Homeಮುಖಪುಟಸೂರ್ಯ ಓಂ ಎಂದು ಜಪಿಸುವ ನಕಲಿ ವಿಡಿಯೋ ಟ್ವೀಟ್‌ ಮಾಡಿ ಟ್ರೋಲ್‌ಗೊಳಗಾದ ಕಿರಣ್‌ ಬೇಡಿ...

ಸೂರ್ಯ ಓಂ ಎಂದು ಜಪಿಸುವ ನಕಲಿ ವಿಡಿಯೋ ಟ್ವೀಟ್‌ ಮಾಡಿ ಟ್ರೋಲ್‌ಗೊಳಗಾದ ಕಿರಣ್‌ ಬೇಡಿ…

- Advertisement -
- Advertisement -

ಸಾಮಾಜಿಕ ಮಾಧ್ಯಮಗಳಲ್ಲಿ, ಹಲವು ವಾಟ್ಸಾಪ್‌ ಗುಂಪುಗಳಲ್ಲಿ ನಕಲಿ ಸುದ್ದಿಗಳು ಹರಡುತ್ತವೆ. ಬಹಳಷ್ಟು ಜನರು ಆಕರ್ಷಕವಾಗಿರುವ ಆ ವೀಡಿಯೊಗಳು ಮತ್ತು ಸಂದೇಶಗಳ ನಕಲಿ ಸುದ್ದಿಗಳಿಗೆ ಬಲಿಯಾಗುತ್ತಾರೆ. ಈ ವಾಟ್ಸಾಪ್ ವಿಶ್ವವಿದ್ಯಾಲಯದ ಇತ್ತೀಚಿನ ಬಲಿಪಶು ಕಿರಣ್ ಬೇಡಿ ಆಗಿದ್ದಾರೆ..

ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್‌ ಬೇಡಿ, ಇಂದು ಬೆಳಿಗ್ಗೆ ಸೂರ್ಯ ’ಓಂ’ ಎಂದು ಜಪಿಸುವ ನಕಲಿ ವಿಡಿಯೋ ಟ್ವೀಟ್‌ ಮಾಡಿ ಸಕತ್‌ ಟ್ರೋಲ್‌ಗೊಳಗಾಗಿದ್ದಾರೆ..

ಕಿರಣ್ ಬೇಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸೂರ್ಯ ಓಂ ಎಂದು ಜಪಿಸುತ್ತದೆ ಎಂದು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದು. ಅದರಲ್ಲಿ ‘ನಾಸಾ ದಾಖಲಿಸಿದೆ’ ಎಂದು ಸಹ ಬರೆಯಲಾಗಿದೆ. ಈ ಸುಳ್ಳು ಸುದ್ದಿಯನ್ನು ಸುಮಾರು 23ಸಾವಿರ ಜನ ಲೈಕ್‌ ಮಾಡಿದರೆ ಸುಮಾರ್‌ 7 ಸಾವಿರ ಜನ ಹಂಚಿಕೊಂಡಿದ್ದಾರೆ.

ಅದೇ ಸಂದರ್ಭದಲ್ಲಿ ಕಿರಣ್‌ ಬೇಡಿಯವರ ಈ ಅಜ್ಞಾನಕ್ಕೆ ಬಹಳಷ್ಟು ಜನ ಪ್ರಜ್ಞಾವಂತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಹಲವರು ಟ್ರೋಲ್‌ ಮಾಡಿದ್ದಾರೆ. ಆದರೆ ಇನ್ನು ಸಹ ಕಿರಣ್‌ ಬೇಡಿಯವರು ಆ ಟ್ವೀಟ್‌ ಅನ್ನು ಅಳಿಸಿಲ್ಲ.

“ಒಂದು ಕಾಲದಲ್ಲಿ ಭಾರತದ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ವ್ಯಕ್ತಿಯಿಂದ ಇಂತಹ ಅಸಂಬದ್ಧ ಮತ್ತು ಮೂಢನಂಬಿಕೆ ಬರುತ್ತಿರುವುದು ನಾಚಿಕೆಗೇಡಿನ ಸಂಗತಿ. ಭಾರತೀಯ ಸಂವಿಧಾನದಲ್ಲಿ (ವಿಧಿ 51 ಎ), ನಮಗೆ ಒಂದಷ್ಟು ಮೂಲಭೂತ ಕರ್ತವ್ಯಗಳನ್ನು ವಿಧಿಸಿದೆ. ಅದರಲ್ಲಿ ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿ ಇದನ್ನು ಪಾಲಿಸುವುದು ಇದು ಭಾರತದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿರುತ್ತದೆ” ಎಂದು ಯುವ ಚಿಂತಕ ಧೃವ್‌ರಾಠೀ ಕಿರಣ್‌ ಬೇಡಿ ಸಂವಿಧಾನದ ಪಾಠ ಮಾಡಿದ್ದಾರೆ.

ಬಹಳಷ್ಟು ಜನ ಅಧಿಕೃತವಾಗಿ ನಾಸಾ ರೆಕಾರ್ಡ್‌ ಮಾಡಿರುವ ಸೌಂಡ್‌ ಅನ್ನು ಪೋಸ್ಟ್‌ ಮಾಡಿದ್ದಾರೆ. ಕೆಳಗಿನ ವಿಡಿಯೋ ನೋಡಿ..

ನೀವು ನಾಗರಿಕ ಸೇವಾ ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾಗಿದ್ದೀರಿ ಎಂದು ನಮಗೆ ತಿಳಿದಿಲ್ಲ. ಈ ವಿಡಿಯೋ ನೋಡಿ ನಮಗೆ ನಾಚಿಕೆಯಾಗುತ್ತಿದೆ. ಅಂದಹಾಗೆ, ನೀವು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನೂ ಪಡೆದಿದ್ದೀರಿ ಎಂದು ಪ್ರೊ. ದಿಲೀಪ್‌ ಮಂಡಲ್‌ರವರು ಟ್ವೀಟ್‌ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...