು. ತಮಿಳುನಾಡು ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದರು.
ಮೇ 26 ರಂದು ಹೇಳಿಕೆ ಬಿಡುಗಡೆ ಮಾಡಿದ್ದ ತಮಿಳುನಾಡು ಪ್ರಗತಿಪರ ಬರಹಗಾರರು, ಕಲಾವಿದರ ಸಂಘ (TNPWAA ಚಲನಚಿತ್ರೋತ್ಸವ ರದ್ದುಗೊಳಿಸುವಂತೆ ಐಸಿಎಎಫ್‌ಗೆ ಒತ್ತಾಯಿಸಿತ್ತು. ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ನಿರಂತರ ದಾಳಿ ನಡೆಸುತ್ತಿರುವ ಈ ಸಮಯದಲ್ಲಿ ಇದು ರಾಜಕೀಯವಾಗಿ ಸೂಕ್ಷ್ಮವಲ್ಲದ ಉತ್ಸವವಾಗಿದೆ ಎಂದು ಕರೆದಿತ್ತು.
ನಕ್ಸಲ್ ಬಸವರಾಜ್ ಮೃತದೇಹವನ್ನು ಕುಟುಂಬಕ್ಕೆ ನೀಡದೆ ಬಲತ್ಕಾರವಾಗಿ ತಾವೇ ಅಂತ್ಯಕ್ರಿಯೆ ನಡೆಸಿದ ಛತ್ತೀಸ್‌ಗಢ ಪೊಲೀಸ್


