ಮಂಗಳೂರಿನಲ್ಲಿ ಕೊರೋನ ವೈರಸ್ ತಪಾಸಣೆಗೆ ದಾಖಲಿಸಲಾಗಿದ್ದ ವ್ಯಕ್ತಿ ತಪ್ಪಿಸಿ ಕೊಂಡದ್ದರಿಂದ ಅವರನ್ನು ವ್ಯಾಪಕವಾಗಿ ಹುಡುಕಾಡಲಾಗುತ್ತಿದೆ.
ದುಬೈಯಿಂದ ಬಂದಿದ್ದ ಜ್ವರ ಭಾದಿತ ವ್ಯಕ್ತಿಯನ್ನು ಮಂಗಳೂರಿನ ವಿಮಾನ ನಿಲ್ದಾಣದಿಂದ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೋನ ವೈರಸ್ ತಪಾಸಣೆಗಾಗಿ ದಾಖಲಿಸಲಾಗಿತ್ತು. ಆದರೆ ಆ ವ್ಯಕ್ತಿಯು ರಾತ್ರಿ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ. ಅವರನ್ನು ಪೋಲಿಸರ ಸಹಾಯದಿಂದ ಕಣ್ಗಾವಲು ತಂಡ ಹುಡುಕಾಡಲಾಗುತ್ತಿದೆ.
ಭಾನುವಾರ ಸಂಜೆ ದುಬೈನಿಂದ ಮಂಗಳೂರಿಗೆ ಆಗಮಿಸಿದ ವ್ಯಕ್ತಿಯಲ್ಲಿ ಕೊರೋನ ವೈರಸ್ ಸಂಬಂಧಿಸಿದ ರೋಗಲಕ್ಷಣಗಳು ಕಂಡು ಬಂದಿದ್ದರಿಂದ ಅವರನ್ನು ಪರೀಕ್ಷೆಗಳಿಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪ್ರಯಾಣಿಕರ ನಾಪತ್ತೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು. ಕಣ್ಗಾವಲು ತಂಡ ಪೊಲೀಸರೊಂದಿಗೆ ಅವರ ಮನೆಯಲ್ಲಿದೆ. “ಅವರನ್ನು ಮರಳಿ ಕರೆತಂದು ಆಸ್ಪತ್ರೆಗೆ ದಾಖಲಿಸಲಾಗುವುದು” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳದಲ್ಲಿ ಮೂರು ವರ್ಷದ ಮಗು ಮತ್ತು ಜಮ್ಮು ಮತ್ತು ಕಾಶ್ಮೀರದ 63 ವರ್ಷದ ಮಹಿಳೆ ಕೊರೋನ ವೈರಸ್ ಸೋಂಕಿತರಾಗಿದ್ದಾರೆ. ಕೇರಳದ ಮಗು ತನ್ನ ಹೆತ್ತವರೊಂದಿಗೆ ಇಟಲಿಗೆ ಪ್ರಯಾಣಿಸಿ ಕಳೆದ ಶನಿವಾರ ಮರಳಿತ್ತು. ಜಮ್ಮು ಮಹಿಳೆ ಇರಾನ್‌ಗೆ ಪ್ರಯಾಣ ಬೆಳೆಸಿದ್ದರು.
ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ಕರೋನ ವೈರಸ್ ಪ್ರಕರಣಗಳು ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಶಿಶುವಿಹಾರಗಳನ್ನು ಮುಚ್ಚಲಾಗಿದೆ. ಪೂರ್ವ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಭಾರತದಾದ್ಯಂತ, 43 ಜನರು ಕೊರೋನ ವೈರಸ್ ಸೋಂಕಿಗೆ ಒಳಪಟ್ಟಿದ್ದಾರೆ ಎಂದು ದೃಡಪಟ್ಟಿದೆ. ಇದು 100 ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ.


