ಒಡಿಶಾದ ಪುರಿಯ ಭಗವಾನ್ ಜಗನ್ನಾಥನ ರಥಯಾತ್ರೆಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿದ್ದು, ಒರ್ವ ಭಕ್ತ ಸಾವನ್ನಪ್ಪಿ; 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಸ್ವಸ್ಥಗೊಂಡಿದ್ದ ಭಕ್ತರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಗಂಭೀರವಾಗಿ ಗಾಯಗೊಂಡ ಭಕ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮೃತ ಭಕ್ತನನ್ನು ಗುರುತು ಇನ್ನೂ ಒತ್ತೆಯಾಗಿಲ್ಲ, ಆತ ಒಡಿಶಾದ ಹೊರಗಿನವನು ಎಂದು ಹೇಳಲಾಗಿದೆ. ಲಭ್ಯ ಮಾಹಿತಿ ಪ್ರಕಾರ, ಬಲಭದ್ರ ದೇವರ ರಥ ಎಳೆಯುವ ವೇಳೆ ಈ ಅವಘಡ ಸಂಭವಿಸಿದೆ. ರಥ ಎಳೆಯುವ ಸಮಯದಲ್ಲಿ, ಒಬ್ಬ ವ್ಯಕ್ತಿಯು ನೆಲಕ್ಕೆ ಬಿದ್ದು ನಂತರ ಸಾವನ್ನಪ್ಪಿದನು. ಘಟನೆಯ ನಂತರ, ಸಣ್ಣ ಕಾಲ್ತುಳಿತದಂತಹ ಸ್ಥಿತಿಯು ಉಂಟಾಗಿದ್ದು, 15 ಜನರು ಗಾಯಗೊಂಡಿದ್ದಾರೆ. ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಅವರು ಮೃತರ ಕುಟುಂಬಕ್ಕೆ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಜಗನ್ನಾಥ ವಾರ್ಷಿಕ ರಥಯಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ದಿನದಂದು, ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ತಮ್ಮ ತಾಯಿಯ ಚಿಕ್ಕಮ್ಮ ಗುಂಡಿಚಾ ಅವರ ದೇವಸ್ಥಾನಕ್ಕೆ ಪ್ರಯಾಣ ಮಾಡುವಾಗ, ಜಗನ್ನಾಥನು ಪುರಿಯಲ್ಲಿ ಅನೇಕ ರೀತಿಯ ಭಕ್ಷ್ಯಗಳನ್ನು ಸೇವಿಸಿದ ನಂತರ ಅನಾರೋಗ್ಯಕ್ಕೆ ಒಳಗಾಗುತ್ತಾನೆ; ಆದರೆ, ಸ್ನಾನ ಪೂರ್ಣಿಮೆಯಂದು ಸ್ನಾನ ಮಾಡಿದ ನಂತರ, ಅವನ ಆರೋಗ್ಯವು ಸುಧಾರಿಸುತ್ತದೆ ಮತ್ತು ರಥಯಾತ್ರೆಯಲ್ಲಿ ಅವನು ತನ್ನ ಒಡಹುಟ್ಟಿದವರ ಜೊತೆಗೆ ಚಿಕ್ಕಮ್ಮನ ಬಳಿಗೆ ಹೋಗುತ್ತಾನೆ ಎಂದು ಜನ ನಂಬಿದ್ದಾರೆ.


