ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಆಕ್ರಮಣ : ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳು ಧ್ವಂಸ

ಇಸ್ರೇಲಿ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪಟ್ಟಣಗಳಿಗೆ ನುಗ್ಗಿ ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳನ್ನು ಕೆಡವಿ ಹಾಕಿದೆ ಎಂದು ಸುದ್ದಿ ಸಂಸ್ಥೆ ಅಲ್‌-ಜಝೀರಾ ವರದಿ ಮಾಡಿದೆ. ಇದು ಗಾಝಾ ಕದನ ವಿರಾಮದ ಮೂಲಕ ಇಸ್ರೇಲ್ ಪ್ಯಾಲೆಸ್ತೀನಿಯರ ಮೇಲಿನ ಆಕ್ರಮಣ ನಿಲ್ಲಿಸಿಲ್ಲ ಎಂಬುವುದಕ್ಕೆ ಸಾಕ್ಷಿಯಾಗಿದೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ತೀನಿಯರ ಮೇಲಿನ ನಿರಂತರ ದಾಳಿ ಮುಂದುವರಿದಿದೆ. ಸೋಮವಾರ ಪೂರ್ವ ಜೆರುಸಲೆಮ್‌ನಲ್ಲಿ ಧ್ವಂಸ ಕಾರ್ಯವನ್ನು ನಡೆಸುತ್ತಿದ್ದಾಗ ಇಸ್ರೇಲಿ ಸೈನಿಕರು ಪ್ಯಾಲೆಸ್ತೀನಿಯರ ಮೇಲೆ ಸ್ಟನ್ ಗ್ರೆನೇಡ್ ಮತ್ತು ಅಶ್ರುವಾಯು ಸಿಡಿಸಿದ್ದಾರೆ ಎಂದು ಅಲ್‌-ಜಝೀರಾ … Continue reading ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಆಕ್ರಮಣ : ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳು ಧ್ವಂಸ