Homeಮುಖಪುಟಐದು ವರ್ಷ ಮುಖ್ಯಮಂತ್ರಿ ಆಗಿದ್ದರೂ ಕಾರು ಹೊಂದಿಲ್ಲದ ವ್ಯಕ್ತಿ!! ಕೇಜ್ರಿವಾಲ್ ಆಸ್ತಿ ಅಫಿಡವಿಟ್ ಘೋಷಣೆ.

ಐದು ವರ್ಷ ಮುಖ್ಯಮಂತ್ರಿ ಆಗಿದ್ದರೂ ಕಾರು ಹೊಂದಿಲ್ಲದ ವ್ಯಕ್ತಿ!! ಕೇಜ್ರಿವಾಲ್ ಆಸ್ತಿ ಅಫಿಡವಿಟ್ ಘೋಷಣೆ.

- Advertisement -
- Advertisement -

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನವದೆಹಲಿಯಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 3.4 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಇದು 2015 ರಿಂದ 1.3 ಕೋಟಿ ರೂ.ಗಳ ಅಲ್ಪ ಹೆಚ್ಚಳವಾಗಿದೆ ಎಂದು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 2015 ರಲ್ಲಿ, ಕೇಜ್ರಿವಾಲ್ ಅವರ ಒಟ್ಟು ಆಸ್ತಿ 2.1 ಕೋಟಿ ರೂ ಇತ್ತು.

ಕೇಜ್ರಿವಾಲ್ ಅವರು ಚುನಾವಣಾ ಆಯೋಗಕ್ಕೆ ನೀಡಿದ ಇತ್ತೀಚಿನ ಅಫಿಡವಿಟ್‌ನಲ್ಲಿ ನೀಡಿದ ವಿವರಗಳ ಪ್ರಕಾರ, ನಗದು ಮತ್ತು ಹೂಡಿಕೆಯಂತಹ ಚರ ಆಸ್ತಿಗಳನ್ನು 9.95 ಲಕ್ಷ ರೂ ಎಂದು ಘೋಷಿಸಿದ್ದಾರೆ. ಅವರ ಪತ್ನಿ ಸುನಿತಾ ಒಟ್ಟು 12 ಲಕ್ಷ ಮೌಲ್ಯದ 320 ಗ್ರಾಂ ಚಿನ್ನ ಸೇರಿದಂತೆ ಒಟ್ಟು 57.07 ಲಕ್ಷ ರೂ. ಮತ್ತು 1 ಕೆಜಿ ಬೆಳ್ಳಿ 40,000 ರೂ ಆಗಿದೆ. 2015 ರಲ್ಲಿ ಕೇಜ್ರಿವಾಲ್ 2.26 ಲಕ್ಷ ರೂ.ಗಳ ಚರ ಆಸ್ತಿಯನ್ನು ಘೋಷಿಸಿದ್ದರೆ, ಅವರ ಪತ್ನಿ 15.28 ಲಕ್ಷ ಹೊಂದಿದ್ದರು.

ವಿಶೇಷವೆಂದರೆ, ಕೇಜ್ರಿವಾಲ್ ಅವರ ಆದಾಯವು 2014-15ರಲ್ಲಿ 7.42 ಲಕ್ಷ ರೂ.ಗಳಿಂದ 2018-19ರಲ್ಲಿ 2.81 ಲಕ್ಷ ರೂ.ಗೆ ಇಳಿದಿದೆ. ಅವರ ಪತ್ನಿ ಸುನೀತಾ ಅವರ ಆದಾಯವೂ 2014-15ರಲ್ಲಿ 12.08 ಲಕ್ಷ ರೂ.ಗಳಿಂದ 2018-19ರಲ್ಲಿ 9.94 ಲಕ್ಷ ರೂ.ಗೆ ಇಳಿದಿದೆ.

32 ಲಕ್ಷ ಮೌಲ್ಯದ ನಗದು ಮತ್ತು ನಿಶ್ಚಿತ ಠೇವಣಿಯನ್ನು ಸ್ವಯಂಪ್ರೇರಿತ ನಿವೃತ್ತಿ ಸೌಲಭ್ಯವಾಗಿ ಸುನಿತಾ ಕೇಜ್ರಿವಾಲ್ ಸ್ವೀಕರಿಸಿದ್ದಾರೆ ಮತ್ತು ಉಳಿದವು ಉಳಿತಾಯವಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಕೇಜ್ರಿವಾಲ್ ಅವರ ಬಳಿ 12,000 ರೂ., ಅವರ ಪತ್ನಿ 9,000 ರೂ. ನಗದು ಹಣವಿದೆ .

ಇದಲ್ಲದೆ, ನವದೆಹಲಿ ಕ್ಷೇತ್ರದ ಚಾಂದನಿ ಚೌಕ್‌ನಲ್ಲಿ ಮತದಾರನಾಗಿರುವ 51 ವರ್ಷದ ಕೇಜ್ರಿವಾಲ್‌ ಸ್ವತಃ ವಾಹನ ಹೊಂದಿಲ್ಲ. ಅವರ ಪತ್ನಿ 6.20 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಬಲೆನೊ ಹೊಂದಿದ್ದಾರೆ. ಸುನಿತಾ ಅವರು ಸಾರ್ವಜನಿಕ ಭವಿಷ್ಯ ನಿಧಿಗಳು ಮತ್ತು ಎಸ್‌ಬಿಐ ಮ್ಯೂಚುವಲ್ ಫಂಡ್‌ಗಳಲ್ಲೂ ಹೂಡಿಕೆ ಮಾಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಅವರು ತಮ್ಮ ಹೆಸರಿನಲ್ಲಿ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಖರೀದಿಸಿದ ಫ್ಲ್ಯಾಟ್ ಮತ್ತು ಹರಿಯಾಣದ ಶಿವಾನಿಯಲ್ಲಿ ಅನುವಂಶಿಕವಾಗಿ ಪಡೆದ ಆಸ್ತಿಯನ್ನು ಪ್ರಸ್ತುತ ಮಾರುಕಟ್ಟೆ ಮೌಲ್ಯ ಕ್ರಮವಾಗಿ 1.4 ಕೋಟಿ ಮತ್ತು 37 ಲಕ್ಷ ರೂ. ಆಗಿದೆ. 2010 ರಲ್ಲಿ ಗುರುಗ್ರಾಮ್‌ನಲ್ಲಿ ಸುನೀತಾ ಅವರು ಫ್ಲ್ಯಾಟ್ ಖರೀದಿಸಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ, ಇದರ ಮಾರುಕಟ್ಟೆ ಮೌಲ್ಯವು ಈಗ 1 ಕೋಟಿ ರೂ. ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...