ಕೇರಳದ ಹೈಕೋರ್ಟ್ ಮಾಜಿ ನ್ಯಾಯಾಧೀಶರಾದ ಪಿ ಎನ್ ರವೀಂದ್ರನ್ ಮತ್ತು ವಿ ಚಿದಂಬರೇಶ್ ಹಾಗೂ ಹಲವಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ 18 ಜನ ಕೊಚ್ಚಿಯಲ್ಲಿ ಬಿಜೆಪಿಗೆ ಸೇರಿದ್ದಾರೆ. ಭಾನುವಾರ (ಫೆ.28) ತ್ರಿಪುಣಿಥುರದಲ್ಲಿ ನಡೆದ ‘ವಿಜಯ ಯಾತ್ರೆ’ ಸಮಾರಂಭದಲ್ಲಿ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಸಮ್ಮುಖದಲ್ಲಿ ಇವರನ್ನು ಪಕ್ಷಕ್ಕೆ ಸ್ವಾಗತಿಸಲಾಯಿತು.
ಚಿದಂಬರೇಶ್ ದೆಹಲಿಯಲ್ಲಿರುವ ಕಾರಣ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ‘ಲವ್ ಜಿಹಾದ್’ ಕಾನೂನಿಗೆ ಬೆಂಬಲ ನೀಡುವುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಪತ್ರಕ್ಕೆ ಸಹಿ ಹಾಕಿದ ಆರೋಪದ ಮೇಲೆ ಹೈಕೋರ್ಟ್ ಮಾಜಿ ನ್ಯಾಯಾಧೀಶರ ಹೆಸರುಗಳು ಇತ್ತೀಚೆಗೆ ಸುದ್ದಿಯಲ್ಲಿದ್ದವು.
ಪಾಲಕ್ಕಾಡ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ತನ್ನ ವಿದ್ಯಾರ್ಥಿ ದಿನಗಳಲ್ಲಿ ಎಬಿವಿಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೆ ಎಂದು ಚಿದಂಬರೇಶ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಬಿಜೆಪಿ ತ್ಯಜಿಸಿ-ಟಿಎಂಸಿ ಸೋಲಿಸಿ’ – ಪ.ಬಂಗಾಳದ ಎಡಪಕ್ಷಗಳ ಬೃಹತ್ ರ್‍ಯಾಲಿಯಲ್ಲಿ 10 ಲಕ್ಷ ಜನ!
“ನಾನು ಬಿಜೆಪಿಯ ಸಹ ಪ್ರಯಾಣಿಕನಾಗಿದ್ದೇನೆ. ಈಗ ನಾನು ಅಧಿಕೃತವಾಗಿ ಪಕ್ಷಕ್ಕೆ ಸೇರಿದ್ದೇನೆ. ನಾನು ದೆಹಲಿಯಲ್ಲಿರುವುದರಿಂದ ಕೊಚ್ಚಿಯಲ್ಲಿ ನಡೆಯುತ್ತಿರುವವ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ” ಎಂದು ಚಿದಂಬರೇಶ್ ಹೇಳಿದ್ದಾರೆ.
ಮಾಜಿ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿ ಆರ್ ಮೆನನ್ ಮತ್ತು ಬಿಪಿಸಿಎಲ್ ಮಾಜಿ ಜನರಲ್ ಮ್ಯಾನೇಜರ್ ಸೋಮ್ ಅಚುದ್ದನ್ ಅವರೂ ಕೂಡ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
“ಮಾಜಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆ ಶಿಜಿ ರಾಯ್ ಮತ್ತು ಇತರ 12 ಕಾಂಗ್ರೆಸ್ ಕಾರ್ಯಕರ್ತರು ಸಹ ಬಿಜೆಪಿಗೆ ಸೇರಿದ್ದಾರೆ” ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: “ಮಗಳು ಬೇರೊಬ್ಬರ ಸ್ವತ್ತು, ಕಳುಹಿಸಿ ಕೊಡಲಾಗುವುದು”: ವಿವಾದಾತ್ಮಕ ಟ್ವೀಟ್‌ಗೆ ಸ್ಪಷ್ಟನೆ ನೀಡಿದ ಸಚಿವ


