“ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಹಾಗೂ ಮೂಲಸೌಕರ್ಯಗಳು ಸರಿ ಇಲ್ಲ” ಎಂದು ಆರೋಪಿಸಿ ಖಾತಾಬುಕ್ ಹಾಗೂ ಹೌಸಿಂಗ್.ಕಾಂ ಸಂಸ್ಥಾಪಕ ರವೀಶ್ ನರೇಶ್ ಟ್ವೀಟ್ ಮಾಡಿದ್ದು ಈಗ ರಾಜಕೀಯ ಪ್ರತಿಕ್ರಿಯೆಗಳಿಗೆ ಸಾಕ್ಷಿಯಾಗಿದೆ.
“ಎಚ್.ಎಸ್.ಆರ್./ಕೋರಮಂಗಲದಲ್ಲಿ (ಭಾರತದ ಸಿಲಿಕಾನ್ ವ್ಯಾಲಿ) ಸ್ಟಾರ್ಟ್‌ಅಪ್‌ಗಳು ಈಗಾಗಲೇ ಶತಕೋಟಿ ಡಾಲರ್‌ನಷ್ಟು ತೆರಿಗೆ ನೀಡುತ್ತಿವೆ. ಆದರೂ ನಮ್ಮಲ್ಲಿ ಸರಿಯಾದ ರಸ್ತೆಗಳಿಲ್ಲ, ಬಹುತೇಕ ದಿನನಿತ್ಯ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕಳಪೆ ಗುಣಮಟ್ಟದ ನೀರು ಸರಬರಾಜು, ಬಳಸಲಾಗದ ಕಿರುದಾರಿಗಳಿವೆ. ಭಾರತದ ಸಿಲಿಕಾನ್ ವ್ಯಾಲಿಗಿಂತ ಅನೇಕ ಗ್ರಾಮೀಣ ಪ್ರದೇಶಗಳು ಈಗ ಉತ್ತಮ ಮೂಲ ಸೌಕರ್ಯವನ್ನು ಹೊಂದಿವೆ” ಎಂದು ರವೀಶ್ ನರೇಶ್ ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಪಿಎಂಒಇಂಡಿಯಾ, ನರೇಂದ್ರ ಮೋದಿ, ಕರ್ನಾಟಕ ಬಿಜೆಪಿ, ತೇಜಸ್ವಿ ಸೂರ್ಯ ಅವರನ್ನು ಟ್ಯಾಗ್ ಮಾಡಿರುವ ನರೇಶ್, ಏರ್‌ಪೋರ್ಟ್ ಸಮೀಪ ಸುಮಾರು ಮೂರು ಗಂಟೆಗಳ ಕಾಲ ಹೆಚ್ಚಿನ ಟ್ರಾಫಿಕ್ ದಟ್ಟಣೆ ಇರುವುದಾಗಿ ಆರೋಪಿಸಿದ್ದಾರೆ.
Startups in HSR/Koramangala (India's Sillicon Valley) are already generating billions of $ of taxes. Yet we have v bad roads, almost daily power cuts, poor quality water supply, unusable foot paths. Many rural areas now have better basic infra than India's Sillicon Valley
— ravishnaresh.eth (@ravishnaresh) March 30, 2022
ಉದ್ಯಮಿಯ ಟ್ವೀಟ್ ಉಲ್ಲೇಖಿಸಿ ತೆಲಂಗಾಣ ಟಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ಕೈಗಾರಿಕೆ, ವಾಣಿಜ್ಯ ಸಚಿವ ಕೆ.ಟಿ.ರಾಮರಾವ್ ಟ್ವೀಟ್ ಮಾಡಿದ್ದು, “ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಂಡು ಹೈದರಾಬಾದ್‌ಗೆ ಬನ್ನಿ. ನಾವು ಉತ್ತಮವಾದ ಭೌತಿಕ ಮೂಲಸೌಕರ್ಯ, ಉತ್ತಮವಾದ ಸಾಮಾಜಿಕ ಮೂಲಸೌಕರ್ಯವನ್ನು ಹೊಂದಿದ್ದೇವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾಗಿದೆ. ನಗರದೊಳಗೆ ಮತ್ತು ಹೊರಗೆ ತಂಪಿದೆ” ಎಂದಿದ್ದಾರೆ.
ಮುಂದುವರಿದು, “ನಮ್ಮ ಸರ್ಕಾರ ಮೂರು ‘ಐ’ಗಳಿಗೆ ಆದ್ಯತೆ ನೀಡಿದೆ. ಅವುಗಳೆಂದರೆ ನಾವೀನ್ಯತೆ (innovation), ಮೂಲಸೌಕರ್ಯ (infrastructur) ಮತ್ತು ಒಳಗೊಳ್ಳುವ ಅಭಿವೃದ್ಧಿ (inclusive growth)” ಎಂದು ಅವರು ತಿಳಿಸಿದ್ದಾರೆ.
Startups in HSR/Koramangala (India's Sillicon Valley) are already generating billions of $ of taxes. Yet we have v bad roads, almost daily power cuts, poor quality water supply, unusable foot paths. Many rural areas now have better basic infra than India's Sillicon Valley
— ravishnaresh.eth (@ravishnaresh) March 30, 2022
ರಾಮರಾವ್ ಅವರ ಟ್ವೀಟ್‌ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಟಿ.ರಾಮರಾವ್ ಅವರನ್ನು ಟ್ಯಾಗ್ ಮಾಡಿ, ಟ್ವೀಟ್ ಹಂಚಿಕೊಂಡಿರುವ ಅವರು, “ನನ್ನ ಗೆಳೆಯ, ನಿಮ್ಮ ಸವಾಲನ್ನು ನಾನು ಸ್ವೀಕರಿಸಿದ್ದೇನೆ. 2023ರ ಅಂತ್ಯಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಭಾರತದ ಅತ್ಯುತ್ತಮ ನಗರವಾಗಿ ಬೆಂಗಳೂರಿನ ವೈಭವವನ್ನು ಮರುಸ್ಥಾಪಿಸುತ್ತೇವೆ” ಎಂದಿದ್ದಾರೆ.
.@ktrtrs, my friend, I accept your challenge. By the end of 2023, with Congress back in power in Karnataka, we will restore the glory of Bengaluru as India’s best city. https://t.co/HFn8cQIlGS
— DK Shivakumar (@DKShivakumar) April 4, 2022
ಡಿ.ಕೆ.ಶಿವಕುಮಾರ್ ಅವರ ಟ್ವೀಟ್‌ಗೆ ಮತ್ತೆ ಪ್ರತಿಕ್ರಿಯೆ ನೀಡಿರುವ ಕೆ.ಟಿ.ರಾಮ ರಾವ್, “ಪ್ರೀತಿಯ ಶಿವಕುಮಾರ್ ಅಣ್ಣ, ನನಗೆ ಕರ್ನಾಟಕದ ರಾಜಕೀಯದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ, ಯಾರು ಗೆಲ್ಲತ್ತಾರೆಂಬುದು ಗೊತ್ತಿಲ್ಲ. ಆದರೆ ಸ್ಪರ್ಧೆಯನ್ನು ಸ್ವೀಕರಿಸುತ್ತೇನೆ. ಹೈದರಾಬಾದ್ ಮತ್ತು ಬೆಂಗಳೂರು ನಗರಗಳು ನಮ್ಮ ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಲು, ನಮ್ಮ ಮಹಾನ್ ರಾಷ್ಟ್ರದ ಸಮೃದ್ಧಿಗೆ ಆರೋಗ್ಯಕರವಾಗಿ ಸ್ಪರ್ಧಿಸಲಿ. ಮೂಲಸೌಕರ್ಯ, ಐಟಿ ಬಿಟಿ ಮೇಲೆ ಗಮನ ಹರಿಸೋಣ. ಹಿಜಾಬ್ ಮೇಲಲ್ಲ” ಎಂದಿದ್ದಾರೆ.
Dear @DKShivakumar Anna, I don’t know much about politics of Karnataka & who will win but challenge accepted👍
Let Hyderabad & Bengaluru compete healthily on creating jobs for our youngsters & prosperity for our great nation
Let’s focus on infra, IT&BT, not on Halal & Hijab https://t.co/efUkIzKemT
— KTR (@KTRTRS) April 4, 2022
ಈ ಆರೋಗ್ಯಕರ ಚರ್ಚೆಯನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪ್ರಶಂಸಿಸಿದ್ದಾರೆ. ಕೆ.ಟಿ.ರಾಮರಾವ್ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿರುವ ಅವರು, “ಈ ಸ್ಪಿರಿಟ್ ಇರಬೇಕು. ಈ ರೀತಿಯ ಸಂವಾದ ನಡೆಯಬೇಕೇ ಹೊರತು, ಕೋಮು ರಾಜಕಾರಣವಲ್ಲ” ಎಂದಿದ್ದಾರೆ.
This is should be the spirit.. this should be the conversation..not communal politics.. 👍👍👍 dear @KTRTRS and @DKShivakumar .. #justasking https://t.co/yef6d8hsas
— Prakash Raj (@prakashraaj) April 4, 2022
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿರಿ: ಮಾಂಸ ತಿನ್ನದವರು ಟಿವಿಗಳಲ್ಲಿ ಯಕ್ಷಗಾನ ಮಾಡುತ್ತಿದ್ದಾರೆ: ದೇವನೂರ ಮಹಾದೇವ


