ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ-ಪ್ರವಾಹ; 10 ಜನರು ಕಣ್ಮರೆ

ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ನಂದನಗರದಲ್ಲಿ ಗುರುವಾರ ಭಾರೀ ಮಳೆಯ ನಂತರ ಹಳ್ಳಿಯೊಂದರಲ್ಲಿ ಭೂಕುಸಿತ ಸಂಭವಿಸಿ ಮನೆಗಳು ನೆಲಸಮಗೊಂಡಿವೆ. ನದಿಯೊಂದರಿಂದ ಮತ್ತೊಂದು ಹಳ್ಳಿಗೆ ನೀರು ನುಗ್ಗಿ ಹತ್ತು ಜನರು ಕಾಣೆಯಾಗಿದ್ದಾರೆ. ರಾಜ್ಯವು ಈಗಾಗಲೇ ಹಲವು ದಿನಗಳಿಂದ ಭೂ ಕುಸಿತದಿಂದ ತತ್ತರಿಸುತ್ತಿದೆ. ಕುಂಟಾರಿ ಗ್ರಾಮದಲ್ಲಿ ಭೂಕುಸಿತದಿಂದ ಸುಮಾರು ಅರ್ಧ ಡಜನ್ ಮನೆಗಳಿಗೆ ಹಾನಿಯಾಗಿದೆ. ಕುಂಟಾರಿ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಸೇರಿದಂತೆ ಎಂಟು ಜನರು ಕಾಣೆಯಾಗಿದ್ದಾರೆ. ಉಳಿದ ಇಬ್ಬರು ಧುರ್ಮಾ ಗ್ರಾಮದವರು. ಅಲ್ಲಿ ಮೋಕ್ಷ ನದಿಯು ಉಕ್ಕಿ … Continue reading ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ-ಪ್ರವಾಹ; 10 ಜನರು ಕಣ್ಮರೆ