Homeಮುಖಪುಟಬಲವಂತದ ಮದುವೆಗೆ ಒಪ್ಪದ ಅಪ್ರಾಪ್ತ ಬಾಲಕಿಯ ಅಪಹರಣ: ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ತಾಯಿ ಆರೋಪ

ಬಲವಂತದ ಮದುವೆಗೆ ಒಪ್ಪದ ಅಪ್ರಾಪ್ತ ಬಾಲಕಿಯ ಅಪಹರಣ: ಪೊಲೀಸ್ ನಿಷ್ಕ್ರಿಯತೆಯ ಬಗ್ಗೆ ತಾಯಿ ಆರೋಪ

- Advertisement -
- Advertisement -

ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು ಬಲವಂತದ ಮದುವೆಗೆ ಒತ್ತಡದ ನಡುವೆ ಅಪಹರಿಸಲಾಗಿದೆ ಎಂದು ಆರೋಪಿಸಲಾಗಿದೆ. ಪೊಲೀಸ್ ದೂರು ನೀಡಿ ಸಹಾಯಕ್ಕಾಗಿ ಪದೇ ಪದೇ ಮನವಿ ಮಾಡಿದರೂ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ. 

11ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ರಾಜಾ ಮತ್ತು ಡಕುವಾ ಎಂದು ಕುಟುಂಬದಿಂದ ಗುರುತಿಸಲ್ಪಟ್ಟ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆಕೆಯ ತಾಯಿ ಹೌರಾ ನಿವಾಸಿ ಗುಲ್ಶನ್ ಬೇಗಂ ತಿಳಿಸಿದ್ದಾರೆ.

ಬಲವಂತದ ಮದುವೆಗೆ ಹುಡುಗಿ ನಿರಂತರ ಒತ್ತಡಕ್ಕೊಳಗಾಗಿದ್ದಳು, ಆದರೆ ಅವಳು ಕಾನೂನುಬದ್ಧವಾಗಿ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಮತ್ತು ಹುಡುಗ ಸೂಕ್ತನಲ್ಲದ ಕಾರಣ ಮದುವೆಯನ್ನು ನಿರಾಕರಿಸಿದ್ದಾಗಿ ಕುಟುಂಬ ತಿಳಿಸಿದೆ. 

ಈ ಬಗ್ಗೆ ಮಕ್ತೂಬ್ ಮೀಡಿಯಾದ ಜೊತೆ ಮಾತನಾಡಿರುವ ಬಾಲಕಿಯ ತಾಯಿ ಗುಲ್ಶನ್ ಬೇಗಂ, ಬೆದರಿಕೆಗಳು ಸ್ಪಷ್ಟವಾಗಿದ್ದವು ಎಂದು ಹೇಳಿದ್ದಾರೆ. “ಸುಲ್ತಾನ್‌ಪುರದ ಹುಡುಗ ಮತ್ತು ಅವನ ಚಿಕ್ಕಪ್ಪ ನಮಗೆ ಸ್ಪಷ್ಟವಾಗಿ ಹೇಳಿದ್ದರು, ನೀವು ಮದುವೆಗೆ ಒಪ್ಪದಿದ್ದರೆ, ನಾವು ನಿಮ್ಮ ಮಗಳನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಹೇಳಿದ್ದರು. “ಈ ಮದುವೆಗೆ ನಾವು ಬೇಡ ಅಂದೆವು ಏಕೆಂದರೆ ಅವಳಿಗೆ ಕೇವಲ 17 ವರ್ಷ ಮತ್ತು ಇನ್ನೂ ಓದುತ್ತಿದ್ದಳು. ಅವಳು ಓದಲು ಬಯಸಿದ್ದಳು ಮತ್ತು ಅವಳಿಗೆ ಆ ಹುಡುಗ ಇಷ್ಟವಿರಲಿಲ್ಲ” ಎಂದು ಹೇಳಿದ್ದಾರೆ. 

ಕುಟುಂಬದ ಪ್ರಕಾರ, ಬೆದರಿಕೆಗಳ ನಂತರ ಬಾಲಕಿಯ ಅಪಹರಣ ನಡೆದಿದೆ. ಗುಲ್ಶನ್ ಬೇಗಂ ಅವರು ತಮ್ಮ ಮಗಳನ್ನು ಅಂದಿನಿಂದ ತನ್ನ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

“ನನ್ನ ಮಗಳನ್ನು ಬಲವಂತವಾಗಿ ಕರೆದುಕೊಂಡು ಹೋಗಲಾಗಿದೆ. ಅವಳು ಇನ್ನೂ ಮಗು,”ಅವಳು ದುಃಖಿಸುತ್ತಾ ಹೇಳಿದಳು. “ಅಂದಿನಿಂದ ನಾವು ಅವಳನ್ನು ನೋಡಿಲ್ಲ.”

ಜನವರಿ 22 ರಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಬೆದರಿಕೆಗಳು, ಬಲವಂತದ ಮದುವೆಗೆ ಯತ್ನಿಸಿದ್ದು ಮತ್ತು ಅಪಹರಣದ ಆರೋಪದ ಬಗ್ಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿರುವುದಾಗಿ ಕುಟುಂಬ ತಿಳಿಸಿದೆ. ಆದರೆ, ಯಾವುದೇ ನಿರ್ದಿಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

“ಎರಡು ದಿನಗಳು ಕಳೆದಿವೆ. ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಓಡುತ್ತಿದ್ದೇವೆ” ಎಂದು ಗುಲ್ಶನ್ ಬೇಗಂ ಹೇಳಿದರು.

“ನಾವು ಬಡವರು. ನಮ್ಮ ಮಗುವಿಗಾಗಿ ಹಗಲಿರುಳು ಅಳುತ್ತಿದ್ದೇವೆ, ಆದರೆ ಆಡಳಿತ ಮೌನವಾಗಿ ಕುಳಿತಿದೆ. ಎಫ್‌ಐಆರ್ ದಾಖಲಾದ ನಂತರವೂ ಆರೋಪಿಗಳು ಮತ್ತು ಅವರ ಸಹಚರರು ದೂರನ್ನು ಹಿಂಪಡೆಯುವಂತೆ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಾಯಿ ಆರೋಪಿಸಿದ್ದಾರೆ.

ಅಲ್ಲದೇ “ಅವರು ಮತ್ತೆ ನಮಗೆ ಬೆದರಿಕೆ ಹಾಕುತ್ತಿದ್ದಾರೆ, ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಕೇಳುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. 

“ನಮಗೆ ಭಯವಾಗಿದೆ, ಆದರೆ ಒಬ್ಬ ತಾಯಿ ತನ್ನ ಮಗಳು ಕಾಣೆಯಾದಾಗ ಹೇಗೆ ಮೌನವಾಗಿರಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. 

ಪ್ರಕರಣ ಸಂಬಂಢ ಅಪಹರಣಕ್ಕಾಗಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137(20) ಮತ್ತು 140(3) ಅಡಿಯಲ್ಲಿ ಜಗಚಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

“ಹುಡುಗಿ ಮತ್ತು ಹುಡುಗ ಇಬ್ಬರೂ ಪತ್ತೆಯಾಗಿಲ್ಲ” ಎಂದು ಜಗಚಾ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

“ನಾವು ಹುಡುಗನ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ, ಆದರೆ ಅದು ಇನ್ನೂ ಸ್ವಿಚ್ ಆಫ್ ಆಗಿದೆ. ಸುಳಿವು ಸಿಕ್ಕ ತಕ್ಷಣ, ನಾವು ಅವನನ್ನು ಬಂಧಿಸಿ ಮುಂದಿನ ತನಿಖೆಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ. 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಬಿ-ರಾಮ್ ಜಿ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ-ರಾಮ್ ಜಿ ಕಾಯ್ದೆ ರದ್ದಾಗಿ ನರೇಗಾ ಪುನಃಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಗಳವಾರ (ಜ.27) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಯುಸಿಸಿಯಲ್ಲಿ 18 ಬದಲಾವಣೆ ಮಾಡಿದ ಉತ್ತರಾಖಂಡ್ ಸರ್ಕಾರ; ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಜಾರಿಗೆ

ವಿವಾಹ, ವಿಚ್ಛೇದನ, ಲಿವ್-ಇನ್ ಸಂಬಂಧಗಳು ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸುವ ಗುರಿಯನ್ನು ಹೊಂದಿರುವ ಸುಮಾರು ಹದಿನೆಂಟು ಬದಲಾವಣೆಗಳನ್ನು ಪರಿಚಯಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಹಲವಾರು ನಿಬಂಧನೆಗಳನ್ನು ಮಾರ್ಪಡಿಸಲು ಉತ್ತರಾಖಂಡ ಸರ್ಕಾರ...

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮಗಾಂಧಿ ಹೆಸರು: ಸಿಎಂ ಸಿದ್ದರಾಮಯ್ಯ ಘೋಷಣೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮಹಾತ್ಮ ಗಾಂಧಿಯವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಕೇಂದ್ರ ಸರ್ಕಾರ ನರೇಗಾ ಬದಲಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್‌ ಜಿ ಕಾಯ್ದೆ ವಿರುದ್ದ ಬೆಂಗಳೂರಿನ ಸ್ವಾತಂತ್ರ್ಯ...

ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಇಬ್ಬರು ಬುಡಕಟ್ಟು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ

ಗಿರಿದಿಹ್: ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಭಾನುವಾರ ರಾತ್ರಿ ಪಿರ್ತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಲಾದಿಹ್ ಪ್ರದೇಶದಲ್ಲಿ ಈ ಘಟನೆ...

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ : ಪ್ರಬಲ ಜಾತಿಯವರಿಂದ ತೀವ್ರ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಪ್ರಬಲ ಜಾತಿಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊಸ ನಿಯಮಗಳ 'ಜಾತಿ ಆಧಾರಿತ ತಾರತಮ್ಯ' ಎಂಬುವುದರ...

ಶೇ. 50ಕ್ಕಿಂತ ಹೆಚ್ಚಿನ ಬೆಲೆಗೆ ಅದಾನಿಯಿಂದ ವಿದ್ಯುತ್ ಖರೀದಿಗೆ ಒಪ್ಪಿದ್ದ ಹಸಿನಾ

ಪ್ರಧಾನಮಂತ್ರಿ ಪಟ್ಟದಿಂದ ಪದಚ್ಯುತಗೊಂಡ ಶೇಖ್ ಹಸೀನಾ ಅವರ ಅವಧಿಯಲ್ಲಿ ಸಹಿ ಹಾಕಲಾದ ಒಪ್ಪಂದಗಳ ಬಗ್ಗೆ ತನಿಖೆ ಮಾಡಲು ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ರಚಿಸಿದ ಪರಿಶೀಲನಾ ಸಮಿತಿಯು, ಅದಾನಿ ಗ್ರೂಪ್‌ನೊಂದಿಗಿನ ವಿದ್ಯುತ್ ಖರೀದಿ ಒಪ್ಪಂದದಲ್ಲಿ...

‘ಪಾಕಿಸ್ತಾನ ಭಯೋತ್ಪಾದನೆಯನ್ನು ತನ್ನ ರಾಷ್ಟ್ರ ನೀತಿಯ ಸಾಧನವಾಗಿ ಬಳಸುವುದನ್ನು ಸಹಿಸಿಕೊಳ್ಳುವುದು ಸಾಮಾನ್ಯವಲ್ಲ’: ಭಾರತ

ವಿಶ್ವಸಂಸ್ಥೆ: ಆಪರೇಷನ್ ಸಿಂಧೂರ್ ಬಗ್ಗೆ "ಸುಳ್ಳು ಮತ್ತು ಸ್ವಾರ್ಥಪರ" ವರದಿಯನ್ನು ಮುಂದಿಟ್ಟಿದ್ದಕ್ಕಾಗಿ ಇಸ್ಲಾಮಾಬಾದ್‌ನ ರಾಯಭಾರಿಗೆ ಭಾರತ ತಿರುಗೇಟು ನೀಡುತ್ತಿದ್ದಂತೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಕಠಿಣ ಪದಗಳಲ್ಲಿ ಪ್ರತಿಕ್ರಿಯಿಸಿತು. ಭಯೋತ್ಪಾದನೆಯನ್ನು ರಾಜ್ಯ ನೀತಿಯ ಸಾಧನವಾಗಿ...

ಪೌರಾಯುಕ್ತೆಗೆ ಧಮ್ಕಿ ಪ್ರಕರಣ : ಕರ್ನಾಟಕ-ಕೇರಳ ಗಡಿಯಲ್ಲಿ ರಾಜೀವ್‌ ಗೌಡ ಬಂಧನ; ಆಶ್ರಯ ಕೊಟ್ಟ ಮಂಗಳೂರಿನ ಉದ್ಯಮಿ ವಶಕ್ಕೆ

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಜಿ. ಅಮೃತಗೌಡ ಅವರಿಗೆ ದೂರವಾಣಿ ಮೂಲಕ ಧಮ್ಕಿ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ರಾಜೀವ್‌ ಗೌಡ ಅವರನ್ನು ಪೊಲೀಸರು ಸೋಮವಾರ (ಜ.26) ಕರ್ನಾಟಕ-ಕೇರಳ ಗಡಿ ಸಮೀಪ...

ವಾರದಲ್ಲಿ 5 ದಿನಗಳ ಕೆಲಸ ಜಾರಿಗೆ ಒತ್ತಾಯ: ಬ್ಯಾಂಕ್‌ ನೌಕರರಿಂದ ಇಂದು ಮುಷ್ಕರ

ಐದು ದಿನಗಳ ಕೆಲಸದ ವಾರವನ್ನು (ವಾರದಲ್ಲಿ 5 ದಿನ ಕೆಲಸ) ತಕ್ಷಣ ಜಾರಿಗೆ ತರುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರು ಮಂಗಳವಾರ (ಜ.27) ರಾಷ್ಟ್ರವ್ಯಾಪಿ ಮುಷ್ಕರ ಕೈಗೊಂಡಿದ್ದಾರೆ. ಇದರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಬ್ಯಾಂಕಿಂಗ್...

ಗ್ರೀನ್ ಕೇವ್ ನಿಂದ ಪ್ರವಾಸಿಗರನ್ನು ದೂರವಿಡಿ: ಛತ್ತೀಸ್‌ಗಢ ಸರ್ಕಾರಕ್ಕೆ ಪರಿಸರವಾದಿಗಳ ಎಚ್ಚರಿಕೆ

ರಾಯ್‌ಪುರ: ಒಂದು ಕಾಲದಲ್ಲಿ ಮಾವೋವಾದಿ ಪೀಡಿತ ಬಸ್ತಾರ್ ಜಿಲ್ಲೆಯ ಕಾಂಗರ್ ಕಣಿವೆ ರಾಷ್ಟ್ರೀಯ ಉದ್ಯಾನವನದಲ್ಲಿರುವ ಅಪರೂಪದ ಮತ್ತು ಪರಿಸರ ಸೂಕ್ಷ್ಮ 'ಹಸಿರು ಗುಹೆ'ಯನ್ನು ಪ್ರವಾಸಿಗರಿಗೆ ತೆರೆಯಲು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದ್ದು, ಈ ಕ್ರಮಕ್ಕೆ...