ಪ್ರಧಾನಿ ನರೇಂದ್ರ ಮೋದಿಯವರ ಭಾಷಣವು ಡೆನ್ಮಾರ್ಕ್ ರಾಜಕುಮಾರನಿಲ್ಲದ ಷೇಕ್ಸ್‌ಪಿಯರ್‌ನ ಹ್ಯಾಮ್ಲೆಟ್‌ನಂತಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಅಭಿಷೇಕ್ ಮನು ಸಿಂಘ್ವಿಯವರು ಭಾಷಣವನ್ನು ಮಾರ್ಗಸೂಚಿಯಿಲ್ಲದ ಭಾಷಣವೆಂದು ಟೀಕಿಸಿದ್ದಾರೆ.
“ಹ್ಯಾಮ್ಲೆಟ್” ಷೇಕ್ಸ್‌ಪಿಯರ್ ಬರೆದಿರುವ ಇಂಗ್ಲೀಷಿನ ಪ್ರಸಿದ್ದ ನಾಟಕವಾಗಿದ್ದು ಅದರಲ್ಲಿ ಡೆನ್ಮಾರ್ಕ್ ರಾಜಕುಮಾರನದ್ದು ಪ್ರಮುಖ ಪಾತ್ರವಾಗಿದೆ.
ಬಡವರು, ಮಧ್ಯಮ ವರ್ಗದವರು ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಸಿಂಘ್ವಿ ಟ್ವಿಟ್ಟರಿನಲ್ಲಿ ಪ್ರಧಾನ ಮಂತ್ರಿಯನ್ನು ಕೋರಿದ್ದಾರೆ.
#Pm address wo single specific and wo guidelines is like #Hamlet wo #Prince of #Denmark. Like #PM wo details! We want increased #GDP allocation; specific targeted monetary injections; #Keynesian spending; loosen #FMRB etc. not a single word!
— Abhishek Singhvi (@DrAMSinghvi) April 14, 2020
ಸಿಂಘ್ವಿ ಟೀಕಿಸಿದ ಕೆಲವೇ ನಿಮಿಷಗಳಲ್ಲಿ ಹಲವಾರು ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿಯ ಭಾಷಣವನ್ನು ತರಾಟೆಗೆ ತೆಗೆದುಕೊಂಡರು.
ಮಾಜಿ ಹಣಕಾಸು ಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು ಟ್ವೀಟ್ ಮಾಡಿ “ಹಣವಿದೆ, ಆಹಾರವಿದೆ, ಆದರೆ ಸರ್ಕಾರ ಹಣ ಅಥವಾ ಆಹಾರವನ್ನು ಬಿಡುಗಡೆ ಮಾಡುತ್ತಿಲ್ಲ, ಪ್ರೀತಿಯ ದೇಶವೇ ಅತ್ತು ಬಿಡು” ಎಂದು ಹೇಳಿದ್ದಾರೆ.
ಮುಂದುವರೆದ ಚಿದಂಬರಂ, “ಮುಖ್ಯಮಂತ್ರಿಗಳು ಇಟ್ಟ ಹಣದ ಬೇಡಿಕೆಯು ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮಾರ್ಚ್ 25, 2020 ರ ಕೆಟ್ಟ ಪ್ಯಾಕೇಜ್‌ಗೆ ಒಂದು ರೂಪಾಯಿ ಕೂಡ ಸೇರಿಸಲಾಗಿಲ್ಲ. ರಘುರಾಮ್ ರಾಜನ್‌ನಿಂದ ಹಿಡಿದು ಜೀನ್ ಡ್ರೆಜ್‌ವರೆಗೆ, ಪ್ರಭಾತ್ ಪಟ್ನಾಯಕ್‌ನಿಂದ ಹಿಡಿದು ಅಭಿಜಿತ್ ಬ್ಯಾನರ್ಜಿವರೆಗೆ ಅವರ ಸಲಹೆಗೆ ಕಿವುಡಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
CMs’ demand for money elicited no response. Not a rupee has been added to the miserly package of March 25, 2020
From Raghuram Rajan to Jean Dreze, from Prabhat Patnaik to Abhijit Banerji, their advice has fallen on deaf years.
— P. Chidambaram (@PChidambaram_IN) April 14, 2020
ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು 10,000 ದಾಟಿದ ಬೆನ್ನಲ್ಲೇ ಪ್ರಧಾನಿ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. “ಎಲ್ಲರ ಸಲಹೆಗಳನ್ನು ಗಣನೆಗೆ ತೆಗೆದುಕೊಂಡ ನಂತರ ಲಾಕ್‌ಡೌನ್ ಅನ್ನು ಮೇ 3 ರವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ತಮ್ಮ 25 ನಿಮಿಷಗಳ ಭಾಷಣದಲ್ಲಿ ಹೇಳಿದ್ದಾರೆ.
“ಏಪ್ರಿಲ್ 20 ರವರೆಗೆ, ಪ್ರತಿ ಜಿಲ್ಲೆ, ಪ್ರತಿ ರಾಜ್ಯವನ್ನು ಲಾಕ್ ಡೌನ್ ಸರಿಯಾಗಿ ಅನುಸರಿಸಲಾಗಿದೆಯೆ ಎಂದು ಸೂಕ್ಷ್ಮವಾಗಿ ಗಮನಿಸಲಾಗುವುದು. ಅದರ ನಂತರ ನಾವು ನಿರ್ಬಂಧಗಳನ್ನು ಸಡಿಲಿಸುವ ಬಗ್ಗೆ ನಿರ್ಧರಿಸಬಹುದು” ಎಂದು ಪ್ರಧಾನಿ ಹೇಳಿದ್ದಾರೆ.
ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಲಾಕ್ ಡೌನ್ ವಿಸ್ತರಣೆಯನ್ನು ಬೆಂಬಲಿಸುತ್ತಿದ್ದರೂ, ಪ್ರಧಾನಿ ಮೋದಿ ಅವರು ಬಡವರಿಗೆ ಗಂಭೀರ ಪರಿಹಾರವನ್ನು ಘೋಷಿಸಬೇಕಾಗಿತ್ತು ಎಂದು ಹೇಳಿದ್ದಾರೆ.


