ಆಕ್ರಮಿತ ಪಶ್ಚಿಮ ದಂಡೆ ಸ್ವಾಧೀನ ಮಸೂದೆಗೆ ಇಸ್ರೇಲ್ ಸಂಸತ್ತು ಪ್ರಾಥಮಿಕ ಅನುಮೋದನೆ

ಆಕ್ರಮಿತ ಪಶ್ಚಿಮ ದಂಡೆಯನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳುವ ಅಥವಾ ಕಾನೂನು ಹೇರುವ ವಿವಾದಾತ್ಮಕ ಮಸೂದೆಗೆ ಇಸ್ರೇಲ್ ಸಂಸತ್ (ನೆಸೆಟ್) ಬುಧವಾರ (ಅ.22) ಪ್ರಾಥಮಿಕ ಅನುಮೋದನೆ ನೀಡಿದೆ. “ಜೂಡಿಯಾ ಮತ್ತು ಸಮರಿಯಾದಲ್ಲಿ ಇಸ್ರೇಲಿ ಸಾರ್ವಭೌಮತ್ವದ ಅನ್ವಯ, 2025” ಎಂಬ ಶೀರ್ಷಿಕೆಯ ಈ ಮಸೂದೆಯನ್ನು ನೋಮ್ ಪಕ್ಷವನ್ನು ಪ್ರತಿನಿಧಿಸುವ ತೀವ್ರ ಬಲಪಂಥೀಯ ಸಂಸದ ಅವಿ ಮಾವೋಜ್ ಅವರು ಸಂಸತ್‌ನಲ್ಲಿ ಮಂಡಿಸಿದ್ದರು. ಇಸ್ರೇಲಿ ಸಂಸತ್ತಿನ 120 ಶಾಸಕರಲ್ಲಿ 25-24 ಮತಗಳಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವು ಮಸೂದೆಯನ್ನು … Continue reading ಆಕ್ರಮಿತ ಪಶ್ಚಿಮ ದಂಡೆ ಸ್ವಾಧೀನ ಮಸೂದೆಗೆ ಇಸ್ರೇಲ್ ಸಂಸತ್ತು ಪ್ರಾಥಮಿಕ ಅನುಮೋದನೆ