ಕೊರೊನಾ ಹಿನ್ನಲೆಯಲ್ಲಿ ಮುಚ್ಚಿದ್ದ ಕೇರಳ ಪ್ರವಾಸೋದ್ಯಮ ಮತ್ತೇ ಆರಂಭವಾಗಿದ್ದು, ಪ್ರಸ್ತುತ 114 ಪ್ರವಾಸಿ ಕೇಂದ್ರಗಳನ್ನು ತೆರೆಯಲಾಗಿದೆ. ಪುನರಾರಂಭವು ಮುಂಜಾಗರೂಕತೆಯಿಂದ ಕೂಡಿದ್ದು, ಮೊದಲ ಹಂತದಲ್ಲಿ ಕಟ್ಟುನಿಟ್ಟಾದ ಕೊರೊನಾ ಮಾರ್ಗಸೂಚಿ ಮೂಲಕ ಸ್ಥಳೀಯ ಪ್ರವಾಸಿಗರನ್ನು ಮಾತ್ರ ಅನುಮತಿಸಲಾಗುತ್ತಿದೆ.

ತಿರುವನಂತಪುರಂ ಜಿಲ್ಲೆಯ 7 ಕೇಂದ್ರಗಳು; ಕೊಲ್ಲಂ ಜಿಲ್ಲೆಯ 11; ಪತ್ತನಂತಿಟ್ಟನ 5; ಆಲಪ್ಪುಝದ 3; ಕೊಟ್ಟಾಯಂನ 5; ಇಡುಕ್ಕಿಯ 14; ಎರ್ನಾಕುಲಂನ 5; ತ್ರಿಶೂರಿನ 10; ಪಾಲಕ್ಕಾಡಿನ 11; ಮಲಪ್ಪುರಂನ 12; ಕೋಝಿಕೋಡಿನ 2; ವಯನಾಡಿನ 11; ಕಣ್ಣೂರಿನ 12 ಮತ್ತು ಕಾಸರಗೋಡಿನ 6 ಕೇಂದ್ರಗಳನ್ನು ತೆರೆಯಲಾಗಿದೆ. ಸುರಕ್ಷತೆಯ ಕಾರಣಕ್ಕಾಗಿ ರಾಜಧಾನಿಯಲ್ಲಿನ ಪೊನ್ಮುಡಿಯನ್ನು ಇನ್ನೂ ತೆರೆಯಲಿಲ್ಲ.
ಇದನ್ನೂ ಓದಿ: ಪ್ರತಿ ಸರ್ಕಾರಿ ಶಾಲೆಗಳಲ್ಲಿ ಹೈಟೆಕ್ ಕ್ಲಾಸ್‌ರೂಂ ಇರುವ ದೇಶದ ಏಕೈಕ ರಾಜ್ಯ; ಕೇರಳ!
ಪ್ರವಾಸಿ ತಾಣಕ್ಕೆ ಅದರ ಗಾತ್ರ ಹಾಗೂ ವೈಶಿಷ್ಯಗಳನ್ನು ಅವಲಂಬಿಸಿ 15 ರಿಂದ 500 ಜನರನ್ನು ಸೀಮಿತಗೊಳಿಸಲಾಗಿದ್ದು, ಪ್ರವಾಸಿ ತಾಣದ ಸ್ಪಾಟ್‌ಗೆ ಕೇವಲ 6 ಜನರನ್ನು ಮಾತ್ರ ಅನುಮತಿಸಲಾಗುತ್ತದೆ.
ಪೂರ್ಣ ಪುನರಾರಂಭಕ್ಕೆ ಬೇಕಾಗಿ ರೆಸಾರ್ಟ್‌ಗಳ ಮತ್ತು ಹೌಸ್‌ಬೋಟ್‌ಗಳ ತಯಾರಿ ನಡೆಯುತ್ತಿದೆ. ಕೋವಲಂ, ವರ್ಕಲಾ, ಕೊಲ್ಲಂ, ಪೆರುಂತನರುವಿ, ತಟ್ಟಕೋಡ್, ಕಪ್ಪಡ್, ಪಯ್ಯಂಬಳ ಮತ್ತು ಬೇಕಲ್ ಸೇರಿದಂತೆ ಕಡಲತೀರಗಳು ಮತ್ತು ಜಲಪಾತಗಳನ್ನು ಒಳಗೊಂಡ 46 ಪ್ರವಾಸಿ ಕೇಂದ್ರಗಳು ನವೆಂಬರ್ 1 ರೊಳಗೆ ತೆರೆಯಲಿವೆ. ಈ ಹಿಂದೆಯೆ ಅರಣ್ಯ ಪ್ರದೇಶಗಳಲ್ಲಿನ ಪರಿಸರ ಪ್ರವಾಸೋದ್ಯಮ ಪ್ರಾರಂಭವಾಗಿತ್ತು.

ಕೊರೊನಾದ ನಿರ್ಬಂಧದಿಂದ ಕುಸಿದಿದ್ದ ಪ್ರವಾಸೋದ್ಯಮವನ್ನು ಜನವರಿಯಿಂದ ಮರಳಿ ಸಾಮಾನ್ಯ ಸ್ಥಿತಿಗೆ ತರುವ ಗುರಿಯನ್ನು ಹೊಂದಿದೆ. ದೇಶಾದ್ಯಂತದ ಪ್ರವಾಸಿಗರನ್ನು ಸೆಳೆಯಲು ಪೂರ್ಣ ಪ್ರಮಾಣದ ಸಿದ್ಧತೆಗಳು ನಡೆಯುತ್ತಿವೆ.
ಇದನ್ನೂ ಓದಿ: ಆರೋಗ್ಯ ಇಲಾಖೆಯನ್ನು ಕೇರಳ ಮಾದರಿಯಲ್ಲಿ ರೂಪಿಸಲಾಗುವುದು: ಆರೋಗ್ಯ ಸಚಿವ ಸುಧಾಕರ್


