Homeಅಂತರಾಷ್ಟ್ರೀಯಲಡಾಖ್ ಘರ್ಷಣೆ: 20 ಭಾರತೀಯ ಸೈನಿಕರ ಹತ್ಯೆ, ನಾಲ್ವರ ಸ್ಥಿತಿ ಗಂಭೀರ

ಲಡಾಖ್ ಘರ್ಷಣೆ: 20 ಭಾರತೀಯ ಸೈನಿಕರ ಹತ್ಯೆ, ನಾಲ್ವರ ಸ್ಥಿತಿ ಗಂಭೀರ

- Advertisement -
- Advertisement -

ಸೋಮವಾರ ಸಂಜೆ ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನ್ಯದೊಂದಿಗೆ ಹಿಂಸಾತ್ಮಕ ಮುಖಾಮುಖಿಯಾದ ನಂತರ 20 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಭಾರತೀಯ ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಮುಖಾಮುಖಿಯಲ್ಲಿ 43 ಚೀನೀ ಸೈನಿಕರು ಕೊಲ್ಲಲ್ಪಟ್ಟಿರಬಹುದು ಅಥವಾ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಮಂಗಳವಾರ ಬೆಳಿಗ್ಗೆ ಸೇನೆಯ ಹೇಳಿಕೆಯು ಕರ್ನಲ್ ಮತ್ತು ಇಬ್ಬರು ಜವಾನರ ಸಾವನ್ನು ದೃಢಪಡಿಸಿತು ಮತ್ತು “ಎರಡೂ ಕಡೆಗಳಲ್ಲಿ ಸಾವುನೋವು” ಸಂಭವಿಸಿದೆ ಎಂದು ಹೇಳಿತ್ತು. ನಂತರ ಸಂಜೆ ಮತ್ತೊಂದು ಹೇಳಿಕೆಯಲ್ಲಿ, ಸೈನ್ಯವು ಹೆಚ್ಚು ಗಂಭೀರವಾಗಿ ಗಾಯಗೊಂಡ 17 ಮಂದಿ ಬಲಿಯಾದರು” ಎಂದು ಸೇರಿಸಲಾಗಿದೆ.

ಈ ಘಟನೆಯಲ್ಲಿ ಯಾವುದೇ ಶೂಟಿಂಗ್ ನಡೆದಿಲ್ಲ ಆದರೆ “ಹಿಂಸಾತ್ಮಕ ಕೈ ಕೈ ಹೊಡೆದಾಟಗಳು” ನಡೆದಿವೆ ಎಂದು ಭಾರತೀಯ ಸೇನೆಯ ಮೂಲವನ್ನು ಉಲ್ಲೇಖಿಸಿ ಎಜೆನ್ಸ್ ಫ್ರಾನ್ಸ್ ಪ್ರೆಸ್ ಹೇಳಿದೆ. ಸೈನಿಕರು ಒಬ್ಬರಿಗೊಬ್ಬರು ಗುದ್ದುವುದು ಮತ್ತು ಕಲ್ಲುಗಳನ್ನು ಎಸೆದರು. ಸೋಮವಾರ ಮಧ್ಯರಾತ್ರಿಯವರೆಗೆ ಗಂಟೆಗಳ ಕಾಲ ನಡೆದ ಹೋರಾಟದ ಸಮಯದಲ್ಲಿ ಚೀನಾದ ಸೈನ್ಯವು ರಾಡ್ ಮತ್ತು ಉಗುರು ತುಂಬಿದ ಕೋಲು‌ಗಳನ್ನು ಬಳಸಿದೆ ಎಂದು ವರದಿಗಳು ತಿಳಿಸಿವೆ.

ಈ ಘಟನೆಯಿಂದಾಗಿ ಸಾವುನೋವು ಸಂಭವಿಸಿದೆ ಎಂದು ಚೀನಾದ ರಕ್ಷಣಾ ಸಚಿವಾಲಯ ದೃಢಪಡಿಸಿದೆ ಆದರೆ ವಿವರಗಳನ್ನು ನೀಡಿಲ್ಲ.

“ಭಾರತವು ತನ್ನ ಎಲ್ಲಾ ಚಟುವಟಿಕೆಗಳು ಯಾವಾಗಲೂ ವಾಸ್ತವಿಕ ನಿಯಂತ್ರಣ ರೇಖೆಯ ಭಾರತದ ಭಾಗದಲ್ಲಿದೆ ಎಂಬುದು ಬಹಳ ಸ್ಪಷ್ಟವಾಗಿದೆ. ಚೀನಾದ ಕಡೆಯಿಂದಲೇ ಹಿಂಸಾಚಾರ ನಡೆದಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಉಭಯ ದೇಶಗಳು ಚರ್ಚೆಗಳ ನಂತರ ತಲುಪಿದ ಒಮ್ಮತದ ಗಂಭೀರ ಉಲ್ಲಂಘನೆಯಾಗಿದೆ. ಭಾರತೀಯ ಸೈನಿಕರು “ಎರಡು ಬಾರಿ ಗಡಿರೇಖೆಯನ್ನು ದಾಟಿ ಚೀನಾದ ಪಡೆಗಳನ್ನು ಪ್ರಚೋದಿಸಿದರು ಮತ್ತು ಆಕ್ರಮಣ ಮಾಡಿದರು, ಇದು ಎರಡು ಗಡಿ ಪಡೆಗಳ ನಡುವೆ ಹಿಂಸಾತ್ಮಕ ದೈಹಿಕ ಮುಖಾಮುಖಿಯನ್ನು ಉಂಟುಮಾಡಿತು” ಎಂದು ಜಾಹೋ ಲಿಜಿಯಾನ್ ಬೀಜಿಂಗ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಂಪರ್ಕ ಸುಧಾರಿಸಲು ಮತ್ತು ಚೀನಾದ ಮೂಲಸೌಕರ್ಯಗಳೊಂದಿಗಿನ ಅಂತರವನ್ನು ಕಡಿಮೆ ಮಾಡಲು ಭಾರತವು ರಸ್ತೆಗಳು ಮತ್ತು ವಾಯುನೆಲೆಗಳನ್ನು ನಿರ್ಮಿಸುತ್ತಿರುವುದು ಮುಖಾಮುಖಿಯಾಗಲು ಒಂದು ಕಾರಣ ಎಂದು ಮಿಲಿಟರಿ ತಜ್ಞರು ಹೇಳುತ್ತಾರೆ. ಗಾಲ್ವಾನ್‌ನಲ್ಲಿ ಭಾರತವು ಕಳೆದ ಅಕ್ಟೋಬರ್‌ನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಪೂರ್ಣಗೊಳಿಸಿತು. ಚೀನಾದ ಆಕ್ಷೇಪಣೆ ಎತ್ತಿದಾಗ ಭಾರತವು ವಾಸ್ತವ ನಿಯಂತ್ರಣ ರೇಖೆಯ ಬದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿತ್ತು.

ಭಾರತ ಮತ್ತು ಚೀನಾ 1962 ರಲ್ಲಿ ರಕ್ತಸಿಕ್ತ ಗಡಿ ಯುದ್ಧವನ್ನು ನಡೆಸಿದವು. ಅದರ ನಂತರ ಮಾತಿನ ಚಕಮಕಿ ನಡೆದಿದ್ದವು. ಆದರೆ 1975 ರಿಂದ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ.


ಇದನ್ನೂ ಓದಿ: ಕರ್ನಲ್ ಸಂತೋಷ್ ಬಾಬು ಪೋಷಕರ ಹೇಳಿಕೆ: ನಮ್ಮ ಮಗ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಕ್ಕೆ ಹೆಮ್ಮೆಯಿದೆ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...