Homeಮುಖಪುಟಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!

ಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!

- Advertisement -
- Advertisement -

ಕೊರೊನಾ ವಿರುದ್ದದ ಹೋರಾಟದಲ್ಲಿ ಕೇರಳ ಎಂಬ ಭಾರತದ ಪುಟ್ಟ ರಾಜ್ಯ ಕೇವಲ ಭಾರತಕ್ಕೆ ಮಾತ್ರ ಮಾದರಿಯಾಗಿ ನಿಂತಿಲ್ಲ. ಈ ಸೋಂಕಿನ ವಿರುದ್ದ ಕೇರಳ ನಡೆಸುತ್ತಿರುವ ಮಾದರಿಯೋಗ್ಯ ಹೋರಾಟದ ವರದಿಗಳು ಬಿಬಿಸಿಯಿಂದ ಹಿಡಿದು ನೈಜೀರಿಯಾ ಡೈಲಿಯವರೆಗಿನ ವಿಶ್ವದಾದ್ಯಂತ ಸುಮಾರು 30 ಕ್ಕಿಂತಲೂ ಹೆಚ್ಚು ಪತ್ರಿಕೆಗಳಲ್ಲಿ ವಿಶೇಷ ವರದಿಯಾಗಿವೆ.

ಭಾರತದ ಮೊದಲ ಕೊರೊನಾ ವೈರಸ್  ಪ್ರಕರಣದಲ್ಲಿ ಕೇರಳದಲ್ಲಿ ವರದಿಯಾದಾಗ ಬಿಬಿಸಿ ಮತ್ತು ಇತರ ಕೆಲವು ಮುಖ್ಯ ಸುದ್ದಿ ವಾಹಿನಿಗಳು ಸುದ್ದಿ ಮಾಡಿದ್ದವು. ಆದರೆ ಅಲ್ಲಿನ ಮಾದರಿಯೋಗ್ಯ ಆರೋಗ್ಯ ವ್ಯವಸ್ಥೆ ಸೋಂಕು ಹರಡುವುದನ್ನು ತಡೆಯಿತು. ನಂತರ ದೇಶದಾದ್ಯಂತದ ಇತರ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿದ್ದಂತೆ, ಕೇರಳವು ಸೋಂಕಿನ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಚಿಕಿತ್ಸೆಯ ಕಾರ್ಯವಿಧಾನದಲ್ಲಿನ ವಿಷಯಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಂಡ ಪರಿಣಾಮ ಸೋಂಕು ರಾಜ್ಯದಲ್ಲಿ ಹತೋಟಿಗೆ ಬಂದಿದೆ. ಭಾರತಕ್ಕೆ ಕೊರೊನಾ ಕಾಲಿಟ್ಟ ನಂತರ ಅತೀ ಹೆಚ್ಚು ಕೊರೊನಾ ಪ್ರಕರಣಗಳಿದ್ದ ಕೇರಳದಲ್ಲಿ ಪ್ರಸ್ತುತ ಸಕ್ರಿಯ ಸೋಂಕು ಪ್ರಕರಣಗಳು ಕೇವಲ 32.

ದೇಶ ಹಾಗೂ ವಿಶ್ವದಾದ್ಯಂತದ  ಕೊರೊನಾ ಹರಡಲು ಪ್ರಾರಂಭಿಸಿದಾಗ, ಜಗತ್ತಿನಾದ್ಯಂತ ಮಾಧ್ಯಮಗಳ ಕಣ್ಣುಗಳು ಕೇರಳದತ್ತ ನೆಟ್ಟಿತ್ತು. ಭಾರತದಲ್ಲೇ ಅತೀ ಹೆಚ್ಚು ಅನಿವಾಸಿಗಳಿರುವ ರಾಜ್ಯಗಳಲ್ಲಿ ಒಂದಾದ ಕೇರಳದಲ್ಲಿ ಕೊರೊನಾ ಸಾವಿನ ಪ್ರಕರಣಗಳು ನಾಲ್ಕು. ಕೊರೊನಾ ವಿರುದ್ದದ ಕೇರಳ ಮಾದರಿಯ ಹೋರಾಟವನ್ನು ವಿಶ್ವದ ಮುಂದುವರೆದ ದೇಶಗಳಾದ ಬ್ರಿಟನ್, ಅಮೆರಿಕಾ, ಕೆನಡಾ, ಇಟಲಿ, ಫ್ರಾನ್ಸ್ ಮತ್ತು ಅರಬ್ ರಾಷ್ಟ್ರಗಳ ಹಲವಾರು ಪತ್ರಿಕೆಗಳು ವರದಿಗಳನ್ನು ಮಾಡಿವೆ. ಅವುಗಳಲ್ಲಿ ಕೆಲವು ಇಲ್ಲಿವೆ…

ಬಿಬಿಸಿ (ಲಂಡನ್)

ಕೇರಳ ತನ್ನ ಕೊರೊನಾ ರೇಖೆಯನ್ನು ಹೇಗೆ ಚಪ್ಪಟೆಗೊಳಿಸಿದೆ ಎಂಬ ಬಗ್ಗೆ ಬಿಬಿಸಿ ವರದಿ ಸಿದ್ಧಪಡಿಸಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ. “ವರ್ಕ್ ಲೈಕ್ ಕೇರಳ” ಎಂಬ ಶೀರ್ಷಿಕೆಯ ತನ್ನ ದೂರದರ್ಶನ ಕಾರ್ಯಕ್ರಮದಲ್ಲಿ, ನಿಫಾ ಸೋಂಕಿನಿಂದ ಹಿಡಿದು ಕೊರೊನಾ ಮೊದಲನೇ ಪ್ರಕರಣ ವರದಿ ಮಾಡಿದವರೆಗಿನ ಕೇರಳದ ಹೋರಾಟವನ್ನು ಬಿಬಿಸಿ ತೋರಿಸಿತು.

ಟ್ರಿಬ್ಯೂನ್ ಮ್ಯಾಗಝಿನ್

ಗಾರ್ಡಿಯನ್ ತನ್ನ ಸುದ್ದಿಯಲ್ಲಿ ಕೇರಳದ ಕಮ್ಯುನಿಸ್ಟ್ ಸರ್ಕಾರವು ಕೊರೊನಾ ವೈರಸ್ ತಗ್ಗಿಸುವ ಗುರಿಗಳನ್ನು ಹೇಗೆ ಸಾಧಿಸಿದೆ ಎಂಬುದನ್ನು ಹೇಳಿದೆ. ಸಾಂಕ್ರಾಮಿಕ ಸಮಯದಲ್ಲಿ ತನ್ನ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುವುದರ ಜೊತೆಗೆ ರಾಜ್ಯದ ಆರ್ಥಿಕತೆ ಹೇಗೆ ನಿರ್ವಹಿಸಿತು ಎಂದು ಕೂಡಾ ವರದಿ ಮಾಡಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ಆರ್ ಟಿ ಅಮೇರಿಕಾ ನ್ಯೂಸ್ (ಅಮೇರಿಕಾ)

ಕೇರಳ ಮಾದರಿಯನ್ನು ಕೇಂದ್ರೀಕರಿಸಿದ ಮಾತುಕತೆ ಕಾರ್ಯಕ್ರಮದಲ್ಲಿ, ಆರೋಗ್ಯ ತಜ್ಞರು ಕೇರಳದ ವೈದ್ಯಕೀಯ ವಿಧಾನ ಹೇಗೆ ವೈರಸ್ ಹರಡುವುದನ್ನು ತಡೆದಿದೆ ಎಂಬ ಬಗ್ಗೆ ಹೇಳಲಾಗಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ದಿ ಎಕನಾಮಿಸ್ಟ್ (ಲಂಡನ್)

ಸಾಂಕ್ರಾಮಿಕ ರೋಗವನ್ನು ಅಸಾಧಾರಣ ಯಶಸ್ಸಿನೊಂದಿಗೆ ನಿಭಾಯಿಸಲು ತಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದೃಡತೆ ಹೇಗೆ ಕಲಸ ಮಾಡಿದೆ ಎಂದು ತೋರಿಸಲು ವಿಯೆಟ್ನಾಂ ಮತ್ತು ಕೇರಳದಲ್ಲಿ ಅಳವಡಿಸಲಾಗಿರುವ ವೈರಸ್ ತಡೆ ಕ್ರಮಗಳನ್ನು ಲೇಖನವೊಂದು ತಿಳಿಸುತ್ತದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ದಿ ವೋಗ್ (ಅಮೆರಿಕಾ)

ಕೇರಳದ ಆರೋಗ್ಯ ಮಂತ್ರಿ ಕೆ.ಕೆ.ಶೈಲಜಾ ಅವರು ಅಮೆರಿಕದ ಪ್ರಮುಖ ಫ್ಯಾಷನ್ ಮತ್ತು ಜೀವನಶೈಲಿ ನಿಯತಕಾಲಿಕ ದಿ ವೋಗ್ ಏಪ್ರಿಲ್ ಸಂಚಿಕೆಯಲ್ಲಿ ಕಾಣಿಸಿಕೊಂಡು, ಅವರು ಕೇರಳದಲ್ಲಿ ಸಾಂಕ್ರಮಿಕ ರೋಗದಿಂದ ಹೇಗೆ ಕೇರಳವನ್ನು ಹೊರತಂದರು ಎಂದು ಬರೆಯಲಾಗಿದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

Vogue Warriors: Meet Kerala’s health minister who is taking the state out of the pandemic

ಅರಬ್ ನ್ಯೂಸ್ (ಸೌದಿ ಅರೇಬಿಯಾ)

ಈ ವರದಿಯು ಕೇರಳದಲ್ಲಿ  ಕೊರೊನಾ ನಿರ್ವಹಣಾ ಚಿತ್ರಣವನ್ನು ಪರಿಶೀಲಿದಲ್ಲದೆ, ಕೇರಳವು ರಾಷ್ಟ್ರೀಯ 11 ಪ್ರತಿಶತದ ವಿರುದ್ಧ 50 ಪ್ರತಿಶತದಷ್ಟು ಚೇತರಿಕೆ ದರವನ್ನು ಹೇಗೆ ದಾಖಲಿಸಿದೆ ಎಂಬುದನ್ನು ತೋರಿಸುತ್ತದೆ. ಲಿಂಕ್  ಗೆ ಇಲ್ಲಿ ಕ್ಲಿಕ್ ಮಾಡಿ.

ಇಷ್ಟೇ ಅಲ್ಲದೆ ಕೇರಳ ಕೊರೊನಾ ವಿರುದ್ದ ಮಾದರಿ ಹೋರಾಟವನ್ನು ಹೇಗೆ ನಿಭಾಯಿಸಿತು ಎನ್ನುವುದು, ಇತರ ಜಾಗತಿಕ ಮಾಧ್ಯಮಗಳಲ್ಲಿ ಸುದ್ದಿಯಾದ ಲಿಂಕುಗಳು ಇಲ್ಲಿವೆ :

 Voice of America(ಅಮೆರಿಕಾ)

MIT Technology Review (ಕೇಂಬ್ರಿಡ್ಜ್)

National Post (ಕೆನಡ)

The Diplomat (ಜಪಾನ್)

The National Middle East (ಅಬುದಾಬಿ, ದುಬೈ)

Gulf News(ದುಬೈ)

Khaleej Times(ದುಬೈ)

France Le Munde (ಫ್ರಾನ್ಸ್)

France Courier International (ಫ್ರಾನ್ಸ್)

France Science Souvenir (ಫ್ರಾನ್ಸ್)

Italy La Stump(ಇಟೆಲಿ)

Italy Republic (ಇಟೆಲಿ)

Germany Jungle Wealth(ಜರ್ಮನಿ)

South China Morning Post ‌(ಚೀನಾ)

Strait Times (ಸಿಂಗಾಪುರ್)

Nigeria Pungence (ನೈಜೀರಿಯಾ)

New Prime South Africa(ದಕ್ಷಿಣ ಆಫ್ರಿಕಾ)

Turkey Evergreen (ತುರ್ಕಿ)

Europe  Solidaire

Daka Tribunal(ಬಾಂಗ್ಲಾದೇಶ)

Path (Org)

Alternate (ಯು.ಎ.ಇ)

Presence(ಬ್ರಿಟನ್)

France Humanite (ಫ್ರಾನ್ಸ್)

Poland Strjk (ಪೋಲಾಂಡ್)

Brasildefato (ಬ್ರೆಜಿಲ್)


ಇದನ್ನೂ ಓದಿ: ಭಾರತವೆಂಬ ಗಣರಾಜ್ಯ ಅನುಸರಿಸಬೇಕಾದ ದಾರಿ ಕೇರಳ ರಾಜ್ಯದಲ್ಲಿದೆ


ವಿಡಿಯೋ ನೋಡಿ: ಸದ್ದು…ಈ ಸುದ್ದಿ ಏನಾಗಿದೆ 8ನೇ ಸಂಚಿಕೆ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕೇರಳದ ಮಾದರಿಯನ್ನು ನಮ್ಮ ದೇಶದ ಎಲ್ಲ ರಾಜ್ಯಗಳು ಅನುಸರಿಸಬೇಕು.

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...