Homeಕರ್ನಾಟಕಎಸ್‍ಸಿ ಪಟ್ಟಿಗೆ 'ಲಿಂಗಾಯತ ಬೇಡ ಜಂಗಮ' ಸೇರ್ಪಡೆ ಬೇಡ: ಮಲ್ಲಿಕಾರ್ಜುನ ಖರ್ಗೆ

ಎಸ್‍ಸಿ ಪಟ್ಟಿಗೆ ‘ಲಿಂಗಾಯತ ಬೇಡ ಜಂಗಮ’ ಸೇರ್ಪಡೆ ಬೇಡ: ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಒಳ ಮೀಸಲಾತಿ ಕಲ್ಪಿಸಲೆಂದು ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಪಟ್ಟಿಗೆ ‘ಲಿಂಗಾಯತ ಬೇಡ ಜಂಗಮ’ ಸಮುದಾಯವರನ್ನು ಸೇರಿಸಲಾಗುತ್ತಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಮರ್ಪಣೆ ಸಂಕಲ್ಪ ಸಮಾವೇಶ’ದಲ್ಲಿ ಮಾತನಾಡಿದ ಅವರು, “ಒಳ ಮೀಸಲಾತಿ ಕಲ್ಪಿಸಿ, ಅದಕ್ಕೆ ನಮ್ಮ ತಕರಾರಿಲ್ಲ. ಆದರೆ, ಲಿಂಗಾಯತ ಬೇಡ ಜಂಗಮ ಸಮುದಾಯವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಬೇಡಿ. ಒಂದು ವೇಳೆ ಹಾಗೆ ಮಾಡಿದ್ದೇ ಆದರೆ, ಅದು ‘ಅಸ್ಪೃಶ್ಯ ವಿರೋಧಿ ಮಾತ್ರವಲ್ಲ, ದಲಿತ ವಿರೋಧಿಯೂ ಆಗಿದೆ’ ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೇವಲ 400-500 ಜನರಷ್ಟೇ ಇದ್ದ ಬೇಡ ಜಂಗಮ ಸಮುದಾಯದವರು, ಇಂದು ಸಮೀಕ್ಷೆಯಲ್ಲಿ 4 ಲಕ್ಷ ಮಂದಿ ಪರಿಶಿಷ್ಟ ಜಾತಿಯ(ಎಸ್‍ಸಿ) ಪಟ್ಟಿಗೆ ಹೇಗೆ ಬಂದರು? ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರಶ್ನಿಸಿದರು.

ಲಿಂಗಾಯತ ಸಮುದಾಯದಲ್ಲಿರುವ ಬಡ ಲಿಂಗಾಯತರಿಗೆ ಸವಲತ್ತು ಕೊಡಿ. ಆ ಲಿಂಗಾಯತರಿಗೆ ನಾವು ಬೆಂಬಲ ಕೊಡೋಣ. ಅವರಿಗೆ ಏನು ಬೇಕೋ ಅದು ಕೊಡೋಣ. ಆದರೆ, ಪರಿಶಿಷ್ಟ ಪಟ್ಟಿಯಲ್ಲಿ ಸೇರಿಸುವುದು ಬೇಡ ಎಂದು ಹೇಳಿದರು.

ಬೇಡ ಜಂಗಮರು ತಾವು ಎಸ್‌ಸಿ ಎಂದು ತೋರಿಸುವುದು ತಪ್ಪು. ಸುಳ್ಳು ಜಾತಿ ಪತ್ರ ನೀಡುವವರನ್ನು ಒಳ ಹಾಕಬೇಕು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು ಎಂದರು.

ರಾಹುಲ್ ಗಾಂಧಿ ಜಾತಿಗಣತಿ ಬಗ್ಗೆ ಮಾತನಾಡಿದಾಗ ಟೀಕೆ ಮಾಡಿದರು. ಆದರೆ, ಈಗ ಅವರ ಮಾತಿಗೆ ಮಣಿದು ಜನಗಣತಿಯ ಜೊತೆಗೆ ಜಾತಿಗಣತಿ ಮಾಡುತ್ತೇವೆ ಎಂದು ಮೋದಿ ಸರ್ಕಾರ ಹೇಳಿದೆ. ರಾಜ್ಯದಲ್ಲಿ ಜಾತಿ ಸಮೀಕ್ಷೆ ಮಾಡಿ. ಆದರೆ, ಅದು ಸರಿಯಾಗಿ ಆಗಬೇಕು. ರಾಹುಲ್ ಗಾಂಧಿಗೆ ಕೆಟ್ಟ ಹೆಸರು ಬರಬಾರದು. ನೀವು ನಿಮ್ಮ ಕ್ರೆಡಿಟ್ ತೆಗೆದುಕೊಳ್ಳಲು ಮಾಡಿದರೆ, ಇಡೀ ರಾಜ್ಯಕ್ಕೆ ತೊಂದೆಯಾಗುತ್ತದೆ ಎಂದು ಹೇಳಿದರು.

ಚುನಾವಣೆ ವೇಳೆ ಜನರ ಮುಂದೆ ಇಟ್ಟಿದ್ದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -