ಕೇರಳ | ಶರೋನ್ ರಾಜ್ ಕೊಲೆ ಪ್ರಕರಣ : ಗೆಳತಿ ಗ್ರೀಷ್ಮಾಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

ತನ್ನ ಪ್ರಣಯ ಸಂಬಂಧವನ್ನು ತಪ್ಪಿಸಲು ಪ್ರಿಯತಮಗೆ ವಿಷಪ್ರಾಶನ ಮಾಡಿ ಕೊಲೆಗೈದಿದ್ದ ಯುವತಿಗೆ ಕೇರಳದ ನೆಯ್ಯತ್ತಿಂಕರ ಸೆಷನ್ಸ್ ಕೋರ್ಟ್ ಮರಣದಂಡನೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಗ್ರೀಷ್ಮಾ ಮರಣದಂಡನೆಗೆ ಗುರಿಯಾದ ಅಪರಾಧಿ. ಈಕೆ ತನ್ನ ಪ್ರಿಯತಮ ಶರೋನ್ ರಾಜ್‌ಗೆ ವಿಷಪ್ರಾಶನ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಕಳೆದ ವಾರ ಕೋರ್ಟ್ ಘೋಷಣೆ ಮಾಡಿತ್ತು. ಮರಣದಂಡನೆಯ ಜೊತೆಗೆ ಗ್ರೀಷ್ಮಾಗೆ ಅಪಹರಣ/ ಕೊಲೆ ಮಾಡಲು ಅಪಹರಿಸಿದ ಅಪರಾಧಕ್ಕಾಗಿ (ಐಪಿಸಿ ಸೆಕ್ಷನ್ 364) 10 ವರ್ಷಗಳ ಜೈಲು ಶಿಕ್ಷೆ ಮತ್ತು … Continue reading ಕೇರಳ | ಶರೋನ್ ರಾಜ್ ಕೊಲೆ ಪ್ರಕರಣ : ಗೆಳತಿ ಗ್ರೀಷ್ಮಾಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ