ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತ ಹೋರಾಟ ಮತ್ತು ಕೆಎಸ್‌ಆರ್‌ಟಿಸಿ ಬಸ್ ಮುಷ್ಕರವನ್ನು ನಿಲ್ಲಿಸುವುದಾಗಿ ಕೋಟಿ ಕೋಟಿ ಡೀಲ್ ಮಾಡಿದ್ದಾರೆ ಎಂದು ಕನ್ನಡದ ಖಾಸಗಿ ಚಾನೆಲ್ ಆರೋಪಿಸಿದೆ. ಈ ಬಗ್ಗೆ ರಾಜ್ಯದಾದ್ಯಂತ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು ಅವರ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರತಿಭಟನೆ ನಡೆಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು 2021 ರ ಎಪ್ರಿಲ್‌ನಲ್ಲಿ ನಡೆದ ಕೆಎಸ್‌ಆರ್‌ಟಿಸಿ ಹೋರಾಟವನ್ನು ನಿಲ್ಲಿಸಲು 35 ಕೋಟಿ ಲಂಚ ಕೇಳಿದ್ದಾರೆ ಎಂದು ಕನ್ನಡದ ಖಾಸಗಿ ಸುದ್ದಿ ಚಾನೆಲ್ ಪವರ್ ಟಿವಿ ಆರೋಪಿಸಿದ್ದು ಸುದ್ದಿಯನ್ನು ಪ್ರಸಾರ ಮಾಡಿದೆ. ಕೆಎಸ್‌ಆರ್‌ಟಿಸಿ ನೌಕರರ ಹೋರಾಟದ ಸಮಯದಲ್ಲಿ ಹೋರಾಟದ ನೇತೃತ್ವವನ್ನು ಕೋಡಿಹಳ್ಳಿ ಚಂದ್ರಶೇಖರ್ ಅವರು ವಹಿಸಿದ್ದರು. ದೇಶದ ಐತಿಹಾಸಿ ರೈತ ಹೋರಾಟವನ್ನು ನಿಲ್ಲಿಸಲು ಸಾವಿರಾರು ಕೋಟಿ ರುಪಾಯಿಗೆ ಅವರು ಡೀಲ್ ನಡೆಸಿದ್ದಾರೆ ಎಂದು ಪವರ್ ಟಿವಿ ವರದಿಯು ಆರೋಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ಶನಿವಾರದಂದು ಮೈಸೂರಿನ ನ್ಯಾಯಾಲಯದ ಬಳಿಯ ಮಹಾತ್ಮ ಗಾಂಧೀಜಿ ಪ್ರತಿಮೆ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಅವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಕೋಡಿಹಳ್ಳಿ ಚಂದ್ರಶೇಖರ್ ಅವರ ಭ್ರಷ್ಟಾಚಾರದ ವಿರುದ್ಧ ತನಿಖೆ ಮಾಡುವಂತೆ ಹಾಗೂ ತಪ್ಪಿಗೆ ಶಿಕ್ಷೆಯಾಗುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಒತ್ತಾಯದ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?; ಗೃಹ ಸಚಿವ ಹೇಳಿದ್ದೇನು?
ಪ್ರತಿಭಟನೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬಡಗಲಪುರ ನಾಗೇಂದ್ರ ಅವರು,“ಕೋಡಿಹಳ್ಳಿ ಚಂದ್ರಶೇಖರ್ ಎಂಬ ವ್ಯಕ್ತಿ ಹಸಿರು ಟವೆಲ್ ಹಾಕಿಕೊಂಡು ಒಂದು ಡೀಲ್‌ಗೆ ಮಾಡುವುದರ ಮೂಲಕ ಇಡೀ ರೈತ ಕುಲಕ್ಕೆ ಅಪಮಾನವಾಗಿದ್ದಾರೆ. ತ್ಯಾಗ ಬಲಿದಾನದ ಮೂಲಕ ಕಟ್ಟಿದ್ದಂತಹ ರೈತ ಚಳವಳಿಗೆ ದ್ರೋಹ ಎಸಗಿದ್ದಾರೆ. ಆತ ಇಂತಹ ಕಳ್ಳ ಎಂದು ನಮಗೆ ಗೊತ್ತಿತ್ತು. ಅದಕ್ಕೆ ನಾವು 2011 ರಿಂದ ನಾವು ದೂರ ಇಟ್ಟಿದ್ದೇವೆ” ಎಂದು ಹೇಳಿದ್ದಾರೆ.
“ಕೋಡಿಹಳ್ಳಿ ಚಂದ್ರಶೇಖರ್ ಇನ್ನಾವುದೇ ರೈತರ ಹೆಸರಿನಲ್ಲಿ ಹೋರಾಟ ಮಾಡಬಾರದು. ಒಂದು ವೇಳೆ ಹೋರಾಟ ಮಾಡಿದರೆ ಅಲ್ಲಿಂದ ಅವರನ್ನು ಹೇಗೆ ಹೊರಹಾಕಬೇಕು ಎನ್ನುವುದು ಗೊತ್ತಿದೆ. ಹಸಿರು ಟವೆಲ್ ತೆಗೆಯಿರಿ ಎಂದು ಹೇಳಿದ್ದೇವೆ, ಅದನ್ನು ನಾವೇ ಕಿತ್ತುಕೊಳ್ಳುತ್ತೇವೆ. ಯಾರೋ ಒಬ್ಬರು ಹಸಿರು ಟವೆಲ್ ಹಾಕಿ ತಪ್ಪು ಮಾಡಿದರೆ, ಎಲ್ಲಾ ಹಸಿರು ಟವೆಲ್ ಹಾಕಿರುವವರು ತಪ್ಪು ಮಾಡಿದ್ದಾರೆ ಎಂದು ಬಿಂಬಿಸಬೇಡಿ.
ಪ್ರಾಮಾಣಿಕವಾಗಿ ತ್ಯಾಗ, ಬಲಿದಾನ ಮಾಡುವ ಹೋರಾಟಗಾರರು ಇದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಇನ್ನು ಮುಂದೆ ಯಾವುದೇ ಹೋರಾಟದಲ್ಲಿ ಕಂಡು ಬಂದರೆ ಅವರನ್ನು ಓಡಿಸುವಂತಹ ಕೆಲಸವನ್ನು ಸಾಮಾನ್ಯ ರೈತರು ಮಾಡುತ್ತಾರೆ” ಎಂದು ಅವರು ಬಡಗಲಪುರ ನಾಗೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರನ್ನು ವಾರೆಂಟ್ ಇಲ್ಲದೆ ಬಂಧಿಸಿ ‘ಪೊಲೀಸ್ ರಾಜ್ಯ’ ಮಾಡುತ್ತಿದ್ದಾರೆಯೆ
ತಮ್ಮ ಮೇಲಿನ ಡೀಲ್ ಆರೋಪದ ವಿಚಾರವಾಗಿ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು,“ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವವನಿಗೆ ನೈತಿಕತೆ ಇರಬೇಕು, ಮೊದಲು ಅವನು ಭ್ರಷ್ಟಾಚಾರ ಮುಕ್ತನಾಗಿರಬೇಕು. ಅವನೇ ಭ್ರಷ್ಟಾಚಾರ ಮಾಡಿ, ನಮ್ಮನ್ನು ಭ್ರಷ್ಟರು ಎಂದರೆ ಹೇಗೆ? ಅವರು ಚಾರಿತ್ಯ್ರವಧೆ ಮಾಡಲು ಬೇಕಾಗಿ ಮಾಡುತ್ತಿರುವಂತಹ ಒಂದು ಡೀಲ್ ಅದು. ಕೋಡಿಹಳ್ಳಿ ಚಂದ್ರಶೇಖರ್ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ, ಹಾಗಾಗಿ ಅವರನ್ನು ಮುಗಿಸಬೇಕು ಎಂದು, ಒಂದು ದೊಡ್ಡ ಡೀಲ್ ತೆಗೆದುಕೊಂಡು ಅವರು ನಡೆಸಿರುವಂತಹ ತಂತ್ರ ಅದು. ಏಳೆಂಟು ತಿಂಗಳುಗಳ ಕಾಲ ನನ್ನ ಸಂಪರ್ಕ ಮಾಡಿ, ಕಟ್ ಆಂಡ್ ಪೇಸ್ಟ್ ಮಾಡಿ ಅದನ್ನು ಸ್ಟೋರಿ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.



ಎಲ್ಲಾ ಕಳ್ಳರು😡😡😡
ಯಾರನ್ನೂ ನಂಬೋ ಹಾಗಿಲ್ಲ.
ಇವನ ಐಶಾರಾಮಿ ಜೀವನ, ಬಹುಕೋಟಿ ಬಂಗಲೆ, ಫಾರ್ಚುನರ್ ಕಾರಿನ ದರ್ಬಾರ್ ನೋಡಿ ಆಗಲೇ ನಾವು ಎಚ್ಚೆತ್ತು ಕೊಳ್ಳಬೇಕಿತ್ತು.
Govt. To give a benefits to KSRTC staff.
Department is not giving security to Staff.
Staff are very imbalanced life in their life.
Specially full and enjoying in department all the Ticket Checkers..