Homeಕರ್ನಾಟಕರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

ರಾಜಿನಾಮೆ ರಾಜಕಾರಣದ ರಾಡಿ: ಜಿಗುಪ್ಸೆಯ ನಡುವೆಯೂ ಕುತೂಹಲ

- Advertisement -
- Advertisement -

ಒಂಥರಾ ಟ್ವೆಂಟಿ-20 ಪಂದ್ಯದಂತೆ ಇಲ್ಲಿ ಸ್ಕೋರ್ ಬೋರ್ಡ್ ಬದಲಾಗುತ್ತಿದೆ. ಸಂವಿಧಾನವನ್ನೇ ಅರಗಿಸಿಕೊಂಡಂತೆ ಟಿವಿ ಸ್ಟುಡಿಯೋಗಳಿಂದ ಪಂದ್ಯದ ‘ರಿಸಲ್ಟ್’ ಹೊರಬೀಳುತ್ತಿವೆ. ಟ್ವೆಂಟಿ-20 ಪಂದ್ಯದಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್‍ಗಳನ್ನು ಹಿನ್ನೆಲೆಗೆ ಸರಿಸಿದಂತೆ ಇಲ್ಲಿಯೂ ಕುದುರೆ ವ್ಯಾಪಾರವನ್ನು ಹಿನ್ನೆಲೆಗೆ ಸರಿಸಲಾಗಿದೆ. ಸೋಲುವ ಭೀತಿಯಲ್ಲಿರುವ ಸಮ್ಮಿಶ್ರ ಟೀಮ್ ಕೈಚೆಲ್ಲಿದಂತೆ ಒದ್ದಾಡುತ್ತ, ಧೋ ಅಂತ ಮಳೆ ಸುರಿಯಲಿ ಎಂದು ಮುಗಿಲು ನೋಡುತ್ತಿದೆ. ಒಟ್ಟೂ ಈ ರಾಜಕಾರಣದ ಬಗ್ಗೆ ಜಿಗುಪ್ಸೆಯ ಭಾವನೆ ಹೊಂದಿರುವ ಸಾಮಾನ್ಯ ಜನರು ಬರದ ಬೇಗುದಿಯಲ್ಲೂ ಪಂದ್ಯವನ್ನು ವೀಕ್ಷಿಸುತ್ತ ಎಂಜಾಯ್ ಮಾಡುತ್ತ, ಗಂಟೆಗೊಮ್ಮೆ ಬದಲಾಗುತ್ತಿರುವ ರಾಜಕಾರಣವನ್ನು ಉಗಿಯುತ್ತ ತಮ್ಮ ಪಾಳೆಯಕ್ಕಾಗಿ ಕಾದಿದ್ದಾರೆ.

ಇಲ್ಲಿ ನಾಳೆ ಏನಾಗುತ್ತೆ ಎನ್ನುವುದು ಸ್ಪಷ್ಟವಾಗುತ್ತಿದ್ದರೂ ಚುಟುಕು ಪಂದ್ಯದಲ್ಲಿ ಏನಾದರೂ ಆಗಬಹುದು. ಒಂದು ಟೀಮ್‍ನ ಆಂತರಿಕ ಸದಸ್ಯರೇ ಆಗಿರುವ ಅಂಪೈರ್ ಸಾಹೇಬರು ಮೌನ ಮುರಿಯುತ್ತಲೇ ಇಲ್ಲ. ಇದು ಕೂಡ ನಿಗೂಢವಾಗಿದೆ. ಸರಿಯಾಗಿ ಒಂದು ವರ್ಷ ಎರಡು ತಿಂಗಳ ಹಿಂದೆ ಇದೇ ಅಂಪೈರ್ ತಾವೇ ‘ಸಾಂವಿಧಾನಿಕ’ ಬಿಕ್ಕಟ್ಟನ್ನು ಸೃಷ್ಟಿಸಲು ಹೋಗಿ ಸುಪ್ರಿಂಕೋರ್ಟ್‍ನ ಕೆಂಗಣ್ಣಿಗೆ ಗುರಿಯಾಗಿದ್ದರು.

ಇದೆಲ್ಲವನ್ನೂ ಹಿನ್ನೆಲೆಯಲ್ಲಿ ಇಟ್ಟುಕೊಂಡು ನೋಡಿದಾಗ, ಇಲ್ಲಿ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು ಎಂಬ ಭಾವವಂತೂ ಜನರಿಗೆ ಇದೆ. ಹಾಗೆಯೇ ಹೊಸ ಸರ್ಕಾರ ಬಂದರೂ ಮತ್ತದೇ ಅತಂತ್ರ ವಾತಾವರಣ ಎಂಬ ಪ್ರಾಥಮಿಕ ಜ್ಞಾನವೂ ಜನರಲ್ಲಿದೆ. ಆದರೆ ಈಗ ಪಾರ್ಟಿ ಬದಲಿಸರುವ ಜನಪ್ರತಿನಿಧಿಗಳಿಗೆ ಇದು ಗೊತ್ತಿದ್ದರೂ, ಅವರು ಯಾವ ಅಳುಕಿಲ್ಲದೇ ಏಕೆ ಹೋಗುತ್ತಿದ್ದಾರೆ?

ಇದರ ಮೂಲ ಹುಡುಕುತ್ತ ಹೋದರೆ, ಅದು 2008ರ ಸಂದರ್ಭಕ್ಕೆ ಬಂದು ನಿಲ್ಲುತ್ತದೆ. ಪಕ್ಷಾಂತರ ಕಾನೂನನ್ನೇ ಅಣಕಿಸುವಂತೆ ಚಾಲೆಂಜ್ ಮಾಡಿದ ‘ಆಪರೇಷನ್ ಕಮಲ’ ಎಂಬ ಜನದ್ರೋಹಿ ನಡೆ ಶುರುವಾಯಿತಲ್ಲ, ಅದು ರಾಜಕಾರಣದಲ್ಲಿ ದಿಢೀರ್ ಕೋಟಿಗಳನ್ನು ಸಂಪಾದಿಸುವ ಮಾರ್ಗವನ್ನು ತೋರಿಸಿಕೊಟ್ಟಿತು. ಮೊದಲ ಆಪರೇಷನ್ ಕಮಲದ ಫಲಾನುಭವಿಗಳು ಇವತ್ತು ಎಷ್ಟು ನಿಶ್ಚಿಂತರಾಗಿದ್ದಾರೆ ಎಂದರೆ, ಅವರಿಗೆ ಈಗ ಚುನಾವಣೆ ಎಂಬುದೀಗ ಜೂಜು. ಅಭಿವೃದ್ಧಿ ಹೆಸರಲ್ಲಿ ಕಮಿಷನ್ ಹೆಸರಲ್ಲಿ ಬರುವ ದುಡ್ಡು ಜುಜುಬಿ. ಇಲ್ಲಿ ಸಿಕ್ಕಿ ಬಿದ್ದರೆ ಮಾನಗೇಡಿ. ಆದರೆ ಆಪರೇಷನ್ ಕಮಲದಲ್ಲಿ ಅನಾತಾಸವಾಗಿ 30-80 ಕೋಟಿವರೆಗೆ ಪಡೆದರೆ ಅದಕ್ಕೆ ಯಾವ ಕಾನೂನಿನ ಅಡಿಯೂ ಇಲ್ಲ!

2008ರಲ್ಲಿ ಬಿಜೆಪಿಯಿಂದ ಚಾಲನೆಗೊಂಡ ಈ ಬಲ್ಕ್ ವ್ಯಾಪಾರದ ಬಗ್ಗೆ ಯಾವ ಪಕ್ಷಕ್ಕೂ ಅಂತಹ ಅಸಹ್ಯವೇನೂ ಇಲ್ಲ. ಹೀಗಾಗಿ ಈ ರೋಗ ದೇಶದ ಎಲ್ಲ ರಾಜ್ಯಗಳಿಗೂ ಹಬ್ಬಿದೆ. ಶಾಂತವೇರಿ ಗೋಪಾಲಗೌಡ, ದೇವರಾಜ ಅರಸು, ನಜೀರ್ ಸಾಬ್‍ರಂತಹ ಮಾದರಿ ರಾಜಕಾರಣಿಗಳನ್ನು ಕೊಟ್ಟ ಕರ್ನಾಟಕವೇ ಆಪರೇಷನ್ ಕಮಲ ಎಂಬ ಹೇಯ ರಾಜಕೀಯದ ಪಿತೃ ಆಗಿರುವುದು ಒಟ್ಟೂ ರಾಜಕಾರಣದ ದುರಂತ.

ಮುಂಬೈನಲ್ಲಿ ಅತೃಪ್ತರು ತಂಗಿರುವ ಹೊಟೆಲ್‍ನ ರೂಮ್ ಬಾಡಿಗೆ ದರವನ್ನು ಉಲ್ಲೇಖಿಸುವಾಗ ಮಾಧ್ಯಮ ಮಿತ್ರರು ಅದನ್ನು ವೈಭವೀಕರಿಸುತ್ತಿದ್ದಾರೆಯೇ ವಿನ: ಅವರಿಗೆ ಇದೆಲ್ಲದರ ಹಿಂದಿರುವ ಹಣದ ಮೂಲದ ಬಗ್ಗೆ ಪ್ರಶ್ನೆಯೂ ಇಲ್ಲ. ಇವತ್ತು ಅಸಹಾಯಕ ಸ್ಥಿಯಲ್ಲಿರುವ ಮೈತ್ರಿ ಪಕ್ಷಗಳಿಗೂ ಇದನ್ನು ಪ್ರಶ್ನಿಸುವ ಯಾವ ನೈತಿಕತೆಯೂ ಇಲ್ಲ.

ರೆಸಾರ್ಟ್ ರಾಜಕಾರಣ ಎಂಬುದು ಈಗ ಸಹಜ ವಿದ್ಯಮಾನ ಎಂದು ಬಿಂಬಿತವಾಗಿರುವ ಈ ಸಂದರ್ಭದಲ್ಲಿ ನಾಳೆ ಹೊಸ ಸರ್ಕಾರವೋ, ರಾಷ್ಟ್ರಪತಿ ಆಡಳಿತವೋ ಎಂದು ಚರ್ಚಿಸುವುದೇ ಈ ಹೊತ್ತಿನ ವ್ಯಂಗ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...