ಕೇರಳದ ತ್ರಿಶೂರ್ ಜಿಲ್ಲೆಯ ದೇವಾಲಯದಲ್ಲಿ ಕೊರೊನಾ ಲಾಕ್‌ಡೌನ್ ನಿಷೇಧವನ್ನು ಉಲ್ಲಂಘಿಸಿ ಭಾಗವತ ಪ್ರವಚನವನ್ನು ನಡೆಸಿದ್ದಕ್ಕೆ ಬಿಜೆಪಿ ರಾಜ್ಯ ಸಮಿತಿ ಸದಸ್ಯನ ಸಹಿತ ಐವರನ್ನು ಬಂಧಿಸಲಾಗಿದೆ.
ತ್ರಿಶೂರ್ ಜಿಲ್ಲೆಯ ಎರುಮಪೆಟ್ಟಿ ವಳಿಯೊಟ್ಟಿಮುರಿ ನರಸಿಂಹ ಮೂರ್ತಿ ದೇವಸ್ಥಾನದಲ್ಲಿ ದೇವಾಸ್ಥಾನದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದಲ್ಲಿ ಕಳೆದ ರಾತ್ರಿ ಭಾಗವತ ಪ್ರವಚನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಪೋಲಿಸರು ಪ್ರಕರಣವನ್ನು ದಾಖಲಿಸಿ ಘಟನೆಗೆ ಜವಬ್ದಾರರೆಂದು ಐದು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೇರಳ ರಾಜ್ಯ ಸಮಿತಿ ಸದಸ್ಯ ಕೂಡಾ ಇದ್ದಾರೆ ಎಂದು ದೇಶಾಭಿಮಾನಿ.ಕಾಂ ವರದಿ ಮಾಡಿದೆ.
ದೇವಾಲಯವನ್ನು ಆರೆಸ್ಸೆಸ್ ನಿಯಂತ್ರಿಸುತ್ತಿದ್ದು, ಲಾಕ್‌ಡೌನ್ ಆದೇಶಗಳ ಹೊರತಾಗಿಯೂ ದೇವಾಲಯವನ್ನು ಮುಚ್ಚಿರಲಿಲ್ಲ. ದೇವಾಲಯಕ್ಕೆ ಎಲ್ಲಾ ದಿನವೂ ನಿಯಮಿತವಾಗಿ ಭಕ್ತರು ಭೇಟಿ ನೀಡುತ್ತಿದ್ದರು ಎಂದು ವರದಿಯಾಗಿದೆ.
ಕೊರೊನಾ ಲಾಕ್‌ಡೌನ್ ನಿಯಮಗಳ ಪ್ರಕಾರ ಯಾವುದೇ ಆರಾಧನಾಲಯಗಳನ್ನು ಹಾಗೂ ಧಾರ್ಮಿಕ ಸಭೆ ಅಥವಾ ಸಾರ್ವಜನಿಕ ಸಮಾರಂಭಳನ್ನು ನಡೆಸುವಂತಿಲ್ಲ.
ಕೇರಳದಲ್ಲಿ ಇದುವರೆಗೂ 502 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೆ 4 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ ಕೇರಳದ್ಲಲಿ ಕೇವಲ 25 ಸಕ್ರಿಯ ಕೊರೊನಾ ಸೋಂಕಿತರಿದ್ದು, 474 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಇದನ್ನೂ ಓದಿ: ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ನಮ್ಮ ಇಂಗ್ಲಿಷ್ ವೆಬ್ಸೈಟ್ ಓದಲು ಇಲ್ಲಿ ಕ್ಲಿಕ್ ಮಾಡಿ


