Homeಕರ್ನಾಟಕಬದುಕು ಸಂಸ್ಥೆಯಿಂದ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್: ಅರ್ಜಿ ಕರೆ

ಬದುಕು ಸಂಸ್ಥೆಯಿಂದ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್: ಅರ್ಜಿ ಕರೆ

ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಂಚಿನಲ್ಲಿರುವವರು ಈ ಕ್ಷೇತ್ರಗಳಲ್ಲಿ ಇರಬೇಕೆಂಬುದು ಬದುಕು ಸಂಸ್ಥೆಯ ಉದ್ದೇಶ: ಮುರಳಿ ಮೋಹನ್‌ ಕಾಟಿ

- Advertisement -
- Advertisement -

ಬದುಕು ಸೆಂಟರ್‌ ಫಾರ್‌ ಲೈವ್ಲಿಹುಡ್ಸ್‌ ಲರ್ನಿಂಗ್ ಸಂಸ್ಥೆಯಿಂದ ಸಂವಹನ ಮತ್ತು ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ‘ಕ್ರಿಯಾಶೀಲ ಮಾಧ್ಯಮ’ ಹೆಸರಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ನಡೆಸಲಾಗುತ್ತಿದ್ದು ಅರ್ಜಿ ಆಹ್ವಾನಿಸಲಾಗಿದೆ.

ವರದಿಗಾರಿಕೆ, ಸುದ್ದಿ ಸಂಪಾದನೆ, ಭಾಷಾಂತರದ ಜೊತೆಗೆ ಕಿರುತೆರೆ-ಹಿರಿತೆರೆಗಳಿವೆ ಸೃಜನಶೀಲ ಸ್ಕ್ರಿಪ್ಟ್‌ ಬರವಣಿಗೆಯ ಪ್ರಾಯೋಗಿಕ ಕಲಿಕೆ, ಕ್ಯಾಮೆರಾ ನಿರ್ವಹಣೆ, ವಿಡಿಯೊ ಎಡಿಟಿಂಗ್‌ (ಪ್ರಿಂಟ್‌ ವೆಬ್‌) ಬಗ್ಗೆ ಅನುಭವಿ ತಂತ್ರಜ್ಞರಿಂದ ತರಗತಿ, ಮೊಬೈಲ್ ಜರ್ನಲಿಸಂ, ವೆಬ್‌ಸೈಟ್‌, ಸೋಷಿಯಲ್ ಮೀಡಿಯಾ ಹ್ಯಾಂಡ್ಲಿಂಗ್‌, ಆನ್‌‌ಲೈನ್‌ ಜರ್ನಲಿಸಂನ ಆಧುನಿಕ ತಂತ್ರಜ್ಞಾನ ಕೌಶಲಗಳ ತರಬೇತಿ, ಇಂಗ್ಲಿಷ್ ಭಾಷೆ, ಭಾಷಾಂತರ ಕಲೆ, ಬರವಣಿಗೆ ಮುಂತಾದ ಕೌಶಲಗಳ ಕುರಿತು ಬೆಳಕು ಚೆಲ್ಲಲಾಗುವುದು, ಮಾಧ್ಯಮ ಸಂಸ್ಥೆಗಳು ಮತ್ತು ಮನೋರಂಜನ ಕ್ಷೇತ್ರದಲ್ಲಿ ಇಂಟರ್‌ಶಿಪ್‌, ಉದ್ಯೋಗವಕಾಶ ಕಲ್ಪಿಸಲಾಗುವುದು ಬದುಕು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪತ್ರಿಕೆ, ಸುದ್ದಿವಾಹಿನಿ, ಮನರಂಜನಾ ವಾಹಿನಿ, ಸಿನಿಮಾ, ಡಿಜಿಟಲ್ ಮೀಡಿಯಾದಲ್ಲಿ ತೊಡಗಿಸಿಕೊಳ್ಳಲು ಬಯಸುವವರಿಗೆ ಈ ಕೋರ್ಸ್ ನಡೆಸಲಾಗುತ್ತಿದೆ. ಹೀಗಾಗಲೇ ಯುವತಿಯರ ಪ್ರವೇಶಾತಿ ನಡೆದಿರುವುದರಿಂದ ಕೆಲವೇ ಕೆಲವು ಯುವತಿಯರಿಗೆ ಮಾತ್ರ ಸೀಟುಗಳು ಲಭ್ಯವಿದೆ. ಅಭ್ಯರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ಅನುಗುಣವಾಗಿ ತರಬೇತಿ ಶುಲ್ಕ, ಸೂಕ್ತ ಅಭ್ಯರ್ಥಿಗಳಿಗೆ ವಿಶೇಷ ಸ್ಕಾಲರ್‌ಶಿಪ್, ಫೆಲೋಶಿಪ್‌ಗಳಿಗೆ ಅವಕಾಶವಿದೆ. ಅಗತ್ಯವಿರುವವರಿಗೆ ಉಚಿತ ವಸತಿ ಸೌಕರ್ಯ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಇಂಗ್ಲಿಷ್‌ ಕಲಿಕೆ-ಬಳಕೆಯೊಂದಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಇರಲಿದೆ. ಗೂಗಲ್‌ ಫಾರ್ಮ್ ಮೂಲಕ ಅರ್ಜಿ ಸಲ್ಲಿಸಲು https://forms.gle/NmSpEjkQFpiY998ZA ಲಿಂಕ್‌‌ ಬಳಸಬಹುದು. ಸ್ವವಿವರ ಹಾಗೂ ಅರ್ಜಿಯನ್ನು [email protected]ಗೆ ಇಮೇಲ್‌ ಮಾಡಬಹುದು. ಕಚೇರಿ ವಿಳಾಸ: ಬದುಕು- ಎ ಸೆಂಟರ್‌ ಫಾರ್‌ ಲಿವ್ಲಿಹುಡ್ಸ್‌‌ ಲರ್ನಿಂಗ್ಸ್‌ #136/7, 2ನೇ ಅಡ್ಡರಸ್ತೆ, ಎಲಿಫ್ಯಾಂಟ್‌ ರಸ್ತೆ, ಸೌತ್‌ ಎಂಡ್‌ ಸರ್ಕಲ್, ಲೈಬ್ರರಿ ಹಿಂಭಾಗ, 3ನೇ ಬ್ಲಾಕ್‌, ಜಯನಗರ, ಬೆಂಗಳೂರು- 560011. ಹೆಚ್ಚಿನ ವಿವರಗಳಿಗೆ 9916376954, 9945065060, 99720 89471 ಸಂಪರ್ಕಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್‌ 15 ಕೊನೆಯದಿನವಾಗಿದೆ ಎಂದು ತಿಳಿಸಿದೆ.

‘ನಾನುಗೌರಿ.ಕಾಮ್‌’ನೊಂದಿಗೆ ಮಾತನಾಡಿದ ಬದುಕು ಸಂಸ್ಥೆಯ ಪ್ರೋಗ್ರಾಮ್‌ ಕನ್ವಿನರ್‌ ಮುರಳಿ ಮೋಹನ್‌ ಕಾಟಿ, “ಸಮಾಜದಲ್ಲಿ ಪರಿಣಾಮ ಬೀರುವಂತಹ ಕೋರ್ಸ್‌‌ಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಸ್ಥಿತಿ ಇಲ್ಲವಾಗಿದೆ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅಂಚಿನಲ್ಲಿರುವವರು ಈ ಕ್ಷೇತ್ರಗಳಲ್ಲಿ ಇಲ್ಲ. ಅವರು ಕೂಡ ಈ ಕ್ಷೇತ್ರಗಳಲ್ಲಿ ಕಾಲಿಟ್ಟರೆ ಪರಿಣಾಮ ಬೇರೆಯದ್ದೇ ಆಗಿರುತ್ತದೆ ಎಂಬುದು ಬದುಕು ಸಂಸ್ಥೆಯ ಉದ್ದೇಶವಾಗಿತ್ತು. ಕಳೆದ ಹನ್ನೆರಡು ವರ್ಷಗಳಿಂದ ಬದುಕು ಸಂಸ್ಥೆಯು ಕೆಲಸ ಮಾಡುತ್ತಿದೆ” ಎಂದು ಹೇಳಿದರು.

“ಪತ್ರಿಕೋದ್ಯಮ, ಆಪ್ತಸಮಾಲೋಚನೆ, ವೃತ್ತಿಪರ ಮಾರ್ಗದರ್ಶನ, ತ್ಯಾಜ್ಯ ನಿರ್ವಹಣೆ, ಸುಸ್ಥಿರ ಕೃಷಿ, ಫಿಲ್ಮ್‌ ಮೇಕಿಂಗ್, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಪ್ರತಿವರ್ಷ ಪ್ರತಿ ಕೋರ್ಸ್‌ಗೆ ಇಪ್ಪತ್ತು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತೇವೆ. ಕೃಷಿ ಸಂಬಂಧಿತ ಕೋರ್ಸ್ ತರಗತಿಗೆ ಸೀಮಿತವಾಗಿರುವುದಿಲ್ಲ. ತರಗತಿ ಕಲಿಕೆ ತುಂಬಾ ಕಡಿಮೆ ಇರುತ್ತದೆ. ರೈತರ ಹೊಲಗಳೇ ಕಲಿಕಾ ಕೇಂದ್ರಗಳಾಗಿರುತ್ತವೆ. ಯಶಸ್ವಿಯಾಗಿ ಸುಸ್ಥಿರ ಕೃಷಿ ಮಾಡುತ್ತಿರುವವರಲ್ಲಿಗೆ ಹೋಗಿ ಕಲಿಯಲಾಗುತ್ತದೆ. ಉಳಿದ ತರಗತಿಗಳು ತರಗತಿಯಲ್ಲಿ ನಡೆಯುತ್ತವೆ. ಊಟ, ವಸತಿ ಉಚಿತವಾಗಿ ನೀಡುತ್ತೇವೆ. ಕೋರ್ಸ್ ಶುಲ್ಕವು ಕೂಡ ಕಡಿಮೆ ಇರುತ್ತದೆ. ಅದರಲ್ಲೂ ತುಂಬಾ ಆರ್ಥಿಕವಾಗಿ ಹಿಂದುಳಿದ ಶೇ. 25 ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡುತ್ತೇವೆ” ಎಂದರು.

“ನಾಲ್ಕು ತರಗತಿ ಕೊಠಡಿಗಳಿರುವ ತರಬೇತಿ ಕೇಂದ್ರ ಕಟ್ಟಿದ್ದೇವೆ. ಸ್ಥಳಾವಕಾಶದ ಕೊರತೆಯಿಂದಾಗಿ ಮೊದಲೆಲ್ಲ ಒಂದು ಕೋರ್ಸ್ ಮುಗಿದ ಬಳಿಕ ಮತ್ತೊಂದು ಕೋರ್ಸ್ ನಡೆಸುತ್ತಿದ್ದೆವು. ಈಗ ನಾಲ್ಕು ಕೋರ್ಸ್ ಒಟ್ಟಿಗೆ ನಡೆಯಲಿವೆ” ಎಂದು ಮಾಹಿತಿ ನೀಡಿದರು.

ಇದನ್ನೂ ಓದಿರಿ: ಪುರುಷ ಪ್ರಧಾನ ನೈತಿಕತೆ ಪ್ರಶ್ನಿಸಿ ನಟಿ ಸಮಂತಾ ಪೋಸ್ಟ್‌; ಆರೋಪಗಳಿಗೆ ಸ್ಪಷ್ಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...