Homeಮುಖಪುಟಪತ್ರಕರ್ತರು, ರಣಹದ್ದುಗಳು ಹಾಗೂ ಮತ್ತೊಬ್ಬ ಸಾಲಿಸಿಟರ್ ಜನರಲ್

ಪತ್ರಕರ್ತರು, ರಣಹದ್ದುಗಳು ಹಾಗೂ ಮತ್ತೊಬ್ಬ ಸಾಲಿಸಿಟರ್ ಜನರಲ್

ವಲಸೆ ಕಾರ್ಮಿಕರ ಸಂಕಷ್ಟಗಳ ಕುರಿತು ಸುಪ್ರೀಂಕೋರ್ಟ್ ವಿಚಾರಣೆಯ ವೇಳೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಾಕ್ಷ್ಯ ತಿರುಚುವಿಕೆ, ಅನ್ಯಾಯವಾದ ಆರೋಪಗಳು, ವೃತ್ತಿಗೌರವ  ಮತ್ತು ನ್ಯಾಯ ವ್ಯವಸ್ಥೆಯ ಮೇಲಿನ ದಾಳಿಗಳನ್ನು ಪ್ರಜಾಪ್ರಭುತ್ವವು ಬಹಳ ಬೇಗನೇ ಮರೆಯುವುದು ಸಾಧ್ಯವಿಲ್ಲ.

- Advertisement -
- Advertisement -

ಇಂದು ಪ್ರಪಂಚವು ಭಾರತದತ್ತ ನೋಡಿದಾಗ ಅವರಿಗೆ ಕಾಣುವುದು “ದೇಶ ವಿಭಜನೆಯ ಬಳಿಕದ ಅತ್ಯಂತ ಮಹಾವಲಸೆ”; ಲಕ್ಷಾಂತರ ವಲಸೆ ಕಾರ್ಮಿಕರು, ತಮ್ಮೆಲ್ಲ ಸಾಮಾನು ಸರಂಜಾಮುಗಳನ್ನು ಒಂದೆರಡು ಚೀಲಗಳಲ್ಲಿ ತುಂಬಿಸಿ, ಹಸಿವು, ಹತಾಶೆ, ಮೋಸಹೋದ ಭಾವನೆ ತುಂಬಿದ ನೋಟ ಹೊತ್ತು, ಉರಿಯುವ ಬಿಸಿಲಲ್ಲಿ ನೂರಾರು ಮೈಲಿ ಕಾಲೆಳೆಯುತ್ತಿರುವ ದೃಶ್ಯ.

ಮೂಲ: ಆರ್. ವೈಗೈ, ಅನ್ನಾ ಮ್ಯಾಥ್ಯೂ , ಎಸ್. ದೇವಿಕಾ

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ವಲಸೆ ಕಾರ್ಮಿಕರ ಸಂಕಷ್ಟಗಳ ಕುರಿತ ಸ್ವಯಂಪ್ರೇರಿತ ದೂರಿನ (suo motu petition) ವಿಚಾರಣೆಯು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನೀಡಿದ ಹೇಳಿಕೆಗಳ ನಂಬಲಸಾಧ್ಯವಾದವು ಮತ್ತು ಭಯಾನಕವಾದವುಗಳು.

ಲಕ್ಷಾಂತರ ವಲಸೆ ಕಾರ್ಮಿಕರನ್ನು ಬಾಧಿಸಿ, ಅವರ ಮೂಲಭೂತ ಜೀವನದ ಹಕ್ಕು, ಆತ್ಮಗೌರವ ಮತ್ತು ಬದುಕಿನ ಮೇಲೆ ಭಾರೀ ಪರಿಣಾಮ ಬೀರಿದಂತಹ ಅಭೂತಪೂರ್ವ ಬಿಕ್ಕಟ್ಟಿನ ಕುರಿತು ನ್ಯಾಯಾಲಯದ ಹಿಂದಿನ ಪ್ರತಿಕ್ರಿಯೆಯು ಸಮಾಜದ ಎಲ್ಲಾ ವರ್ಗಗಳಿಂದ ತೀವ್ರವಾದ ಟೀಕೆಗೆ ಗುರಿಯಾಗಿತ್ತು.  ಆದುದರಿಂದ, ನಾಗರಿಕರು ಸುಪ್ರೀಂಕೋರ್ಟ್‌ನ ಈ ಸ್ವಯಂಪ್ರೇರಿತ ವಿಚಾರಣೆಯನ್ನು ಆಶಾವಾದ ಮತ್ತು ಆಳವಾದ ಆತಂಕದಿಂದ ಗಮನಿಸುತ್ತಿದ್ದರು.

ಸಾಲಿಸಿಟರ್ ಜನರಲ್
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ

ಆದರೆ, ಸಾರ್ವಜನಿಕ ಹಿತಾಸಕ್ತಿಯ ಒಂದು ಪ್ರಕರಣದಲ್ಲಿ ಮೆಹ್ತಾರ ಆಕ್ರಮಣಕಾರಕತೆ, ವಾಸ್ತವಾಂಶಗಳ ಅವಗಣನೆ, ವಾದಿಗಳು ಮತ್ತವರ ವಕೀಲರ ಕುರಿತ ದ್ವೇಷಭಾವಗಳು ಇಡೀ ವಿಚಾರಣೆಗೆ ಕಳಂಕ ಹಚ್ಚಿತು ಮಾತ್ರವಲ್ಲ; ಅವರು ಹೊಂದಿರುವ ಹುದ್ದೆಗೆ ಅನಪೇಕ್ಷಿತ ಮತ್ತು ಅಸಾಧುವಾಗಿತ್ತು. ವಲಸೆ ಕಾರ್ಮಿಕರ ಜೊತೆ ಕೆಲಸ ಮಾಡುತ್ತಿರುವ ವಿವಿಧ ಗುಂಪುಗಳನ್ನು ಪ್ರತಿನಿಧಿಸುವ ಹಿರಿಯ ವಕೀಲರ ವಾದಗಳನ್ನು ಆಲಿಸುವ ಇಂಗಿತವನ್ನು ನ್ಯಾಯಪೀಠವು ವ್ಯಕ್ತಪಡಿಸುತ್ತಿದ್ದಂತೆ, ಅದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಮೆಹ್ತಾ, ಆ ಹಿರಿಯ ವಕೀಲರುಗಳಿಗೆ ತಮ್ಮ ಅರ್ಹತೆಯನ್ನು ಅಫಿಡವಿಟ್ ಮೂಲಕ ಸಾಬೀತು ಮಾಡುವಂತೆ ಹೇಳಿದರು ಮಾತ್ರವಲ್ಲ; ಕೋಟಿಗಟ್ಟಲೆ ಸಂಪಾದನೆ ಮಾಡಿ, ತಮ್ಮ ಹವಾನಿಯಂತ್ರಿತ ಕಚೇರಿಗಳ ಆರಾಮದಿಂದ ಹೊರಬರದವರು ಎಂಬ ಮೂದಲಿಕೆಯ ಆರೋಪ ಮಾಡಿದರು.

ವಿಶೇಷವೆಂದರೆ, ಅಪಾರ ಆದಾಯ, ಭಾರೀ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹವಾನಿಯಂತ್ರಿತ ಕಚೇರಿಯ ಆರಾಮವು ಯಾರನ್ನಾದರೂ ಸಾರ್ವಜನಿಕ ಹಿತಾಸಕ್ತಿಯ ಪರವಾಗಿ ವಾದಿಸುವುದರಿಂದ ಅನರ್ಹಗೊಳಿಸುತ್ತದೆ ಎಂದಾದಲ್ಲಿ, ಬಹುಶಃ ಸ್ವತಃ ಮೆಹ್ತಾ ಅವರು ಈ ಪರೀಕ್ಷೆಯಲ್ಲಿ ಪಾರಾಗಲಾರರು.

ಗಾರ್ಡಿಯನ್ ಪ್ರಕಟಿಸಿದ ಚಿತ್ರ

ಎರಡನೆಯದಾಗಿ ಅವರು- “ಆರಾಮಕುರ್ಚಿ ಬುದ್ಧಿಜೀವಿಗಳು”, “ವಿನಾಶದ ಪ್ರವಾದಿಗಳು” ಇತ್ಯಾದಿಯಾಗಿ ಎಲ್ಲರನ್ನೂ ಒಳಗೊಳ್ಳುವಂತೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದುದು ಹಾದಿತಪ್ಪಿಸುವ ಅಸತ್ಯ ಮಾತ್ರವಲ್ಲ; ಅದರಲ್ಲಿ ಸರಕಾರವನ್ನು ಮೆಚ್ಚಿಸುವ ವಾಕ್ಚಾತುರ್ಯ ಕಣ್ಣಿಗೆ ರಾಚುತ್ತದೆ. ಮಾಜಿ ಸುಪ್ರೀಂಕೋರ್ಟ್ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರುಗಳು, ಹಿರಿಯ ವಕೀಲರುಗಳು, ಇತಿಹಾಸಕಾರರು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು, ಪ್ರಾಮಾಣಿಕತೆ ಹೊಂದಿರುವ ಎಲ್ಲಾ ಮಹಿಳೆಯರು ಮತ್ತು ಪುರುಷರನ್ನು ಸಾರಸಗಟಾಗಿ ನಿಂದಿಸಿ, ಅವರು “ರಾಷ್ಟ್ರಕ್ಕೆ ಸೌಜನ್ಯ ತೋರಿಸುತ್ತಿಲ್ಲ”; ಅವರಿಗೆ “ರಾಷ್ಟ್ರದ ಪ್ರಯತ್ನ”ವನ್ನು ಗುರುತಿಸಲು, ಸರಕಾರ ಮತ್ತು ಅದರ ಮಂತ್ರಿಗಳು ಮಾಡುತ್ತಿರುವ ಪ್ರಯತ್ನವನ್ನು ಒಪ್ಪಿಕೊಳ್ಳಲು “ದೇಶಪ್ರೇಮವಿಲ್ಲ” ಇತ್ಯಾದಿ ಆರೋಪಗಳನ್ನು ಮಾಡಿರುವುದು ನ್ಯಾಯಾಲಯದ ಮುಂದಿರುವ ವಿಷಯಗಳಿಂದ ಗಮನವನ್ನು ಬೇರೆಡೆ ಸೆಳೆಯುವ ನೆಪವಲ್ಲದೇ ಬೇರೇನಲ್ಲ!

ಒಂದು ಫ್ಯಾಸಿಸ್ಟ್ ಸರಕಾರಕ್ಕೆ ವ್ಯತಿರಿಕ್ತವಾಗಿ, ಒಂದು ಉಜ್ವಲ ಪ್ರಜಾಪ್ರಭುತ್ವವು ಸರಕಾರದ ಮುಕ್ತವಾದ ಮತ್ತು ಭಯ ರಹಿತ ಟೀಕೆಯನ್ನು ಬಯಸುತ್ತದೆ. ಚುನಾಯಿತ ಸರಕಾದ ಕರ್ತವ್ಯಚ್ಯುತಿಯನ್ನು ಒಬ್ಬ ನಾಗರಿಕ ನೋಡಿ ಬಾಯಿ ಮುಚ್ಚಿ ತೆಪ್ಪಗೆ ಕುಳಿತುಕೊಳ್ಳಬೇಕಾಗಿ ಬಂದರೆ, ಅದು ಸಾಂವಿಧಾನಿಕ ಪ್ರಜಾಪ್ರಭುತ್ವದ ತತ್ವಗಳಿಗೆ ಮಾಡುವ ಅಪಚಾರವಾದೀತು.

ಸರಕಾರವೆಂದರೆ ರಾಷ್ಟ್ರವಲ್ಲ

ಜನರ ಇಚ್ಛೆಯನ್ನು ಅವಲಂಬಿಸಿರುವ ಮತ್ತು ಸೀಮಿತವಾದ ಅಧಿಕಾರಾವಧಿ ಹೊಂದಿರುವ ಒಂದು ಚುನಾಯಿತ ಸರಕಾರದ ಸ್ಥಾನಮಾನವನ್ನು ಒಂದು ರಾಷ್ಟ್ರದ ಸ್ಥಾನಮಾನಕ್ಕೆ ಏರಿಸುವುದು- ಅನುದ್ದೇಶಿತವಾಗಿದ್ದರೂ ಫ್ಯಾಸಿಸ್ಟ್ ಛಾಯೆಯನ್ನು ಹೊಂದಿರುತ್ತದೆ.
“ಸರಕಾರ” ಮತ್ತು “ರಾಷ್ಟ್ರ”ವನ್ನು ಒಂದಕ್ಕೊಂದು ಬದಲಿಸುವುದು ಅಥವಾ ಸಂವಾದಿಯನ್ನಾಗಿ ಮಾಡುವುದು ಅಪಾಯಕಾರಿ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು ಮಾಡುವಂತದ್ದಲ್ಲ.

ದಿ ಗಾರ್ಡಿಯನ್ ಪ್ರಕಟಿಸಿದ ಚಿತ್ರ

ಇಂದು ಪ್ರಪಂಚವು ಭಾರತದತ್ತ ನೋಡಿದಾಗ ಅವರಿಗೆ ಕಾಣುವುದು “ದೇಶ ವಿಭಜನೆಯ ಬಳಿಕದ ಅತ್ಯಂತ ಮಹಾವಲಸೆ”; ಲಕ್ಷಾಂತರ ವಲಸೆ ಕಾರ್ಮಿಕರು, ತಮ್ಮೆಲ್ಲ ಸಾಮಾನು ಸರಂಜಾಮುಗಳನ್ನು ಒಂದೆರಡು ಚೀಲಗಳಲ್ಲಿ ತುಂಬಿಸಿ, ಹಸಿವು, ಹತಾಶೆ, ಮೋಸಹೋದ ಭಾವನೆ ತುಂಬಿದ ನೋಟ ಹೊತ್ತು, ಉರಿಯುವ ಬಿಸಿಲಲ್ಲಿ ನೂರಾರು ಮೈಲಿ ಕಾಲೆಳೆಯುತ್ತಿರುವ ದೃಶ್ಯ. (ಗಾರ್ಡಿಯನ್ ಮತ್ತು ವಾಷಿಂಗ್ಟನ್ ಪೋಸ್ಟ್ ವರದಿಗಳು). ಈ ದೃಶ್ಯವೇ ಮೆಹ್ತಾ ಹೇಳುವ “ಆರಾಮಕುರ್ಚಿ ಬುದ್ಧಿಜೀವಿ”ಗಳ ಹೃದಯ ಮತ್ತು ಆತ್ಮಸಾಕ್ಷಿಯನ್ನು ಕಲಕಿದ್ದು, ಅವರು ಕನಿಷ್ಟಪಕ್ಷ ಈ ಅಸಹಾಯಕ ವಲಸೆ ಕಾರ್ಮಿಕರ ಪರವಾಗಿ ಧ್ವನಿಯೆತ್ತಲು ಮುಂದೆ ಬಂದಿದ್ದಾರೆ.

ಈ ವಲಸೆ ಕಾರ್ಮಿಕರು ದೇಶದ ಆರ್ಥಿಕತೆಯ ಅಭಿವೃದ್ಧಿಗಾಗಿ ದಯನೀಯ ಕೂಲಿಗಾಗಿ ಅಮಾನವೀಯ ಕೆಲಸದ ಪರಿಸರದಲ್ಲಿ ನಿರಂತರವಾಗಿ ದುಡಿದಿದ್ದಾರೆ. ಇಂದು ಈ ವಲಸೆ ಕಾರ್ಮಿಕರನ್ನು ಊರಿಗೆ ಹೋಗಲು ಬಿಡಬೇಡಿ ಎಂದು ಅವರ ಮಾಲಕರು ರಾಜ್ಯ ಸರಕಾರಗಳೊಂದಿಗೆ ಬೇಡುತ್ತಿದ್ದಾರೆ; ಯಾಕೆಂದರೆ ಇಲ್ಲವಾದಲ್ಲಿ ಅವರ ಕೈಗಾರಿಕೆಗಳು ನಡೆಯುವುದು ಸಾಧ್ಯವಿಲ್ಲ.

ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ಚಿತ್ರ

ಅವರು ದೇಶದ ಉತ್ಪಾದನೆ, ಮೂಲ ಸೌಕರ್ಯ ಮತ್ತು ಸೇವಾ ಕ್ಷೇತ್ರಗಳ ಬೆನ್ನೆಲುಬಾಗಿದ್ದಾರೆ. ಅವರ ಕುರಿತು ಕಾಳಜಿ ತೋರಿಸುವವರು ಸರಕಾರದ ಶತ್ರುಗಳೇನಲ್ಲ. ಸರಕಾರದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಒಬ್ಬ ಕಾನೂನು ಅಧಿಕಾರಿಗೆ ತನ್ನ ಪ್ರಜಾತಾಂತ್ರಿಕ ಹಕ್ಕುಗಳನ್ನು ಚಲಾಯಿಸುವ ಯಾವುದೇ ನಾಗರಿಕರನ್ನು ಅಷ್ಟೊಂದು ವೈರತ್ವ ಮತ್ತು ಸಂಶಯದಿಂದ ನೋಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಈ ರೀತಿಯ ಯಾವುದೇ ಪ್ರಕರಣದಲ್ಲಿ ಪ್ರತಿಯೊಬ್ಬ ವಕೀಲನ ಪಾತ್ರವು ನ್ಯಾಯಾಲಯದ ಮೆಟ್ಟಿಲು ಹತ್ತುವ ಯಾವುದೇ ಸಾಮರ್ಥ್ಯವಿಲ್ಲದವರ ಸಂವಿಧಾನ ಖಾತರಿಪಡಿಸಿದ ಹಕ್ಕುಗಳನ್ನು ಎತ್ತಿಹಿಡಿಯುವುದೇ ಆಗಿದೆ.

ಸ್ವತಂತ್ರ ಭಾರತದ ಮೊದಲ ಅಟಾರ್ನಿ ಜನರಲ್ ಎಂ.ಸಿ. ಸೆತಲ್ವಾಡ್ ಅವರು ಮುಂಧ್ರಾ ಹಗರಣದಲ್ಲಿ ನ್ಯಾಯಮೂರ್ತಿ ಛಾಗ್ಲಾ ಆಯೋಗದ ಮುಂದೆ ಹಾಜರಾಗುತ್ತಾ, ಸತ್ಯವನ್ನು ಬಯಲಿಗೆಳೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು ಮತ್ತು ಇದು ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ರಾಜೀನಾಮೆ ನೀಡುವುದಕ್ಕೆ ಕಾರಣವಾಯಿತು. ಅಂದಿನ ಅಟಾರ್ನಿ ಜನರಲ್ ಅವರು ದೇಶಪ್ರೇಮಿಯಾಗಿರಲಿಲ್ಲ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ.

ಚುಟುಕಾಗಿ ಹೇಳುವುದಾದಲ್ಲಿ ಮೆಹ್ತಾ ಅವರದ್ದು ನಿಷ್ಕಾಳಜಿಯ ನಿಲುವು ಮತ್ತು ಸಾಲಿಸಿಟರ್ ಜನರಲ್ ಅವರು ಸತ್ಯಕ್ಕೆ ಬದ್ಧವಾಗಿದ್ದರೆ ಅದು ದೇಶಕ್ಕೆ ಲಾಭವುಂಟುಮಾಡುತ್ತದೆ ಮತ್ತು ಅವರ ಹುದ್ದೆಗೆ ಶೋಭೆ ತಂದುಕೊಡುತ್ತದೆ.

ಅನುದಾರ ಉಲ್ಲೇಖ

1993ರಲ್ಲಿ ಆಹಾರ ಕ್ಯಾಂಪನ್ನು ತಲುಪಲು ತೆವಳುತ್ತಿರುವ ಸುಡಾನಿನ ನಿಶ್ಶಕ್ತ ಮಗುವೊಂದರ ಹತ್ತಿರ ರಣಹದ್ದು ಕಾಯುತ್ತಿರುವ ಚಿತ್ರವೊಂದಕ್ಕೆ ಪುಲಿಟ್ಸರ್ ಪ್ರಶಸ್ತಿ ಪಡೆದ ಒಂದೆರಡು ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಛಾಯಾಗ್ರಾಹಕ ಕೆವಿನ್ ಕಾರ್ಟರ್ ಅವರ ದುರಂತ ಘಟನೆಯನ್ನು ಮೆಹ್ತಾ ಉಲ್ಲೇಖಿಸಿದ್ದಾರೆ.

ಕೆವಿನ್‌ ಕಾರ್ಟರ್‌ ತೆಗೆದ ಚಿತ್ರ

ಅವರು ಕೆವಿನ್ ಕಾರ್ಟರ್ ಅವರನ್ನು ಉಲ್ಲೇಖಿಸಿ, ಎರಡನೇ ರಣಹದ್ದು ಎಂದು ಕರೆದಿದ್ದು, ಮಾನವೀಯತೆಯನ್ನು ಬದಿಗಿಟ್ಟು ಅವಕಾಶವಾದವನ್ನು ಬೆಂಬತ್ತಿದವರೆಂದು ಟೀಕಿಸಿದ್ದಾರೆ. ಅವರು ವಲಸೆ ಕಾರ್ಮಿಕರ ಸಂಕಷ್ಟಗಳನ್ನು ವರದಿ ಮಾಡಿದ ಮಾಧ್ಯಮಗಳ ಪಾತ್ರವನ್ನು ಕಾರ್ಟರ್ ಘಟನೆಗೆ ಹೋಲಿಸಿದ್ದಾರೆ. ಈ ಘಟನೆಯ ವಿವರಣೆಯೇ ತಪ್ಪಾಗಿದೆ ಮತ್ತು ವಾಸ್ತವಾಂಶಗಳ ಮಾನವೀಯ ವಿರೋಧಿ ಮಂಡನೆಯಾಗಿದೆ. ಆ ಮಗು, ಕೋಂಗ್ ಎನ್‌ಯೋಂಗ್ ಈ ಘಟನೆ ನಡೆದ ಕೆಲವರ್ಷಗಳ ನಂತರ ಜ್ವರದಿಂದ ಸಾವಿಗೀಡಾಯಿತು ಮತ್ತು ಕಾರ್ಟರ್ ಅದನ್ನು ಕೈಬಿಟ್ಟಿರಲೂ ಇಲ್ಲ!

ಕಾರ್ಟರ್ ಆತ್ಮಹತ್ಯೆಯು ಆಘಾತದ ಬಳಿಕದ ಅಸ್ವಸ್ಥತೆ (post traumatic disorders)ಗಳಿಂದ ಉಂಟಾಗಿತ್ತೆಂದು ಅವರ ಅಂತಿಮ ಪತ್ರದಿಂದ ಗೊತ್ತಾಗುತ್ತದೆ. ಅವರು ತುಂಬಾ ನೊಂದಿದ್ದರು.

ಪತ್ರದ ಮುಖ್ಯಾಂಶ ಹೀಗಿದೆ: “ಕೊಲೆಗಳು ಮತ್ತು ಹೆಣಗಳು ಮತ್ತು ಸಿಟ್ಟು ಮತ್ತು ನೋವು…. ಹಸಿದ ಅಥವಾ ಗಾಯಗೊಂಡ ಮಕ್ಕಳು… ಗುಂಡಿಕ್ಕಲು ತಹತಹಿಸುತ್ತಿರುವ ಹುಚ್ಚರು. ಹೆಚ್ಚಾಗಿ ಪೊಲೀಸರು, ಹಂತಕರು, ಕೊಲೆಗಡುಕರು ಇವೆಲ್ಲವುಗಳ ನೆನಪುಗಳು ನನ್ನನ್ನು ದೆವ್ವಗಳಂತೆ ಕಾಡುತ್ತಿವೆ”.

ಕೆವಿನ್ ಕಾರ್ಟರ್

ಅವರ ಈ ಚಿತ್ರವು ಸುಡಾನಿನ ಭಯಂಕರ ಬರಗಾಲದ ಬಗ್ಗೆ ವಿಶ್ವಾದ್ಯಂತ ಗಮನ ಸೆಳೆದಿತ್ತು. ಕಾರ್ಟರ್ ಅವರನ್ನು ಇಂದಿಗೂ ಅವರ ವೃತ್ತಿಯಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತಿದೆ. ಅಂತವರ ಮೇಲೆ ಮತ್ತು ವಲಸಿಗರ ಪರವಾಗಿ ಧ್ವನಿ ಎತ್ತಿರುವವರ ಮೇಲೆ ಹಿಂಸಾಸಂತೋಷ, ಅವಕಾಶವಾದ, ಅಸಹಾನುಭೂತಿ ಇಂತಹಾ ಆರೋಪ ಮಾಡಿ ಇಂಂತಹಾ ವರದಿಗಳ ಮೇಲೆಯೇ ಅವಲಂಬಿಸಿದ್ದಾರೆ ಎಂದು ಆರೋಪಣೆ ಮಾಡುವುದು ಕೆಟ್ಟ ಅಭಿರುಚಿ ಮಾತ್ರವಲ್ಲ ನೈತಿಕವಾಗಿಯೂ ತಪ್ಪು.

ಒಂದು ನಿರ್ಭೀತ, ಸ್ವತಂತ್ರ ಮಾಧ್ಯಮವು ಒಂದು ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ನಿರ್ಣಾಯಕ. ಅಂತವರ ಜವಾಬ್ದಾರಿಯುತ ವರದಿಗಾರಿಕೆಯೇ ವಲಸೆ ಕಾರ್ಮಿಕರ ಘೋರ ಸಂಕಷ್ಟಗಳನ್ನು ಬೆಳಕಿಗೆ ತಂದಿರುವುದು!

ಲೇಖಕರು: ಆರ್. ವೈಗೈ, ಅನ್ನಾ ಮ್ಯಾಥ್ಯೂ , ಎಸ್. ದೇವಿಕಾ, (ಮೂವರು ಲೇಖಕರು ಮದ್ರಾಸ್ ಹೈಕೋರ್ಟಿನ ವಕೀಲರು)


ಇದನ್ನೂ ಓದಿ: ವಲಸೆ ಕಾರ್ಮಿಕರಿಗಾಗಿ ರಾಜ್ಯ, ಕೇಂದ್ರ ಸರ್ಕಾರಗಳು ಮಾಡಿದ್ದೆನು? ಸುಪ್ರೀಂ ಪ್ರಶ್ನೆ


ವಿಡಿಯೋ ನೋಡಿ: ಕಾರ್ಮಿಕರ ಬವಣೆ – ಮಾಧ್ಯಮಗಳ ಸಂಭ್ರಮ : ಕ್ರೋನಾಲಜಿ ಅರ್ಥ ಮಾಡಿಕೊಳ್ಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...