ಲಾಹೋರ್ ನಿಂದ ಕರಾಚಿಗೆ ಹೊರಟಿದ್ದ 99 ಪ್ರಯಾಣಿಕರು ಹಾಗೂ 8 ಸಿಬ್ಬಂದಿಗಳಿದ್ದ ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ವಿಮಾನವೊಂದು ಭೂಸ್ಪರ್ಶಕ್ಕೆ ನಿಮಿಷಗಳಿರುವಾಗ ಪತನಗೊಂಡಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ್ ಇಂಟರ್ ನ್ಯಾಶನಲ್ ಏರ್ ಲೈನ್ಸ್ ಇದರ ‘ಏರ್ ಬಸ್ ಎ320’ ಲಾಹೋರ್ ನಿಂದ ಕರಾಚಿಗೆ ತೆರಳುತ್ತಿತ್ತು ಎನ್ನಲಾಗಿದೆ. ಕರಾಚಿಯ ವಿಮಾನ ನಿಲ್ದಾಣದ ಸನಿಹದಲ್ಲೇ ಇರುವ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎನ್ನಲಾಗಿದೆ. ಈ ಪ್ರದೇಶ ತುಂಬಾ ದಟ್ಟ ಹೊಗೆ ತುಂಬಿರುವುದನ್ನು ಸ್ಥಳೀಯ ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.
Really sad news for humanity!!
Videos coming in from crash sitepic.twitter.com/LPqcyilm8G
— The Spirited Bong (@Soum17785045) May 22, 2020
ಅಫಘಾತದಲ್ಲಿ ಬದುಕುಳಿದವರ ಬಗ್ಗೆ ಇನ್ನೂ ಯಾವುದೇ ವರದಿಗಳಿಲ್ಲ. ವಿಮಾನವು ಜಿನ್ನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರದ ಜನನಿಬಿಡ ವಸತಿ ಪ್ರದೇಶಕ್ಕೆ ಬಿದ್ದಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಭಗ್ನಾವಶೇಷ ಮತ್ತು ಹಲವಾರು ಮನೆಗಳಿಗೆ ಬೆಂಕಿ ತಗುಳಿರುವುದನ್ನು ಪಾಕಿಸ್ತಾನ ಮಾಧ್ಯಮಗಳ ದೃಶ್ಯಗಳು ತೋರಿಸಿವೆ.
“ಕರಾಚಿಯಲ್ಲಿ ವಿಮಾನ ಅಪಘಾತಕ್ಕೀಡಾಗಿದೆ. 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು ನಾವು ಪ್ರಯಾಣಿಕರ ಸಂಖ್ಯೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ದೇಶದ ವಾಯುಯಾನ ಪ್ರಾಧಿಕಾರದ ವಕ್ತಾರ ಅಬ್ದುಲ್ ಸತ್ತಾರ್ ಖೋಖರ್ ಹೇಳಿದ್ದಾರೆ.
BREAKING: Bad news coming from Pakistan, Pakistan passenger plane crashes
Horrifying footage: Airbus A320 has crashed in a residential area in Karachi. There were 107 on board. Had taken off from Lahore, crashed during approach to Jinnah Int’l Airport, Karachi. #planecrash pic.twitter.com/sbeg3K1iBA
— World Updates (@Rntk____) May 22, 2020
ಕರಾಚಿಯ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪಾಕಿಸ್ತಾನದ ನಾಗರಿಕ ವಿಮಾನಯಾನ ಪ್ರಾಧಿಕಾರದ ಮೂಲಗಳನ್ನು ಉಲ್ಲೇಖಿಸಿದ ಸುದ್ದಿ ಸಂಸ್ಥೆ ಪಿಟಿಐ ವಿಮಾನ ಇಳಿಯಲು ಒಂದು ನಿಮಿಷ ಮೊದಲು ಸಂಪರ್ಕ ಕಡಿತಗೊಂಡಿತ್ತು ಎಂದು ಹೇಳಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ಸಹಾಯ ಮಾಡಲು ಪಾಕ್ ಆರ್ಮಿ ಕ್ವಿಕ್ ರಿಯಾಕ್ಷನ್ ಫೋರ್ಸ್ ಮತ್ತು ಪಾಕಿಸ್ತಾನ ರೇಂಜರ್ಸ್ ಅಪಘಾತದ ಸ್ಥಳದಲ್ಲಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದೆ.
PIA plane crashed near my cousin's house at Karachi???
Allah sbko apny hifz_o_aman me rakhy ameen ? #planecrash pic.twitter.com/2kYSq5xMmh— اسیرِ زیست? (@RabiaAshrafQazi) May 22, 2020
ಕೊರೋನ ವೈರಸ್ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಂತರ ಲಾಕ್ ಡೌನ್ ನಂತರ ವಾಣಿಜ್ಯ ವಿಮಾನಗಳನ್ನು ಪುನರಾರಂಭಿಸಲು ಪಾಕಿಸ್ತಾನ ಅನುಮತಿಸಿದ ಕೆಲವೇ ದಿನಗಳಲ್ಲಿ ಈ ಅಪಘಾತ ಸಂಭವಿಸಿದೆ.
2016 ರಲ್ಲಿ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ವಿಮಾನವೊಂದು ಇಸ್ಲಾಮಾಬಾದ್ ಗೆ ಹಾರಾಟ ನಡೆಸುತ್ತಿದ್ದಾಗ ಪತನಗೊಂಡದ್ದರಿಂದ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
In a tragic event PIAs A320 with flight No. PK 8303 LHR to KHI, estimated 107 on board crashed near the KHI airport in a residential area. No news of the number casualties. ???#Karachi #PIA #planecrash pic.twitter.com/5gpQ5O5QYj
— OJ (@MasaairrrGG) May 22, 2020
ಓದಿ: ‘ಡಬ್ಬಲ್ ಸ್ಟಾಂಡರ್ಡ್’ ಪ್ರಧಾನಿ: ಪಶ್ಚಿಮ ಬಂಗಾಳದ ಭೇಟಿಯ ಬಗ್ಗೆ ಕರ್ನಾಟಕ ಕಾಂಗ್ರೆಸ್ ಟೀಕೆ


