ಮೇ 7 ರಂದು ಆಪರೇಷನ್ ಸಿಂಧೂರ ಪ್ರಾರಂಭವಾದ ನಂತರ ಜಮ್ಮು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಗಡಿ ಜಿಲ್ಲೆಗಳಲ್ಲಿ ಪಾಕಿಸ್ತಾನಿ ಪಡೆಗಳ ಮಾರ್ಟರ್ ಮತ್ತು ಫಿರಂಗಿ ಶೆಲ್ ದಾಳಿಯಲ್ಲಿ ಕನಿಷ್ಠ 31 ಶಾಲೆಗಳು ಹಾನಿಗೊಳಗಾಗಿವೆ ಎಂದು ವರದಿ ಹೇಳಿದೆ. ಜಮ್ಮು ಕಾಶ್ಮೀರ | ಪಾಕಿಸ್ತಾನ
ಜಮ್ಮುವಿನ ಅವಳಿ ಗಡಿ ಜಿಲ್ಲೆಗಳು ಪಾಕಿಸ್ತಾನಿ ಶೆಲ್ ದಾಳಿಯಿಂದ ಹೆಚ್ಚು ಹಾನಿಗೊಳಗಾದವು ಎಂದು ಅದು ಹೇಳಿದೆ. ಪೂಂಚ್‌ನಲ್ಲಿ 13 ಮತ್ತು ರಾಜೌರಿಯಲ್ಲಿ 3 ಜನರು ಸೇರಿದಂತೆ ಕನಿಷ್ಠ 16 ಜನರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ವಸತಿ ಮನೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಸೇರಿದಂತೆ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ.
ಪೂಂಚ್‌ನ ಮುಖ್ಯ ಶಿಕ್ಷಣ ಅಧಿಕಾರಿ (ಸಿಇಒ) ಇಫ್ತಿಕರ್ ಹುಸೇನ್ ಶಾ ಮಾತನಾಡಿ, ಜಿಲ್ಲೆಯ 23 ಶಾಲೆಗಳು ಶೆಲ್ ದಾಳಿಗೆ ತುತ್ತಾಗಿವೆ. 23 ಶಾಲೆಗಳಲ್ಲಿ, ಒಂದು ಹೈಯರ್ ಸೆಕೆಂಡರಿ ಶಾಲೆ ಮತ್ತು ಒಂದು ಮಧ್ಯಮ ಶಾಲೆ ಸಂಪೂರ್ಣವಾಗಿ ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ.
ಶೆಲ್ ದಾಳಿ ಪುನರಾರಂಭವಾಗುವ ಭಯದಿಂದಾಗಿ, ಅನೇಕ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುತ್ತಿಲ್ಲ. “ಸುಮಾರು 30% ದಷ್ಟು ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗುತ್ತಿದ್ದಾರೆ” ಎಂದು ಇಫ್ತಿಕರ್ ಹೇಳಿದ್ದು, ಗಡಿ ಪ್ರದೇಶಗಳಲ್ಲಿ ಹಾಜರಾತಿ ಇನ್ನೂ ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
“ನಾವು ವಾಟ್ಸಾಪ್ ಗುಂಪುಗಳ ಮೂಲಕ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದೇವೆ ಮತ್ತು ತರಗತಿಗಳಿಗೆ ಮತ್ತೆ ಸೇರಲು ಒತ್ತಾಯಿಸುತ್ತಿದ್ದೇವೆ. ಸಹಜ ಸ್ಥಿತಿ ಮರಳುತ್ತಿದ್ದಂತೆ ಹಾಜರಾತಿ ಹೆಚ್ಚಾಗುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಹಾನಿಗೊಳಗಾದ ಶಾಲೆಗಳ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲ, ಅವರು ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆ” ಎಂದು ಹೇಳಿದ್ದಾರೆ.
ಶೆಲ್ ದಾಳಿಯಲ್ಲಿ ಜಿಲ್ಲೆಯಲ್ಲಿ ಏಳು ಶಾಲೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗೆ ಹಾನಿಯಾಗಿದೆ ಎಂದು ರಾಜೌರಿ ಸಿಇಒ ಚೌಧರಿ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ವಿದ್ಯಾರ್ಥಿಗಳು ಶಾಲೆಗಳಿಗೆ ಹಿಂತಿರುಗುತ್ತಿದ್ದಾರೆ ಮತ್ತು ದಿನ ಕಳೆದಂತೆ ಹಾಜರಾತಿ ಹೆಚ್ಚುತ್ತಿದೆ ಎಂದು ಅವರು ಹೇಳಿದ್ದು, ಹಾನಿಗೊಳಗಾದ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿಲ್ಲ ಎಂದು ಹೇಳಿದ್ದಾರೆ.
“ಶಾಲೆಗಳ ಕಿಟಕಿಗಳು ಮತ್ತು ಕಿಟಕಿಗಳ ಗಾಜುಗಳು ಮುರಿದು ಬಿರುಕು ಬಿಟ್ಟಿವೆ. ಒಂದು ಮಧ್ಯಮ ಶಾಲೆಯ ಒಂದು ಕೋಣೆಗೆ ಶೆಲ್ ದಾಳಿಯಿಂದ ಹಾನಿಯಾಗಿದೆ” ಎಂದು ಅವರು ಹೇಳಿದ್ದು, ಹಾನಿಗೊಳಗಾದ ಶಾಲೆಗಳನ್ನು ನವೀಕರಿಸಲಾಗುವುದು ಎಂದು ಹೇಳಿದ್ದಾರೆ. ಜಮ್ಮು ಕಾಶ್ಮೀರ | ಪಾಕಿಸ್ತಾನ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 6 ತಿಂಗಳೊಳಗೆ ಕೇಡರ್ ಪರಿಶೀಲನೆ ನಡೆಸಿ: ಸುಪ್ರೀಂಕೋರ್ಟ್ ಆದೇಶ
ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 6 ತಿಂಗಳೊಳಗೆ ಕೇಡರ್ ಪರಿಶೀಲನೆ ನಡೆಸಿ: ಸುಪ್ರೀಂಕೋರ್ಟ್ ಆದೇಶ


Useless.Bakwas.