ರಾಜ್ಯದ ಹಲವು ಭಾಗಗಳಲ್ಲಿ ಸಿಂಹ ಮತ್ತು ಹುಲಿ ಓಡಾಡಿದೆ ಎಂದು ಇತ್ತಿಚೆಗೆ ಹಲವಾರು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ ಅವುಗಳಲ್ಲಿ ಹೆಚ್ಚಿನವು ಸುಳ್ಳು ಪ್ರತಿಪಾದನೆಗಳಾಗಿವೆ. ಅಂತಹದ್ದೆ ವೀಡಿಯೊವೊಂದನ್ನು ಕನ್ನಡ ಸುದ್ದಿ ಮಾಧ್ಯಮ ‘ಝೀ ಕನ್ನಡ ನ್ಯೂಸ್’ ಕೂಡಾ ‘ಪಾವಗಡದಲ್ಲಿ ಸಿಂಹ’ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ತನ್ನ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
‘ಪಾವಗಡದ ಪೆಟ್ರೋಲ್ ಬಂಕ್‌ನಲ್ಲಿ ಅಡ್ಡಾಡಿದ ಸಿಂಹ’ ಎಂಬ ಶಿರ್ಷಿಕೆಯೊಂದಿಗೆ ‘ಝೀ ಕನ್ನಡ ನ್ಯೂಸ್’ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ರೀಲ್ಸ್ ಮಾಡಿ ಅಪ್‌ಲೋಡ್ ಮಾಡಿದೆ. ಈ ಸುದ್ದಿ ಬರೆಯುವ ವೇಳೆಗೆ ಈ ವಿಡಿಯೊ 21 ಲಕ್ಷ ವೀಕ್ಷಣೆ ಪಡೆದಿದೆ.ಪಾವಗಡದಲ್ಲಿ ಸಿಂಹ

ರಾಜ್ಯದ ಹಲವೆಡೆ ರಾತ್ರಿ ಹೊತ್ತು ಸಿಂಹ ಮತ್ತು ಹುಲಿ ಓಡಾಡಿರುವುದಾಗಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಎರಡು ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ವಿಡಿಯೋಗಳು ದಿನಕ್ಕೊಂದರಂತೆ ಬೇರೆ ಬೇರೆ ಊರಿನ ಹೆಸರಿನಲ್ಲಿ ವೈರಲ್ ಆಗುತ್ತಿವೆ. ಈ ಬಗ್ಗೆ ನಾನು ಗೌರಿ ಫ್ಯಾಕ್ಟ್‌ಚೆಕ್ ಮಾಡಿದ್ದು, ಅದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ : FACT CHECK : ಪ. ಬಂಗಾಳದಲ್ಲಿ ಮುಸ್ಲಿಂ ಯುವಕ ಹಿಂದೂ ಬಾಲಕಿಗೆ ಇರಿದಿದ್ದಾನೆ ಎಂಬುವುದು ಸುಳ್ಳು
ಝೀ ಕನ್ನಡ ನ್ಯೂಸ್ ವಿಡಿಯೊ ವಾಸ್ತವವೇನು?
ವಾಸ್ತವದಲ್ಲಿ ಝೀ ಕನ್ನಡ ನ್ಯೂಸ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊ ಆಗಸ್ಟ್, 2024ರದ್ದಾಗಿದ್ದು, ಗುಜರಾತ್‌ನ ವಿಡಿಯೊ ಆಗಿದೆ. ಈ ಕುರಿತು ನ್ಯೂಸ್18 ಗುಜರಾತಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 20, 2024ರಂದು ಸುದ್ದಿ ಪ್ರಕಟಿಸಿತ್ತು.

ಈ ಸುದ್ದಿಯಲ್ಲಿ ಗುಜರಾತ್‌ನ ಅಮ್ರೇಲಿಯ ಧರಿ-ವಿಸಾವದರ್ ರಸ್ತೆಯ ಪೆಟ್ರೋಲ್ ಬಂಕ್‌ನಲ್ಲಿ ರಾತ್ರಿ ಹೊತ್ತು ಸಿಂಹ ಕಾಣಿಸಿಕೊಂಡಿದೆ ಎಂದು ವರದಿ ಹೇಳಿತ್ತು.


