Homeಮುಖಪುಟಅಸ್ಸಾಂ ಸೌರ ಯೋಜನೆ: ಭೂಕಬಳಿಕೆ ಆರೋಪ, ಬಲವಂತದಿಂದ 20,000 ಜನರ ಸ್ಥಳಾಂತರ - ಕೇಂದ್ರದ ಮಧ್ಯಪ್ರವೇಶಕ್ಕೆ...

ಅಸ್ಸಾಂ ಸೌರ ಯೋಜನೆ: ಭೂಕಬಳಿಕೆ ಆರೋಪ, ಬಲವಂತದಿಂದ 20,000 ಜನರ ಸ್ಥಳಾಂತರ – ಕೇಂದ್ರದ ಮಧ್ಯಪ್ರವೇಶಕ್ಕೆ ಜಮಿಯತ್ ಕರೆ

- Advertisement -
- Advertisement -

ಗುವಾಹಾಟಿ: ಅಸ್ಸಾಂನಲ್ಲಿ ಹೆಚ್ಚುತ್ತಿರುವ ಮಾನವೀಯ ದುರಂತಕ್ಕೆ ಕೇಂದ್ರ ಸರ್ಕಾರ ತಕ್ಷಣ ಧ್ವನಿ ನೀಡಬೇಕು. ಧುಬ್ರಿ ಮತ್ತು ಗೋಲ್ಪಾರಾ ಜಿಲ್ಲೆಗಳಲ್ಲಿ ನಡೆದ ತೆರವು ಕಾರ್ಯಾಚರಣೆಗಳಿಂದ ಸಾವಿರಾರು ಮುಸ್ಲಿಂ ಕುಟುಂಬಗಳು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ ಎಂದು ಜಮಿಯತ್ ಉಲಮಾ-ಎ-ಹಿಂದ್ (JUH) ನ ಸತ್ಯಶೋಧನಾ ವರದಿಯು ಬಹಿರಂಗಪಡಿಸಿದೆ. ಇದು ‘ಮಾನವೀಯ ಮತ್ತು ಸಾಂವಿಧಾನಿಕ ಬಿಕ್ಕಟ್ಟು’ ಎಂದು JUH ಬಣ್ಣಿಸಿದ್ದು, ತಕ್ಷಣದ ಕೇಂದ್ರದ ಮಧ್ಯಪ್ರವೇಶಕ್ಕೆ ಆಗ್ರಹಿಸಿದೆ.

JUH ಅಧ್ಯಕ್ಷ ಮೌಲಾನಾ ಮಹ್ಮದ್ ಮದನಿ ಅವರಿಗೆ ಸಲ್ಲಿಸಲಾದ ವರದಿಯು ಅಸ್ಸಾಂ ಪರಿಸ್ಥಿತಿಯನ್ನು ‘ಅಮಾನವೀಯ’ ಮತ್ತು ಇದು ವಸಾಹತುಶಾಹಿ ಕಾಲದ ಮುತ್ತಿಗೆಯ ದಮನಕಾರಿ ಸ್ವರೂಪವನ್ನು ನೆನಪಿಸುತ್ತದೆ ಎಂದು ವಿವರಿಸಿದೆ.

ಅಸ್ಸಾಂನಲ್ಲಿ ಆಘಾತಕಾರಿ ಪೊಲೀಸ್ ದೌರ್ಜನ್ಯ: ಜುಲೈ 17ರಂದು ಗೋಲ್ಪಾರಾ ಜಿಲ್ಲೆಯ ಅಶುಡುಬಿ ಗ್ರಾಮದಲ್ಲಿ ಹಸಿವಿನಿಂದ ಬಳಲುತ್ತಿದ್ದ, ನಿರಾಯುಧ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಜುಲೈ 12ರ ತೆರವು ಕಾರ್ಯಾಚರಣೆಯಿಂದ ನಿರಾಶ್ರಿತನಾಗಿದ್ದ ಈ ಬಾಲಕ, ಆಹಾರಕ್ಕಾಗಿ ಪ್ರತಿಭಟಿಸುತ್ತಿದ್ದಾಗ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ‘ಇದು ಮಾರಣಾಂತಿಕ ಮತ್ತು ಸಂಪೂರ್ಣ ಅಸಮರ್ಥನೀಯ ಪ್ರತಿಕ್ರಿಯೆ’ ಎಂದು JUH ವರದಿ ಹೇಳಿದೆ.

ಆಘಾತಕಾರಿ ವರದಿ: ಅಸ್ಸಾಂನಲ್ಲಿ ಭಾರೀ ಸ್ಥಳಾಂತರದ ಜೊತೆಗೆ ಪರಿಹಾರ ಕಾರ್ಯಾಚರಣೆಗಳ ಮೇಲೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಧುಬ್ರಿ ಜಿಲ್ಲೆಯ ಚರಕಾತ್ರಾ, ಸಂತೋಷಪುರ ಮತ್ತು ಚರವಬಕ್ರಾ ಗ್ರಾಮಗಳಿಂದ 5,700 ನೋಂದಾಯಿತ ಮತದಾರರು ಸೇರಿದಂತೆ 20,000ಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು JUH ವರದಿ ತಿಳಿಸಿದೆ. ಬ್ರಹ್ಮಪುತ್ರ ನದಿಯ ಮರಳದಿಬ್ಬಗಳಲ್ಲಿ ಶುದ್ಧ ನೀರು, ಆಶ್ರಯ, ಮತ್ತು ನೈರ್ಮಲ್ಯವಿಲ್ಲದೆ ಲಕ್ಷಾಂತರ ಜನರು ಪರದಾಡುತ್ತಿದ್ದಾರೆ. ಈ ಪ್ರದೇಶಗಳ ಮೇಲೆ ಅಸ್ಸಾಂ ಸರ್ಕಾರವು ನಿರ್ದಯವಾಗಿ ಮುತ್ತಿಗೆಯನ್ನು ಹೇರಿದೆ ಎಂದು ನಿಯೋಗ ಗಂಭೀರ ಆರೋಪ ಮಾಡಿದೆ. ಕೈಪಂಪ್‌ಗಳು, ಶೌಚಾಲಯಗಳನ್ನು ನಾಶಪಡಿಸಿದ್ದು ಮಾತ್ರವಲ್ಲದೆ, ಪರಿಹಾರ ತಲುಪಿಸುತ್ತಿದ್ದ ಎನ್‌ಜಿಒಗಳು ಮತ್ತು ಜಮಿಯತ್ ತಂಡಕ್ಕೂ ಪ್ರವೇಶ ನಿರಾಕರಿಸಲಾಗಿದೆ ಎಂದು ವರದಿ ಹೇಳಿದೆ.

ಸೌರಶಕ್ತಿ ಯೋಜನೆ ನೆಪದಲ್ಲಿ ಕಾರ್ಪೊರೇಟ್ ಬೆಂಬಲಿತ ಭೂಕಬಳಿಕೆ!: ಜಮಿಯತ್‌ನ ವರದಿಯ ಪ್ರಕಾರ, ಈ ಕಾರ್ಯಾಚರಣೆಗಳ ನಿಜವಾದ ಉದ್ದೇಶ ‘ಬಡ ಮುಸ್ಲಿಮರನ್ನು ಸ್ಥಳಾಂತರಿಸುವುದು ಮತ್ತು ಭೂಮಿಯನ್ನು ಕಬಳಿಸುವುದು’ ಮಾತ್ರವಾಗಿದೆ. ಈ ಸ್ಥಳಾಂತರವು ಪರಿಸರ ಅಥವಾ ಅಭಿವೃದ್ಧಿಯ ಉದ್ದೇಶದಿಂದ ನಡೆಯುತ್ತಿಲ್ಲವೆಂದು ಅದು ಹೇಳಿದೆ. ‘ಮತದಾರರ ಗುರುತಿನ ಚೀಟಿಗಳು ಮತ್ತು ಭೂ ದಾಖಲೆಗಳನ್ನು ಹೊಂದಿರುವ ಭಾರತೀಯ ನಾಗರಿಕರಿಗೆ ವಿದೇಶಿಯರು ಎಂದು ಹಣೆಪಟ್ಟಿ ಕಟ್ಟಿ ಅಸ್ಸಾಂನ ಮುಸ್ಲಿಮರನ್ನು ಅಮಾನವೀಯಗೊಳಿಸುವ ಮತ್ತು ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ದೊಡ್ಡ ಅಭಿಯಾನದ ಭಾಗವಾಗಿ ಈ ಸ್ಥಳಾಂತರ ನಡೆಯುತ್ತಿದೆ ಎಂದು JUH ವರದಿ ತೀವ್ರವಾಗಿ ಖಂಡಿಸಿದೆ.

JUH ವರದಿಯ ತುರ್ತು ಬೇಡಿಕೆಗಳು:

ಜಮಿಯತ್ ಉಲಮಾ-ಎ-ಹಿಂದ್ (JUH) ಕೇಂದ್ರ ಸರ್ಕಾರಕ್ಕೆ ಈ ಕೆಳಗಿನ ನಿರ್ಣಾಯಕ ಬೇಡಿಕೆಗಳನ್ನು ಮುಂದಿಟ್ಟಿದೆ:

*ಅಸ್ಸಾಂ ಬಿಕ್ಕಟ್ಟಿಗೆ ಕೇಂದ್ರದ ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹ

*ಸ್ಥಳಾಂತರಗೊಂಡ ಕುಟುಂಬಗಳಿಗೆ ತಕ್ಷಣದ ಮಾನವೀಯ ನೆರವು ಒದಗಿಸುವುದು

*ನೆರವು ಸಂಸ್ಥೆಗಳು ಮತ್ತು ಪತ್ರಕರ್ತರಿಗೆ ತಕ್ಷಣ ಪ್ರವೇಶ ರಸ್ತೆಗಳನ್ನು ಪುನಃ ತೆರೆಯುವುದು

*ಜುಲೈ 17ರ ಗುಂಡಿನ ದಾಳಿಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ನ್ಯಾಯಾಂಗ ಕ್ರಮ ಜರುಗಿಸುವುದು

*ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು

*ಸ್ಥಳಾಂತರಗೊಂಡ ವ್ಯಕ್ತಿಗಳಿಗೆ ಪರ್ಯಾಯ ಭೂಮಿಯಲ್ಲಿ ಸಂಪೂರ್ಣ ಪುನರ್ವಸತಿ ಕಲ್ಪಿಸುವುದು

*ಎಲ್ಲಾ ಮುಂದಿನ ತೆರವು ಕಾರ್ಯಾಚರಣೆಗಳನ್ನು ತಕ್ಷಣ ನಿಲ್ಲಿಸಿ ಮತ್ತು ‘ಬಾಂಗ್ಲಾದೇಶಿ’ ಎಂಬ ತಪ್ಪು ಹಣೆಪಟ್ಟಿಯನ್ನು ಹಿಂತೆಗೆದುಕೊಳ್ಳುವುದು

*ತೆರವು ಕಾರ್ಯಾಚರಣೆಗಳು ಮತ್ತು ಪೊಲೀಸ್ ಅತಿರೇಕಗಳ ಬಗ್ಗೆ ಸಮಗ್ರ ನ್ಯಾಯಾಂಗ ವಿಚಾರಣೆಗೆ ಆದೇಶಿಸುವುದು

JUH ಪ್ರಧಾನ ಕಾರ್ಯದರ್ಶಿ ಮೌಲಾನಾ ಹಕೀಮುದ್ದೀನ್ ಖಾಸ್ಮಿ ನೇತೃತ್ವದ ನಿಯೋಗವು ಅಸ್ಸಾಂನ ಮುಸ್ಲಿಮರ ವಿರುದ್ಧದ ‘ಉದ್ದೇಶಿತ ಅಭಿಯಾನ’ವನ್ನು ಖಂಡಿಸಿದೆ. ಈ ವಿಷಯವನ್ನು ರಾಷ್ಟ್ರೀಯ ವೇದಿಕೆಗಳು, ನ್ಯಾಯಾಂಗ ಮತ್ತು ನಾಗರಿಕ ಸಮಾಜಕ್ಕೆ ಕೊಂಡೊಯ್ಯಲು ಜಮಿಯತ್ ತಂಡ ದೃಢ ಪ್ರತಿಜ್ಞೆ ಮಾಡಿದೆ. ‘ಇದು ಸ್ಥಳೀಯ ದುರಂತವಲ್ಲ, ರಾಷ್ಟ್ರೀಯ ತುರ್ತುಸ್ಥಿತಿ. ನ್ಯಾಯ ದೊರೆಯುವವರೆಗೂ ನಾವು ಹೋರಾಡುತ್ತೇವೆ’ ಎಂದು JUH ಪ್ರತಿನಿಧಿಯೊಬ್ಬರು ಘೋಷಿಸಿದ್ದಾರೆ.

UAPA ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಬಾಂಬೆ ಹೈಕೋರ್ಟ್; ಕಾನೂನು ಹೋರಾಟಕ್ಕೆ ಭಾರಿ ಹಿನ್ನಡೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ

ಖ್ಯಾತ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ (82 ವರ್ಷ) ಅವರು ಬುಧವಾರ (ಜನವರಿ 7, 2026) ತಡರಾತ್ರಿ ಪುಣೆಯಲ್ಲಿರುವ ತಮ್ಮ ಮನೆಯಲ್ಲಿ ಅಲ್ಪಕಾಲದ ಅನಾರೋಗ್ಯದ ನಂತರ ನಿಧನರಾದರು. ಈ ಕುರಿತು ಗಾಡ್ಗೀಳ್ ಅವರ...

ಅಪರಾಧದ ಸ್ವರೂಪ ಏನೇ ಇರಲಿ, ತ್ವರಿತ ವಿಚಾರಣೆಯ ಹಕ್ಕು ಅನ್ವಯಿಸುತ್ತದೆ: ಸುಪ್ರೀಂ ಕೋರ್ಟ್

ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕು ಅಪರಾಧದ ಗಂಭೀರತೆ ಅಥವಾ ಸ್ವರೂಪವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಪುನರುಚ್ಚರಿಸಿದೆ. 2002 ರ ಹಣ ವರ್ಗಾವಣೆ ತಡೆ ಕಾಯ್ದೆಯ...