ಅಮೆಜಾನ್ ಫ್ಲೆಕ್ಸ್, ಫ್ಲಿಪ್‌ಕಾರ್ಟ್, ಪೋರ್ಟರ್, ಉಬರ್ ರೀತಿಯ ‘ಗಿಗ್ ಕಂಪೆನಿ’ಗಳ ವ್ಯವಹಾರ ವರ್ಷ ಕಳೆದಂತೆ ಹೆಚ್ಚುತ್ತಿದ್ದರೂ, ತಮ್ಮ ಕೆಲಸಗಾರರಿಗೆ ಸರಿಯಾದ ಸವಲತ್ತುಗಳನ್ನು ನೀಡುತ್ತಿಲ್ಲ ಎಂದು ಫೇರ್‌ವರ್ಕ್ ಇಂಡಿಯಾ ವರದಿ 2024ರ ವರದಿ ಹೇಳಿದೆ. ಇಂತಹ ಕಂಪೆನಿಗಳಲ್ಲಿ ಅಸಮಾನತೆಗಳು ಅಸ್ತಿತ್ವದಲ್ಲಿದ್ದು, ಹಲವಾರು ಕಂಪನಿಗಳು ನ್ಯಾಯಯುತ ಕಾರ್ಮಿಕ ಮಾನದಂಡಗಳ ವಿರುದ್ಧ ಕಾರ್ಯನಿರ್ವಹಿಸುತ್ತಿವೆ ಎಂದು ಅಧ್ಯಯನ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (ಐಐಐ ಟಿಬಿ)ನ ಮಾಹಿತಿ ತಂತ್ರಜ್ಞಾನ ಮತ್ತು ಸಾರ್ವಜನಿಕ ನೀತಿ ಕೇಂದ್ರ (ಸಿಐಟಿಎಪಿಪಿ) ಈ ವರದಿ ಬಿಡುಗಡೆ ಮಾಡಿದ್ದು, ವರದಿಯು 11 ಗಿಗ್ ಕಂಪೆನಿಗಳನ್ನು ಮೌಲ್ಯಮಾಪನ ಮಾಡಿದೆ.
ಅಮೆಜಾನ್ ಫ್ಲೆಕ್ಸ್, ಫ್ಲಿಪ್‌ಕಾರ್ಟ್, ಪೋರ್ಟರ್, ಉಬರ್ ಮತ್ತು ಇತರ ಪ್ರಮುಖ ಗಿಗ್ ಕಂಪೆನಿಗಳು ನ್ಯಾಯಯುತ ವೇತನ, ಒಪ್ಪಂದದ ಪಾರದರ್ಶಕತೆ ಮತ್ತು ಕಾರ್ಮಿಕರ ಪ್ರಾತಿನಿಧ್ಯಕ್ಕಾಗಿ ಮೂಲಭೂತ ಮಾನದಂಡಗಳನ್ನು ಪೂರೈಸಲು ವಿಫಲವಾಗಿವೆ ಎಂದು ವರದಿ ಉಲ್ಲೇಖಿಸಿದೆ.
ಫೇರ್‌ವರ್ಕ್ ಇಂಡಿಯಾ ತಂಡವು, ‘ನ್ಯಾಯಯುತ ವೇತನ, ನ್ಯಾಯೋಚಿತ ಪರಿಸ್ಥಿತಿಗಳು, ನ್ಯಾಯಯುತ ಒಪ್ಪಂದಗಳು, ನ್ಯಾಯಯುತ ನಿರ್ವಹಣೆ ಮತ್ತು ನ್ಯಾಯಯುತ ಪ್ರಾತಿನಿಧ್ಯ’ ಎಂಬ ಐದು ತತ್ವಗಳ ಮೇಲೆ ಗಿಗ್ ಕಂಪೆನಿಗಳನ್ನು ಮೌಲ್ಯಮಾಪನ ಮಾಡಿದೆ. ಅಧ್ಯಯನವು ಗಿಗ್ ಕಂಪೆನಿಗಳಲ್ಲಿ ಬದಲಾಗುತ್ತಿರುವ ಕೆಲಸದ ಸ್ವರೂಪವನ್ನು ಪರಿಶೀಲಿಸಿದೆ.
ಇದನ್ನೂಓದಿ: ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಕಿರಿಯರಿಗೆ ಬೆಂಬಲಿಸಿ ರಾಜೀನಾಮೆ ಕೊಟ್ಟ 45ಕ್ಕೂ ಹೆಚ್ಚು ಹಿರಿಯ ವೈದ್ಯರು
ಅಮೆಜಾನ್ ಫ್ಲೆಕ್ಸ್, 10 ರಲ್ಲಿ 2 ಅಂಕಗಳನ್ನು ಗಳಿಸಿದೆ ಎಂದು ಫೇರ್‌ವರ್ಕ್ ಇಂಡಿಯಾ ಅಧ್ಯಯನ ಹೇಳಿದೆ. ಅಮೆಜಾನ್ ತನ್ನ ಕೆಲಸಗಾರರಿಗೆ ಕೆಲವು ಸುರಕ್ಷತಾ ಸಾಧನಗಳು ಮತ್ತು ತರಬೇತಿಯನ್ನು ಒದಗಿಸುತ್ತೆಯಾದರೂ, ನ್ಯಾಯಯುತ ವೇತನವನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆ ಎಂದು ಅಧ್ಯಯನ ಹೇಳಿದೆ. ಈ ಗಿಗ್‌ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಗಳಿಕೆಯು ಸ್ಥಳೀಯ ಕನಿಷ್ಠ ವೇತನ ಮಾನದಂಡಗಳನ್ನು ಇದು ಪೂರೈಸುತ್ತಿಲ್ಲ ಎಂದು ಅಧ್ಯಯನ ಹೇಳಿದೆ.
ನ್ಯಾಯಯುತ ಒಪ್ಪಂದಗಳು, ನ್ಯಾಯೋಚಿತ ನಿರ್ವಹಣೆ ಮತ್ತು ನ್ಯಾಯಯುತ ಪ್ರಾತಿನಿಧ್ಯದ ವಿಷಯದಲ್ಲಿ ಕೂಡಾ ಅಮೇಜಾನ್ ಫ್ಲೆಕ್ಸ್ ಅಗತ್ಯ ಮಿತಿಗಳನ್ನು ಪೂರೈಸುತ್ತಿಲ್ಲ ಎಂದು ಅಧ್ಯಯನ ಹೇಳಿದೆ.
ಭಾರತದ ಅತಿದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್ ಇನ್ನೂ ಕೆಟ್ಟದಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಹೇಳಿದೆ. ಫ್ಲಿಪ್‌ಕಾರ್ಟ್ 10 ರಲ್ಲಿ ಕೇವಲ 1 ಅಂಕವನ್ನು ಗಳಿಸಿದ್ದು, ನ್ಯಾಯಯುತ ವೇತನದ ಮಾನದಂಡಗಳನ್ನು ಕಂಪೆನಿ ಪೂರೈಸಲಿಲ್ಲ ಎಂದು ವರದಿ ಹೇಳಿದೆ. ಅಲ್ಲದೆ, ಫ್ಲಿಪ್‌ಕಾರ್ಟ್‌ನ ಒಪ್ಪಂದದ ನಿಯಮಗಳು ಅಸ್ಪಷ್ಟವಾಗಿದ್ದು, ಕಾರ್ಮಿಕರಿಗೆ ಅದು ಸಿಗುವುದಿಲ್ಲ ಎಂದು ವರದಿ ಟೀಕಿಸಿದೆ. ಫ್ಲಿಪ್‌ಕಾರ್ಟ್ ತನ್ನ ನಿರ್ವಹಣಾ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆಯನ್ನು ಹೊಂದಿಲ್ಲ ಮತ್ತು ಕಾರ್ಮಿಕರ ಪ್ರಾತಿನಿಧ್ಯವನ್ನು ಗುರುತಿಸಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ ಎಂದು ವರದಿ ಹೇಳಿದೆ.
ಇದನ್ನೂಓದಿ: ಸಚಿವರ ಕೈ ಕುಲುಕಿದ್ದಕ್ಕೆ ವಿದ್ಯಾರ್ಥಿನಿಯ ಚಾರಿತ್ರ್ಯಹರಣ : ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ
ಪೋರ್ಟರ್ ಮತ್ತು ಉಬರ್ ಗಿಗ್ ಕಂಪೆನಿಗಳು ಫೇರ್‌ವರ್ಕ್‌ನ ಎಲ್ಲಾ ಐದು ತತ್ವಗಳಲ್ಲಿ ಶೂನ್ಯ ಅಂಕ ಗಳಿಸಿವೆ. ಈ ಎರಡು ಗಿಗ್ ಕಂಪೆನಿಗಳು ಮೂಲಭೂತ ಕಾರ್ಮಿಕ ರಕ್ಷಣೆಗಳ ಪುರಾವೆಗಳನ್ನು ಒದಗಿಸಲು ವಿಫಲವಾಗಿವೆ ಎಂದು ಅಧ್ಯಯನ ಹೇಳಿದೆ. ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿನ ಕೆಲಸಗಾರರು ಅಸುರಕ್ಷಿತ ಕೆಲಸದ ಪರಿಸ್ಥಿತಿಗಳಿಗೆ ಒಡ್ಡಿಕೊಳ್ಳುತ್ತಾರೆ ಮತ್ತು ಯಾವುದೆ ಅಪಾಯ ತಗ್ಗಿಸುವ ಕ್ರಮಗಳಿಲ್ಲ ಎಂದು ವರದಿ ಉಲ್ಲೇಖಿಸಿದೆ.
ಜೊತೆಗೆ ಈ ಎರಡು ಸಂಸ್ಥೆಗಳ ಒಪ್ಪಂದಗಳು ಜಟಿಲವಾಗಿದ್ದು, ಯಾವುದೇ ಮನವಿಯ ವಿಧಾನವಿಲ್ಲದೆ ಹಠಾತ್ ನಿಷ್ಕ್ರಿಯಗೊಳಿಸುವಿಕೆ ಅಥವಾ ಪಾವತಿ ಸಮಸ್ಯೆಗಳಿಂದ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ವರದಿ ಹೇಳಿದೆ.
ಆದಾಗ್ಯೂ, ಬಿಗ್‌ಬಾಸ್ಕೆಟ್ ಮತ್ತು ಅರ್ಬನ್ ಕಂಪನಿಗಳು ಮಾತ್ರ ಕನಿಷ್ಠ ವೇತನ ನೀತಿಯನ್ನು ಅಳವಡಿಸಿಕೊಂಡಿದೆ. ಜೊತೆಗೆ ಬಿಗ್‌ಬಾಸ್ಕೆಟ್, ಸ್ವಿಗ್ಗಿ, ಅರ್ಬನ್ ಕಂಪನಿ, ಝೆಪ್ಟೋ ಮತ್ತು ಝೊಮಾಟೊ ಕಂಪೆನಿಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅಪಘಾತ ವಿಮಾ ರಕ್ಷಣೆಯನ್ನು ಒದಗಿಸುತ್ತಿದೆ. ಅಲ್ಲದೆ, ಅಪಘಾತಗಳನ್ನು ಹೊರತುಪಡಿಸಿ ವೈದ್ಯಕೀಯ ಕಾರಣಗಳಿಂದ ಕೆಲಸ ಮಾಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಆದಾಯ ನಷ್ಟಕ್ಕೆ ವಿತ್ತೀಯ ಪರಿಹಾರ ಸೇರಿದಂತೆ ಇನ್ನಿತರ ಕೆಲವು ಅನುಕೂಲಗಳನ್ನು ಸಂಸ್ಥೆ ಮಾಡಿವೆ.
ವಿಡಿಯೊ ನೋಡಿ: ಕೇರಳ ಸಿನಿಮಾ ರಂಗದಲ್ಲಿ ಲೈಂಗಿಕ ದೌರ್ಜನ್ಯದ ಭಯಾನಕ ಕಥೆಗಳನ್ನು ಬಿಚ್ಚಿಟ್ಟ ಹೇಮಾ ಸಮಿತಿ ವರದಿ


