ರಾಜ್ಯದ ವಿಧಾನ ಪರಿಷತ್‌ನ ಉಪಸಭಾಪತಿಯಾಗಿದ್ದ ಎಸ್.ಎಲ್. ಧರ್ಮೇಗೌಡ ಅವರ ಸಾವಿನಿಂದಾಗಿ ತೆರವಾಗಿದ್ದ ವಿಧಾನ ಪರಿಷತ್‌ನ ಒಂದು ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಚುನಾವಣೆಯು ಮಾರ್ಚ್ 15 ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ.
ಇದನ್ನೂ ಓದಿ: ಉಪಸಭಾಪತಿ ಧರ್ಮೇಗೌಡರನ್ನು ಕೊಂದವರಾರು?!
ಫೆಬ್ರವರಿ 25 ರಂದು ಅಧಿಸೂಚನೆ ಹೊರಬೀಳಲಿದ್ದು, ಈ ಸ್ಥಾನಕ್ಕೆ ಆಯ್ಕೆಯು ವಿಧಾನಸಭಾ ಸದಸ್ಯರಿಂದ ನಡೆಯಲಿದೆ. ಮಾರ್ಚ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನಾಮಪತ್ರದ ಪರಿಶೀಲನೆಯು 5 ರಂದು ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಮಾರ್ಚ್ 8 ಕೊನೆಯ ದಿನವಾಗಿದ್ದು, ಮಾರ್ಚ್ 15 ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 4 ರವರೆಗೆ ನಡೆಯಲಿದ್ದು, ಅಂದೆ ಸಂಜೆ 5 ಕ್ಕೆ ಮತ ಎಣಿಕೆ ನಡೆಯಲಿದೆ.
ವಿಧಾನ ಪರಿಷತ್‌ನ ಉಪ ಸಭಾಪತಿಯಾಗಿದ್ದ ಜೆಡಿಎಸ್ ಪಕ್ಷದ ಎಸ್.ಎಲ್. ಧರ್ಮೇಗೌಡ ಅವರು ಡಿಸೆಂಬರ್ 28 ರಂದು ಚಿಕ್ಕಮಗಳೂರಿನ ಕಡೂರು ಬಳಿ ರೈಲ್ವೆ ಹಳಿಯ ಮೇಲೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ವಿಧಾನ ಪರಿಷತ್‌ನಲ್ಲಿ ಗದ್ದಲ ಉಂಟಾಗಿ ಅವರನ್ನು ಎಳೆದಾಡಲಾಗಿತ್ತು. ಇದರಿಂದ ಅವರು ತೀವ್ರವಾಗಿ ನೊಂದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅಸಹಜ ಸಾವು: ಡೆತ್‌ನೋಟ್ ಪತ್ತೆ


