Homeಕರ್ನಾಟಕ’ನಮ್ಮ ಜಿಲ್ಲೆಯನ್ನು ಹಾಳು ಮಾಡಿಬಿಟ್ಟ’: ಸಚಿವ ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ ಬಿಜೆಪಿ ಸಂಸದ ಜಿ.ಎಸ್. ಬಸವರಾಜ್

’ನಮ್ಮ ಜಿಲ್ಲೆಯನ್ನು ಹಾಳು ಮಾಡಿಬಿಟ್ಟ’: ಸಚಿವ ಮಾಧುಸ್ವಾಮಿ ವಿರುದ್ಧ ಕಿಡಿಕಾರಿದ ಬಿಜೆಪಿ ಸಂಸದ ಜಿ.ಎಸ್. ಬಸವರಾಜ್

- Advertisement -
- Advertisement -

ಬಿಜೆಪಿ ಸಂಸದ ಜಿ. ಎಸ್. ಬಸವರಾಜ್ ತಮ್ಮ ಪಕ್ಷದ ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಬಿಜೆಪಿ ಸಚಿವ ಬೈರತಿ ಬಸವರಾಜ್ ಎದುರು ಅಸಮಾಧಾನ ಹೊರಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲು ನಗರಾಭಿವೃದ್ಧಿ ಸಚಿವ ಬೈರತಿ ನಗರಕ್ಕೆ ಬಂದಿದ್ದರು. ಈ ವೇಳೆ ಕರೆದಿದ್ದ ಸುದ್ದಿಗೋಷ್ಠಿ ಆರಂಭದಲ್ಲಿ ಸಂಸದ ಜಿ. ಎಸ್. ಬಸವರಾಜ್, ಬೈರತಿ ಬಸವರಾಜ್ ಕಿವಿಯಲ್ಲಿ ಪಿಸುಗುಟ್ಟಿದ್ದಾರೆ. ಹೆಸರು ಹೇಳದೆ ಪರೋಕ್ಷವಾಗಿ ಸಚಿವ ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ನನ್‌ಮಗ ನಮ್ಮ ಮಂತ್ರಿ ಹೆಂಗೆ ಗೊತ್ತಾ… ದಕ್ಷಿಣ ಕೊರಿಯಾದ ಕಿಂಗ್‌ಪಿನ್ ಇದ್ದಾನಲ್ಲ ಅವನಂತೆ. ಹಾಳು ಮಾಡಿಬಿಟ್ಟ ನಮ್ಮ ಜಿಲ್ಲೆಯನ್ನ… ಒಂದು ಸೀಟೂ ಬರಲ್ಲ’… ಮಾತು ಎತ್ತಿದ್ದರೆ ಹೊಡಿ, ಬಡಿ, ಕಡಿ ಅಂತಾನೆ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಶೀಘ್ರದಲ್ಲೇ ರಾಜ್ಯಕ್ಕೆ ಅಮಿತ್‌ ಶಾ ಭೇಟಿ: BJP ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುತ್ತು, ಸಿಎಂ ಬದಲಾವಣೆ ಸಾಧ್ಯತೆ?

’ಸುಮ್ಮನಿರಿ ಆಮೇಲೆ ಮಾತಾಡೋಣ’ ಎಂದು ಸಚಿವ ಬೈರತಿ ಬಸವರಾಜ್ ಹೇಳುತ್ತಿದ್ದರೂ ಕೂಡ ಸಂಸದರು ಮಾತು ಮುಂದುವರೆಸುತ್ತಾರೆ. “ಅವನ್ಯಾರೋ ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ ಹೇಳುತ್ತಾನೆ. ಲೇ ನೀನು ನಿನ್ನ ಹೆಂಡತಿ ಸೀರೆ ಒಗೆಯುವುದಕ್ಕೆ ಲಾಯಕ್ ಅಂತಾನೆ. ಒಂದು ಹ್ಯಾಂಡ್ ಬಿಲ್ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೈರ್ ಮಾಡಿಕೊಂಡು ಬಂದಿದ್ದಾನೆ. ನಮಗೆ ಯಾರಿಗೂ ಇನ್ವಿಟೇಶನ್ ಇಲ್ಲ, ಕರೆಯೋದು ಇಲ್ಲ” ಎಂದು ಸಂಸದ ಜಿ.ಎಸ್ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.

ಮಾತು ಕೇಳಿಸಿಕೊಂಡ ನಂತರ ಸಚಿವ ಭೈರತಿ ಬಸವರಾಜ್ ಸಾಕು ಎಂದು ಸುದ್ದಿಗೋಷ್ಠಿ ಆತಂಭಿಸುತ್ತಾರೆ. ಈ ಮಾತಿನ ತುಣುಕು ಸಾಕಷ್ಟು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಚರ್ಚೆ ಆರಂಭವಾಗಿದೆ.


ಇದನ್ನೂ ಓದಿ: ನಗರಸಭೆಗೆ ಸ್ಪರ್ಧಿಸಿದ್ದ ಪ್ರತಿ ಅಭ್ಯರ್ಥಿಗೆ ಸಿ.ಟಿ.ರವಿ 15 ಲಕ್ಷ ರೂ. ನೀಡಿದ್ದರು: ಆಡಿಯೊ ರಿಲೀಸ್ ಮಾಡಿದ ಎಎಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...