ಎಸ್‌ಎಸ್‌ಎಲ್‌ಸಿ – 2025ರ ಫಲಿತಾಂಶ ಶುಕ್ರವಾರ ಬೆಳಿಗ್ಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ KSEAB ಕಚೇರಿಯಲ್ಲಿ ಔಪಚಾರಿಕವಾಗಿ ಪ್ರಕಟಿಸಿದ್ದಾರೆ. ರಾಜ್ಯದಾದ್ಯಂತ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 64.14% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಜೊತೆಗೆ ರಾಜ್ಯದ ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ. Karnataka SSLC Result 2025, ಎಸ್‌ಎಸ್‌ಎಲ್‌ಸಿ ಫಲಿತಾಂಶ, SSLC Result 2025, SSLC ರಿಸಲ್ಟ್
ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಅಧಿಕೃತ ವೆಬ್‌ಸೈಟ್ – karresults.nic.in ನಲ್ಲಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಆನ್‌ಲೈನ್‌ನಲ್ಲಿ ಫಲಿತಾಂಶವನ್ನು ಮಧ್ಯಾಹ್ನ 12:30 ನಂತರ ನೋಡಬಹುದಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ನೋಡುವುದು ಹೇಗೆ?
(ಒಂದು ವೇಳೆ ಇನ್ನೂ ಸಿಕ್ಕಿಲ್ಲವೆಂದರೆ ತುಸು ಹೊತ್ತಿನ ನಂತರ ಮತ್ತೆ ಇದೇ ಪೇಜ್ ಅನ್ನು ರೀಫ್ರೆಶ್ ಮಾಡಿ ಪ್ರಯತ್ನಿಸಿ)
- ಮೊದಲಿಗೆ ವಿದ್ಯಾರ್ಥಿಗಳ ರೋಲ್ ಅಥವಾ ರಿಜಿಸ್ಟರ್ ನಂಬರ್ ಅನ್ನು ತಯಾರಾಗಿಟ್ಟುಕೊಳ್ಳಿ.
- ನಂತರ ಇಲ್ಲಿ ಕ್ಲಿಕ್ ಮಾಡಿ.
- ಮೇಲಿನ ಲಿಂಕ್ ಕ್ಲಿಕ್ ಮಾಡಿದಾಗ ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಿಂಕ್ ಇರುತ್ತವೆ.
- ಎಸ್‌ಎಸ್‌ಎಲ್‌ಸಿ ಫಲಿತಾಂಶ ಲಿಂಕ್ ಕ್ಲಿಕ್ ಮಾಡದಾಗ ತೆರೆದುಕೊಳ್ಳುವ ಪೇಜ್ ಅಲ್ಲಿ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್ ತುಂಬಿಸಬೇಕು.
- ನಂತರ ಅಲ್ಲಿ ವಿದ್ಯಾರ್ಥಿಗಳ ಜನ್ಮ ದಿನಾಂಕವನ್ನು ಕೊಟ್ಟಿರುವ ಬಾಕ್ಸ್ ಒಳಗೆ ತುಂಬಿಸಬೇಕು.
- ಅದರ ನಂತರ ‘ಸಬ್‌ಮಿಟ್’ ಬಟನ್‌ಗೆ ಕ್ಲಿಕ್ ಮಾಡಬೇಕು.
- ಸಬ್‌ಮಿಟ್ ನೀಡಿದ ನಂತರ ನಿಮ್ಮ ಫಲಿತಾಂಶ ಕಾಣುತ್ತದೆ.
- ಅಲ್ಲಿಂದ ನೀವು ಅದನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಬಹುದಾಗಿದೆ.
SMS ಅಪ್ಲಿಕೇಶನ್ ಮೂಲಕ ಕೂಡ SSLC 2025ರ ಫಲಿತಾಂಶ ನೋಡಿ
ಅಧಿಕೃತ ವೆಬ್‌ಸೈಟ್‌ಗಳ ಹೊರತಾಗಿ, ಕರ್ನಾಟಕ ಮಂಡಳಿಯ ವಿದ್ಯಾರ್ಥಿಗಳು ತಮ್ಮ ಕರ್ನಾಟಕ ಮಂಡಳಿಯ ಎಸ್‌ಎಸ್‌ಎಲ್‌ಸಿ 2025ರ ಫಲಿತಾಂಶವನ್ನು SMS ಅಪ್ಲಿಕೇಶನ್ ಮೂಲಕ ಪರಿಶೀಲಿಸಬಹುದು. ಅದಕ್ಕಾಗಿ ಕೆಳಗಿನಂತೆ ಸ್ವರೂಪದಲ್ಲಿ ಸಂದೇಶವನ್ನು ಟೈಪ್ ಮಾಡಬೇಕಾಗುತ್ತದೆ.
- KAR10Roll ಸಂಖ್ಯೆ ಮತ್ತು ಅದನ್ನು 56263 ಸಂಖ್ಯೆಗೆ ಕಳುಹಿಸಬೇಕು.
ಈ ಬಾರಿ ಎಸ್‌ಎಸ್‌ಎಲ್‌ಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಕಲಬುರಗಿ ಕೊನೆಯ ಸ್ಥಾನದಲ್ಲಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 91.12% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣವಾಗದ ವಿದ್ಯಾರ್ಥಿಗಳು ಎರಡನೇ ಮತ್ತು ಮೂರನೇ ಪರೀಕ್ಷೆ ಬರೆಯಬಹುದು ಎಂದು ಎಂದು ಅವರು ಹೇಳಿದ್ದು, ಅವರಿಗೆ ಯಾವುದೇ ಶುಲ್ಕವಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷಕ್ಕಿಂತ ಒಂದು ವಾರ ಮುಂಚಿತವಾಗಿ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ವರ್ಷ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. ರಾಜ್ಯದ ಹಲವಾರು ಕೇಂದ್ರಗಳಲ್ಲಿ ಮಾರ್ಚ್ 21 ರಿಂದ ಏಪ್ರಿಲ್ 4 ರ ನಡುವೆ SSLC ಪರೀಕ್ಷೆಗಳನ್ನು ನಡೆಸಲಾಗಿತ್ತು. ಕಳೆದ ವರ್ಷ ಮೇ 9 ರಂದು ಫಲಿತಾಂಶ ಪ್ರಕಟಿಸಲಾಗಿತ್ತು.
ಎಸ್‌ಎಸ್‌ಲ್‌ಸಿ ಪರೀಕ್ಷೆ ಉತ್ತೀರ್ಣ ಆಗಲು ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಗಳಿಸಬೇಕು ಮತ್ತು ಅನ್ವಯವಾಗುವಲ್ಲಿ ಆಂತರಿಕ ಅಥವಾ ಪ್ರಾಯೋಗಿಕ ಮೌಲ್ಯಮಾಪನಗಳನ್ನು ಒಳಗೊಂಡಂತೆ ಮಂಡಳಿಯು ನಿಗದಿಪಡಿಸಿದ ಯಾವುದೇ ಹೆಚ್ಚುವರಿ ಮಾನದಂಡಗಳನ್ನು ಪೂರೈಸಬೇಕು. ಕನಿಷ್ಠ ಅಂಕಗಳನ್ನು ಪಡೆಯದವರಿಗೆ ಪೂರಕ ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿರುತ್ತದೆ, ಫಲಿತಾಂಶಗಳು ಪ್ರಕಟವಾದ ನಂತರ ವಿವರಗಳನ್ನು ಪ್ರಕಟಿಸಲಾಗುತ್ತದೆ. Karnataka SSLC Result 2025, ಎಸ್‌ಎಸ್‌ಎಲ್‌ಸಿ ಫಲಿತಾಂಶ, SSLC Result 2025, SSLC ರಿಸಲ್ಟ್
ಇಲ್ಲಿ ಕ್ಲಿಕ್ ಮಾಡಿ


Dommathamari
I want to se my brother results
Pavagada