Homeಮುಖಪುಟದೇವಾಲಯ ತೆರೆಯುತ್ತಿದ್ದಂತೆ ರಾಜಕೀಯ ಲಾಭಕ್ಕೆ ಮುಂದಾದ ಕೇರಳ ಬಿಜೆಪಿಯ ದ್ವಂದ್ವ

ದೇವಾಲಯ ತೆರೆಯುತ್ತಿದ್ದಂತೆ ರಾಜಕೀಯ ಲಾಭಕ್ಕೆ ಮುಂದಾದ ಕೇರಳ ಬಿಜೆಪಿಯ ದ್ವಂದ್ವ

- Advertisement -
- Advertisement -

ಕೇಂದ್ರದ ಮಾರ್ಗಸೂಚಿಯನ್ನು ಅನುಸರಿಸಿ ಕೇರಳದಲ್ಲಿ ದೇವಾಲಯಗಳನ್ನು ಪುನಃ ತೆರೆಯುತ್ತಿದ್ದಂತೆ ಕೇರಳ ಬಿಜೆಪಿ ಇದನ್ನು ’ತುರಾತುರಿ ಕ್ರಮ’ ಎಂದು ಬಣ್ಣಿಸಿ ರಾಜ್ಯ ಸರ್ಕಾರವನ್ನು ಟೀಕಿಸಿದೆ. ಆದರೆ ಈ ಹಿಂದೆ ಅದೇ ಬಿಜೆಪಿ ರಾಜ್ಯದಲ್ಲಿ ದೇವಾಲಯವನ್ನು ತೆರೆಯಬೇಕು ಎಂದು ಆಗ್ರಹಿಸಿತ್ತು. ಒಟ್ಟಿನಲ್ಲಿ ದೇವಾಲಯದ ವಿಷಯದಲ್ಲಿ ಬಿಜೆಪಿಯು ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ದೇವಾಲಯಗಳನ್ನು ತೆರೆಯುತ್ತಿದ್ದಂತೆ ಕೇರಳದ ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ವಿ ಮುರಳೀಧರನ್ ಈ ಕ್ರಮಕ್ಕೆ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ: “ಭಕ್ತರ ವಿರೋಧದ ನಡುವೆಯೂ ದೇವಾಲಯಗಳನ್ನು ಪುನಃ ತೆರೆಯುವುದರ ಹಿಂದೆ ಕೇರಳ ಸರ್ಕಾರವು ಬೇರೇನೋ ಕೆಟ್ಟ ಉದ್ದೇಶವನ್ನು ಹೊಂದಿದೆ. ದೇವಾಲಯವನ್ನು ತೆರೆಯಲು ಭಕ್ತರು ಅಥವಾ ದೇವಾಲಯ ಸಮಿತಿಗಳು ಒತ್ತಾಯಿಸಿಲ್ಲ” ಎಂದಿದ್ದಾರೆ.

“ಇಷ್ಟು ಆತುರ ಯಾಕೆ?  ಇದು ನಾಸ್ತಿಕ ‌ಪಿಣರಾಯಿ ವಿಜಯನ್ ಸರ್ಕಾರವು ಭಕ್ತರನ್ನು ನಿರಾಕರಿಸುವ ಉದ್ದೇಶಪೂರ್ವಕ ಪ್ರಯತ್ನವೇ? ಸರ್ಕಾರ ಭಕ್ತರ ಧ್ವನಿಗೆ ಕಿವಿಗೊಡಬೇಕು ಹಾಗೂ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು, ”ಎಂದು ಅವರು ಜೂನ್‌ 8 ರಂದು ಹೇಳಿದ್ದಾರೆ.

ಆದರೆ ಇದೇ ವಿ. ಮುರುಳೀಧರನ್ ದೇವಾಲಯವನ್ನು ತೆರೆಯದ ಕಾರಣಕ್ಕಾಗಿ ಈ ಹಿಂದೆ ಕೇರಳದ ಕಮ್ಯುನಿಷ್ಟ್ ಎಡ ಪಂಥೀಯ ಸರ್ಕಾರವನ್ನು ಟೀಕಿಸುತ್ತಿದ್ದರು.


ಓದಿ: ಕೇರಳದ ಗರ್ಭಿಣಿ ಆನೆ ಸಾವಿನ ಬಗ್ಗೆ ಬಲ ಪಂಥೀಯರು ಹರಡಿದ ಎರಡು ಸುಳ್ಳುಗಳು


ಮೇ 28 ರಂದು ಮುರಲೀಧರನ್ ಅವರು ರಾಜ್ಯಗಳಾದ್ಯಂತ ಮದ್ಯದ ಮಳಿಗೆಗಳು ತೆರೆದಿದೆ, ದೇವಾಲಯಗಳನ್ನೂ ತೆರೆಯಬಹುದು ಎಂದು ಹೇಳಿದ್ದರು. ದೇವಾಲಯಗಳನ್ನು ತೆರೆಯುವ ಮೂಲಕ ಭಕ್ತರ ಮೇಲೆ “ಕರುಣೆ ತೋರಿಸಿ” ಎಂದು ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ವಿಡಿಯೋ ನೋಡಿ

കള്ള് കുടിയന്മാരോടുള്ള താല്‍പര്യം ദൈവവിശ്വാസിയോടും കാണണം-കെ.മുരളീധരന്‍

കള്ള് കുടിയന്മാരോടുള്ള സര്‍ക്കാരിനുള്ള താല്‍പര്യം ദൈവവിശ്വാസിയോടും കാണിക്കണമെന്ന് കെ.മുരളീധരന്‍ എം.പി. ആരാധനാലയങ്ങള്‍ തുറക്കാനുള്ള സൗകര്യമൊരുക്കണം. മദ്യ ഷാപ്പ് തുറുന്നാല്‍ സാമൂഹിക അകലം പാലിക്കപ്പെടുന്നതും ആരാധനാലയങ്ങള്‍ തുറന്നാല്‍ സാമൂഹിക അകല ലംഘനം നടക്കുന്നതും എങ്ങനെയാണെന്ന് കെ.മുരളീധരന്‍ ചോദിച്ചു. വേണ്ടത്ര സുരക്ഷയൊരുക്കാനും മാനദണ്ഡങ്ങള്‍ പാലിക്കാനുമൊക്കെ ആരാധനാലയ ഭാരവാഹികളും ബന്ധപ്പെട്ടവരുമൊക്കെ തയ്യാറാണ്. വേണമെങ്കില്‍ വെര്‍ച്വല്‍ ക്യൂ സംവിധാനമൊക്കെ ഇവിടെയും നടപ്പാക്കാമെന്നും മുരളീധരന്‍ പറഞ്ഞു.ആരാധനാലയങ്ങള്‍ തുറക്കുന്നത് കൊണ്ട് ഒരു വ്യാപനവും ഉണ്ടാവില്ല. സംസ്ഥാനത്ത് ഇപ്പോള്‍ കൊറോണയുടെ സമൂഹ വ്യാപനമല്ല മദ്യത്തിന്റെ സമൂഹ വ്യാപനമാന്ന് ഉണ്ടായികൊണ്ടിരിക്കുന്നത്. ആപ്പ് സര്‍ക്കാരിനെ ആപ്പാക്കും. മന്ത്രി ടി.പി രാമകൃഷ്ണന്‍ ഭാവിയില്‍ ഒരു പാട് കാര്യങ്ങള്‍ക്ക് വിശദീകരണം നല്‍കേണ്ടി വരുമെന്നും മുരളീധരന്‍ പറഞ്ഞു.#Covid19 #Lockdown #Muraleedharan

Posted by Mathrubhumi on Thursday, May 28, 2020

ಕೊರೊನಾ ಲಾಕ್‌ಡೌನ್ ಅನ್ನು ಕ್ರಮೇಣ ತೆರವುಗೊಳಿಸುವ ಭಾಗವಾಗಿ ಲಾಕ್‌ಡೌನ್‌ 5.0 ಮಾರ್ಗಸೂಚಿಗಳಲ್ಲಿ ರೆಸ್ಟೋರೆಂಟ್‌ಗಳು, ಮಾಲ್‌ಗಳು ಹಾಗೂ ಪೂಜಾ ಸ್ಥಳಗಳನ್ನು ತೆರೆಯುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್‌ಒಪಿ) ಅನ್ನು ಜೂನ್ 4 ರಂದು ಕೇಂದ್ರ ಸರ್ಕಾರವೂ ಹೊರಡಿಸಿದೆ.

ಮುಖ್ಯಮಂತ್ರಿ ವಿಜಯನ್ ಈ ವಿಷಯದಲ್ಲಿ ಕೇಂದ್ರವು ಹೊರಡಿಸಿದ ಮಾರ್ಗಸೂಚಿಗಳನ್ನು ಕೇರಳ ಅನುಸರಿಸಲಿದೆ ಅಷ್ಟೇ ಎಂದು ಅವರ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಆದರೆ, ಈಗ ಕೇರಳ ರಾಜ್ಯ ಬಿಜೆಪಿ ಹಾಗೂ ಹಿಂದೂ ಐಕ್ಯ ವೇದಿಕೆ, ರಾಜ್ಯ ಸರ್ಕಾರವು ದೇವಾಲಯದ ಆದಾಯದ ಮೇಲೆ ಕಣ್ಣಿಟ್ಟಿದೆ ಎಂದು ಎಂದು ಆರೋಪಿಸುತ್ತಿದೆ. ದೇವಾಲಯಗಳನ್ನು ತೆರೆಯುವ ಬದಲು ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ದೇವಾಲಯಗಳಿಗೆ ಮತ್ತು ಅದರ ಉದ್ಯೋಗಿಗಳಿಗೆ ರಾಜ್ಯ ಸರ್ಕಾರ ಆರ್ಥಿಕ ಸಹಾಯವನ್ನು ನೀಡಬೇಕು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳದ ಎಡಪಕ್ಷ ಸರ್ಕಾರದ ರಾಜ್ಯ ಸಚಿವ ಕಡಕಂಪಲ್ಲಿ ಸುರೇಂದ್ರನ್ “ಈ ಕ್ರಮವನ್ನು ವಿರೋಧಿಸುತ್ತಿರುವವರು ಈ ಹಿಂದೆ ದೇವಾಲಯಗಳನ್ನು ಪುನಃ ತೆರೆಯಲು ಯಾಕೆ ಒತ್ತಾಯಿಸುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಅಸಾಧ್ಯವಾಗಿದೆ. ಕೇಂದ್ರದ ನಿರ್ದೇಶನದಂತೆ ಧಾರ್ಮಿಕ ಸ್ಥಳಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಇಬ್ಬಂದಿತನವನ್ನು ಬಹಿರಂಗಪಡಿಸಿದ ಅವರು, ಈಗ ದೇವಾಲಯಗಳನ್ನು ತೆರೆಯುವುದನ್ನು ವಿರೋಧಿಸುವವರು ಈ ಹಿಂದೆ ಭಕ್ತರಿಗೆ ಅವಕಾಶ ನೀಡಬೇಕೆಂದು ಬೊಬ್ಬೆಹಾಕಿದ್ದರು ಎಂದು ಅವರು ಹೇಳಿದ್ದಾರೆ.

ದೇವಾಲಯಗಳನ್ನು ಪುನಃ ತೆರೆಯುವ ಹಿಂದಿನ ಉದ್ದೇಶವೇ ಆದಾಯ ಎಂಬ ಆರೋಪವನ್ನು ತಳ್ಳಿಹಾಕಿದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಎನ್ ವಾಸು ಭಕ್ತರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು  ಹೇಳಿದ್ದಾರೆ.

ಕೇಂದ್ರದ ಎಸ್‌ಒಪಿಗಳ ಪ್ರಕಾರ, ಎಲ್ಲಾ ಪೂಜಾ ಸ್ಥಳಗಳಲ್ಲಿ ಸಾಮಾಜಿಕ ದೂರವನ್ನು ಅನುಸರಿಸಬೇಕು ಮತ್ತು ಭಕ್ತರು ಮಾಸ್ಕ್‌ಗಳನ್ನು ಧರಿಸಬೇಕು. 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪೂಜಾ ಸ್ಥಳಗಳಲ್ಲಿ ಅವಕಾಶವಿಲ್ಲ. ಆಹಾರ ವಿತರಣೆ, ಪ್ರಸಾದಗಳು ನೀಡುವಂತಿಲ್ಲ ಎಂದು ಸೂಚಿಸಿದೆ.


ಓದಿ: ಆನೆಯ ಹೆಸರಲ್ಲಿ ದ್ವೇಷ ಅಭಿಯಾನ ಮಾಡುವವರ ವಿರುದ್ದ ವಿಭಿನ್ನವಾಗಿ ಪ್ರತಿಕ್ರಿಯಿಸಿದ ಕೇರಳ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...