ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗಮನಾರ್ಹ ಅಜೇಯ ಶತಕದೊಂದಿಗೆ ಭಾರತವನ್ನು ಮೊದಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಭಾರತೀಯ ಕ್ರಿಕೆಟ್ ತಾರೆ ಜೆಮಿಮಾ ರೊಡ್ರಿಗಸ್, ಪಂದ್ಯದ ನಂತರದ ಭಾಷಣದಲ್ಲಿ ಸಾರ್ವಜನಿಕವಾಗಿ ಯೇಸುವಿಗೆ ಧನ್ಯವಾದ ಹೇಳಿದ ನಂತರ ಬಲಪಂಥೀಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಆನ್‌ಲೈನ್ ದ್ವೇಷಕ್ಕೆ ಗುರಿಯಾಗಿದ್ದಾರೆ.
ಪ್ಲೇಯರ್ ಆಪ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದ 25 ವರ್ಷದ ಬ್ಯಾಟರ್, ಸೆಮಿಫೈನಲ್ ಗೆಲುವಿನ ನಂತರ ತನ್ನ ಧಾರ್ಮಿಕ ನಂಬಿಕೆಗೆ ಕೃತಜ್ಞತೆ ಸಲ್ಲಿಸಿದರು. “ನಾನು ಯೇಸುವಿಗೆ ಧನ್ಯವಾದ ಹೇಳಲು ಬಯಸುತ್ತೇನೆ; ಇದನ್ನು ನಾನೇ ಮಾಡಲು ಸಾಧ್ಯವಾಗಲಿಲ್ಲ” ಎಂದು ಅವರು ಪಂದ್ಯದ ಬಳಿಕ ನಡೆದ ಸಮಾರಂಭದಲ್ಲಿ ಹೇಳಿದರು. “ಆಟ ಆಡುವಾಗ ನಾನು ಬೈಬಲ್ ಗ್ರಂಥವನ್ನು ಉಲ್ಲೇಖಿಸುತ್ತಿದ್ದೆ, ಸ್ಥಿರವಾಗಿ ನಿಲ್ಲಲು ಮತ್ತು ದೇವರು ನನಗಾಗಿ ಹೋರಾಡುತ್ತಾನೆ” ಎಂದು ಹೇಳಿದ್ದರು.
ಜೆಮಿಮಾ ಅವರ ವೈಯಕ್ತಿಕ ನಂಬಿಕೆಗಳನ್ನು ಪ್ರತಿಬಿಂಬಿಸುವ ಹೇಳಿಕೆಗಳಿಗೆ ಆನ್‌ಲೈನ್‌ನಲ್ಲಿ ಬಲಪಂಥೀಯವಾದಿ ಬಳಕೆದಾರರಿಂದ ನಿಂದನೆ ಎದುರಿಸುವಂತಾಗಿದೆ. “ಅವರು ಕ್ರಿಶ್ಚಿಯನ್ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾರೆ, ಮತಾಂತರಗಳಲ್ಲಿ ತೊಡಗಿದ್ದಾರೆ” ಎಂದು ಆರೋಪಿಸಿದರು.
ಹಲವಾರು ಬಲಪಂಥೀಯ ಖಾತೆಗಳಲ್ಲಿ, ಜೆಮಿಮಾ ಅವರು ತಮ್ಮ ತಂದೆ ಇವಾನ್ ರಾಡ್ರಿಗಸ್ ಅವರೊಂದಿಗೆ ಚರ್ಚ್ ಕಾರ್ಯಕ್ರಮಗಳಿಗೆ ಹಾಜರಾಗುತ್ತಿರುವ ಹಳೆಯ ವೀಡಿಯೊಗಳನ್ನು ಈಗ ವೈರಲ್ ಮಾಡಲಾಗುತ್ತಿದೆ. ಅವರು ಸಮುದಾಯ ಸಂಪರ್ಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Young Jemimah Rodrigues at a Christian evangelical gathering,led by her father, Ivan Rodrigues, a pastor. As a speaker approaches her on stage,she dramatically collapses and writhes, mimicking spiritual possession or being slain in the Spirit😭😂….Rice bag par convert hue log😂 pic.twitter.com/nHVzqUmHJl
— Ashutosh (@Ashutosh1274) October 31, 2025
“ಜೆಮಿಮಾ ರಾಡ್ರಿಗಸ್ ಕ್ರಿಕೆಟ್ ಅನ್ನು ಸಾಮೂಹಿಕ ಮತಾಂತರಕ್ಕೆ ಸಾಧನವಾಗಿ ಬಳಸಿದ್ದಾರೆ. ಧಾರ್ಮಿಕ ಮತಾಂತರಕ್ಕಾಗಿ ಅಂತಹ ನಾಟಕ ಮಾಡಿದ ಒಬ್ಬ ಭಾರತೀಯನನ್ನು ನನಗೆ ತೋರಿಸಿ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಅವರನ್ನು ‘ಪಾಕಿಸ್ತಾನಿ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರ ಪ್ರತಿ’ ಎಂದು ಕರೆದು ಅಪಹಾಸ್ಯ ಮಾಡಿದ್ದಾರೆ. ಹಿಂದೂ ಆಟಗಾರರು ವಿಜಯಗಳ ನಂತರ ‘ಭಗವಾನ್ ಅಥವಾ ಭಗವದ್ಗೀತೆಯನ್ನು ಎಂದಿಗೂ ಪ್ರಾರ್ಥಿಸುವುದಿಲ್ಲ’ ಎಂದು ಆರೋಪಿಸಿದ್ದಾರೆ.
ಕೆಲವು ಬಳಕೆದಾರರು ರಾಡ್ರಿಗಸ್ ಕ್ರಿಶ್ಚಿಯನ್ ಪ್ರಾರ್ಥನಾ ಸೇವೆಯಲ್ಲಿ ಭಾಗವಹಿಸುತ್ತಿರುವ ಹಳೆಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಅವಹೇಳನಕಾರಿ ಶೀರ್ಷಿಕೆ ನೀಡಿದ್ದು, “ಅಕ್ಕಿ ಚೀಲ ಮತಾಂತರ” ದಂತಹ ನಿಂದನಾತ್ಮಕ ಪದ ಬಳಸಿದ್ದಾರೆ. ಭಾರತದ ವಿಶ್ವಕಪ್ ಗೆಲುವಿನ ನಂತರ ಕೆಲವರು ಅವರ ನಂಬಿಕೆಯನ್ನು ಅಪಹಾಸ್ಯ ಮಾಡಿದ್ದಾರೆ. ‘ಯೇಸು ಫೈನಲ್‌ನಲ್ಲಿ ಸಹಾಯ ಮಾಡಲು ಬರಲಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
Just a few cricket match wins and this country forgets terror attacks
Just a few cricket match wins and this country forgets cricketers doing shady things
I don't know if it's the greatness of this country or its foolishness pic.twitter.com/RJxRa5u2Gp
— Tushar ॐ♫₹ (@Tushar_KN) October 31, 2025
ಆನ್‌ಲೈನ್ ಪ್ರತಿಕ್ರಿಯೆಯ ಹೊರತಾಗಿಯೂ, ರಾಡ್ರಿಗಸ್ ಅವರ ಆಟವು ಭಾರತದ ಅಭಿಯಾನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಅವರ ಅಜೇಯ ಶತಕವು ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು, ಅಲ್ಲಿ ಅವರು ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ತಮ್ಮ ಮೊದಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದರು.
299 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ, ಲಾರಾ ವೋಲ್ವಾರ್ಡ್ ಅವರ ಹೋರಾಟದ ಶತಕದ ಹೊರತಾಗಿಯೂ 246 ರನ್‌ಗಳಿಗೆ ಆಲೌಟ್ ಆಯಿತು.
ಉತ್ತರ ಪ್ರದೇಶ| ದಲಿತ ಸಮುದಾಯದ ಕೃಷಿ ಕಾರ್ಮಿಕನನ್ನು ಥಳಿಸಿ ಕೊಂದ ಭೂಮಾಲೀಕ


