ಕೇರಳದ ಪಟ್ಟನಂತಿಟ್ಟದಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಎಸ್‌ಐ ಜಿನು ಸೇರಿದಂತೆ ನಾಲ್ವರು ಜನರನ್ನು ಅಮಾನತುಗೊಳಿಸಲಾಗಿದ್ದು, ಡಿಐಜಿ ಅಜಿತಾ ಬೇಗಂ ಅವರು ಈ ಕ್ರಮ ಕೈಗೊಂಡಿದ್ದಾರೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ, ಪಟ್ಟನಂತಿಟ್ಟ ಪೊಲೀಸ್ ಠಾಣೆಯ ಎಸ್‌ಐ ಜಿನು ಮತ್ತು ಅವರ ತಂಡ, ಯಾವುದೇ ಕಾರಣವಿಲ್ಲದೆ ಅಡೂರಿನಲ್ಲಿ ಮದುವೆ ಸಮಾರಂಭದಿಂದ ಹಿಂತಿರುಗಿದ್ದ ಕುಟುಂಬವನ್ನು ಥಳಿಸಿದ್ದಾರೆ. ಹೊಡೆತದ ಸಮಯದಲ್ಲಿ ಶ್ರೀಜಿತ್ ತಲೆಗೆ ಗಂಭೀರ ಗಾಯಗಳಾಗಿವೆ.
ಅವರ ಪತ್ನಿ ಸಿತಾರಾ ಅವರನ್ನೂ ಥಳಿಸಲಾಗಿದ್ದು, ಮಹಿಳಾ ಪೊಲೀಸ್ ಅಧಿಕಾರಿಯೂ ಇಲ್ಲದೆ ಪೊಲೀಸರು ದಲಿತ ಕುಟುಂಬವನ್ನು ಥಳಿಸಿದರು. ಸಂತ್ರಸ್ತೆಯ ಕುಟುಂಬವು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಎಸ್‌ಸಿ-ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದೆ.
ಸಿತಾರಾ ಅವರ ದೂರಿನ ಮೇರೆಗೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಆರೋಪಿಗಳ ಹೆಸರುಗಳು ಇರಲಿಲ್ಲ. ಇದು ಅಪರಾಧಿಗಳನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿದೆ ಎಂದು ಕುಟುಂಬವು ಶಂಕಿಸಿದೆ. ಸರ್ಕಾರಿ ಮಟ್ಟದಲ್ಲಿ ನ್ಯಾಯ ದೊರೆಯದಿದ್ದರೆ ನ್ಯಾಯಾಲಯದ ಮೊರೆ ಹೋಗಲು ಸಂತ್ರಸ್ತೆಯ ಕುಟುಂಬ ನಿರ್ಧರಿಸಿದೆ.
ಇದನ್ನೂ ಒದಿ; ಅಯೋಧ್ಯೆ | ದಲಿತ ಯುವತಿಯ ನಗ್ನ ಶವ ಪತ್ತೆ; ಸಾಮೂಹಿಕ ಅತ್ಯಾಚಾರ, ಕೊಲೆ ಶಂಕೆ


