Homeಕರ್ನಾಟಕ‘ಮದ್ಯ ಖರೀದಿ ವಯಸ್ಸನ್ನು 21 ರಿಂದ 18ಕ್ಕೆ’ | ಕರಡು ಅಧಿಸೂಚನೆ ಹೊರಡಿಸಿದ ಬೊಮ್ಮಾಯಿ ಸರ್ಕಾರ

‘ಮದ್ಯ ಖರೀದಿ ವಯಸ್ಸನ್ನು 21 ರಿಂದ 18ಕ್ಕೆ’ | ಕರಡು ಅಧಿಸೂಚನೆ ಹೊರಡಿಸಿದ ಬೊಮ್ಮಾಯಿ ಸರ್ಕಾರ

- Advertisement -
- Advertisement -

ರಾಜ್ಯ ಬಿಜೆಪಿ ಸರ್ಕಾರ ಮದ್ಯ ಖರೀದಿಸುವ ವಯಸ್ಸಿನ ನಿರ್ಬಂಧವನ್ನು 21 ರಿಂದ 18ಕ್ಕೆ ಇಳಿಸುವ ಬಗ್ಗೆ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಈ ನಿಟ್ಟಿನಲ್ಲಿ ಅಭಿಪ್ರಾಯಗಳನ್ನು, ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನಾಗರೀಕರೊಂದಿಗೆ ಕೇಳಿದೆ. ಪ್ರಸ್ತುತ ಮದ್ಯ ಮಾರಾಟಕ್ಕೆ ಕಾನೂನುಬದ್ಧ ವಯಸ್ಸು 21 ಆಗಿದ್ದು, ಅಧಿಸೂಚನೆ ಜಾರಿಗೆ ಬಂದರೆ ಅದು 18 ಆಗಲಿದೆ.

ಪ್ರಸ್ತುತ ಅಬಕಾರಿ ಕಾನೂನು 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸುತ್ತದೆ. ಇತ್ತೀಚಿನ ಅಧಿಸೂಚನೆಯು ‘ಕರ್ನಾಟಕ ಅಬಕಾರಿ ನಿಯಮಗಳು – 2023’ ರ ಕರಡು, ವಯೋಮಾನ ಕಡಿತಕ್ಕೆ ದಾರಿ ಮಾಡಿಕೊಡುತ್ತದೆ. ಆಕ್ಷೇಪಣೆಗಳಿದ್ದಲ್ಲಿ ಅಧಿಸೂಚನೆಯ 30 ದಿನಗಳಲ್ಲಿ ಸಲ್ಲಿಸಬೇಕು ಎಂದು ಅಬಕಾರಿ ಇಲಾಖೆ ತಿಳಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

2015 ರವರೆಗೆ ಆಲ್ಕೊಹಾಲ್‌‌ ಪಾನೀಯಗಳನ್ನು ಖರೀದಿಸಲು ಕಾನೂನುಬದ್ಧ ವಯಸ್ಸನ್ನು 18 ಇತ್ತು. ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತು) ನಿಯಮಗಳು – 1967 ಗೆ ತಿದ್ದುಪಡಿ ಮಾಡುವ ಮೂಲಕ ಇದನ್ನು 21 ಕ್ಕೆ ಹೆಚ್ಚಿಸಲಾಯಿತು. ಇದು ದುಬಾರಿ ಪಬ್‌ಗಳು ಮತ್ತು ಬಾರ್‌ಗಳಲ್ಲಿ 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ಪರಿಣಾಮಕಾರಿಯಾಗಿ ತಡೆಯಿತು.

ಖಂಡಿಸಿದ ವಿದ್ಯಾರ್ಥಿ ಸಂಘಟನೆಗಳು:

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೆವಿಎಸ್‌‌‌ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕ ಸರೋವರ್‌ ಬೆಂಕಿಕೆರೆ, “ಸರ್ಕಾರದ ಈ ನಡೆ ನನಗೆ ಆಶ್ಚರ್ಯ ತರಿಸಿಲ್ಲ, ಅಘಾತವಷ್ಟೆ ನೀಡಿದೆ. ಈ ಸರ್ಕಾರ ಮದ್ಯ ಖರೀದಿಯ ವಯಸ್ಸನ್ನು 18 ಮಾತ್ರವಲ್ಲ, 16 ಇಳಿಸಲು ಕೂಡಾ ಹೇಸಲ್ಲ. ಜನರನ್ನು ಕುಡಿಸಲು ಸರ್ಕಾರವೇ ಅಬಕಾರಿ ಇಲಾಖೆಗೆ ಟಾರ್ಗೆಟ್‌ ನೀಡುತ್ತದೆ. ಈ ಟಾರ್ಗೆಟ್‌ ಅನ್ನು ಇನ್ನಷ್ಟು ವಿಸ್ತಾರ ಮಾಡಲು ಸರ್ಕಾರ ಮುಂದಾಗಿದೆ. ಬಿಜೆಪಿ ಸರ್ಕಾರ ಈಗಾಗಲೆ ಯುವಜನರನ್ನು ಜಾತಿ-ಧರ್ಮ, ಕೋಮುಗಲಭೆ ಅನ್ನುವ ಅಮಲಿನಲ್ಲಿ ಮುಳುಗಿಸಿದೆ. ಇದೀಗ ಮತ್ತೇ ದೈಹಿಕ ಮತ್ತು ಮಾನಸಿಕ ಅಮಲಿನಲ್ಲೆ ಯುವಜನರು ಇರಬೇಕು ಎಂದು ಬಯಸುತ್ತಿದೆ. ಒಟ್ಟಿನಲ್ಲಿ ಯುವಜನರ ಮಾನಸಿಕ ಮತ್ತು ದೈಹಿಕ ಆರೋಗ್ಯ ಹಾಗೂ ಅವರ ಭವಿಷ್ಯವನ್ನು ಹಾಳುಮಾಡಲು ಪಣತೊಟ್ಟು ನಿಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಯಾವುದೇ ಸಾಧನೆ ಮಾಡದ ಸರ್ಕಾರ, ಚುನಾವಣೆ ಬರುವಂತಹ ಸಮಯದಲ್ಲಿ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಲು ಇದನ್ನೆಲ್ಲಾ ಮಾಡುತ್ತಿದೆ. ಉದ್ಯೋಗ, ಉಚಿತ ಶಿಕ್ಷಣ, ಸಮಾನ ಶಿಕ್ಷಣದ ಕುರಿತಾಗಿ ಈವರೆಯೆ ಯಾವುದೆ ಸಾಧನೆ ಮಾಡದ ಸರ್ಕಾರ, ಇದೀಗ ಮದ್ಯದ ಅಮಲಿನಲ್ಲಿ ತೇಲಿಸುವಂತೆ ಕೆಲಸ ಮಾಡುತ್ತಿದೆ. ರಾಜಕಾರಣಿಗಳೆ ಕುಡಿದ ಮತ್ತಿನಲ್ಲಿ ಆಕ್ಸಿಡೆಂಟ್‌ಗಳು ಮಾಡುತ್ತಿರುವಂತಹ ಸಂದರ್ಭದಲ್ಲಿ ಮತ್ತೊಂದಷ್ಟು ಜನರನ್ನು ಮತ್ತಿನಲ್ಲಿ ಮುಳುಗುವಂತೆ ಮಾಡಲು ಸರ್ಕಾರ ಹೊರಡುತ್ತಿದೆ. ಯುವ ಜನರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಶಿಕ್ಷಣ-ಆರೋಗ್ಯ-ಉದ್ಯೋಗದಂತಹ ನೈಜ ಸಮಸ್ಯೆಗಳ ವಿಚಾರಗಳನ್ನು ಇಟ್ಟುಕೊಂಡು ಮುಂಬರುವ ಚುನಾವಣೆಯಲ್ಲಿ ಎದುರಿಸಬೇಕಾಗಿದೆ” ಎಂದು ಸರೋವರ್‌ ಹೇಳಿದರು.

ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆಯ ರಾಜ್ಯಾಧ್ಯಕ್ಷ ವಾಸುದೇವ ರೆಡ್ಡಿ ಮಾತನಾಡಿ, “ನಿನ್ನೆಯಷ್ಟೆ ಪ್ರಧಾನಿ ಮೋದಿ ಹುಬ್ಬಳ್ಳಿಯಲ್ಲಿ ಯುವಜನೋತ್ಸವ ಉದ್ಘಾಟನೆ ಮಾಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಯುವಜನ ನೀತಿ ಎಂಬುವುದೆ ಇಲ್ಲ. ಯುವಜನರು ಎದುರಿಸುತ್ತಿರುವ ನಿರುದ್ಯೋಗ ಸೇರಿದಂತೆ ಹಲವಾರು ಸಮಾಜಘಾತುಕ ಶಕ್ತಿಗಳಿಗೆ, ಕೋಮುವಾದಕ್ಕೆ, ಜಾತಿ – ಅಸ್ಪೃಶ್ಯತೆಗೆ ಒಳಗಾಗುತ್ತಿದ್ದಾರೆ. ಇದೆಲ್ಲದರ ಜೊತೆಗೆ ಆನ್‌ಲೈನ್ ಜೂಜಾಟ ಹೆಚ್ಚಾಗಿದ್ದು, ಯುವಜನರು ಇವುಗಳಲ್ಲಿ ತೊಡಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿರುವಾಗ ಸರ್ಕಾರ ಮದ್ಯ ಖರೀದಿಯ ವಯಸ್ಸನ್ನು ಇಳಿಸಿ ದೊಡ್ಡ ಪ್ರಮಾಣದಲ್ಲಿ ಯುವ ಜನರನ್ನು ಕುಡುಕರನ್ನಾಗಿ ಮಾಡುವ ಹುನ್ನಾರ ಮಾಡುತ್ತಿದೆ” ಎಂದು ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ.

“ಬಿಜೆಪಿ ಸರ್ಕಾರ ಬಾಯಿ ಬಿಟ್ಟರೆ ನೈತಿಕತೆ, ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾತನಾಡುತ್ತದೆ. ಆದರೆ ಕಾನೂನು ಮೂಲಕ ಯುವಕರು ಮದ್ಯಪಾನಕ್ಕೆ ತೆರೆದುಕೊಳ್ಳಲು ಅವಕಾಶ ನೀಡುತ್ತಿದೆ. ರಾಮ ರಾಜ್ಯದ ಬಗ್ಗೆ ಹೇಳುವ ಈ ಸರ್ಕಾರ ಯುವಕರಿಗೆ ಮದ್ಯ ಬೇಗನೇ ಸಿಗುವಂತೆ ಮಾಡಿ ಪಾನ ರಾಜ್ಯ ಮಾಡುತ್ತಿದೆ. ಇದನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ ಮತ್ತು ಇದನ್ನು ವಾಪಾಸು ಪಡೆಯಬೇಕು ಎಂದು ಆಗ್ರಹಿಸುತ್ತದೆ” ಎಂದು ವಾಸುದೇವ್‌ ರೆಡ್ಡಿ ಹೇಳಿದ್ದಾರೆ.

ಕುಡಿತದ ವಯೋಮಿತಿ ಸಡಿಲಿಕೆ ಮಾಡುವ ಸರಕಾರದ ತಿದ್ದುಪಡಿಗೆ ಜನ ಆಕ್ಷೇಪ ವ್ಯಕ್ತಪಡಿಸುವ ಸಂಭವವಿದ್ದು, ಇದನ್ನು ನೀತಿ ನಿರ್ಧಾರವಾಗಿ ಸರಕಾರ ಮುಂದುವರಿಸಲಿದೆ ಎಂದು ಮೂಲಗಳು ತಿಳಿಸಿವೆ. ಬೆಂಗಳೂರಿನ ಪಬ್‌ಗಳಲ್ಲಿ ತಮ್ಮ 18 ನೇ ಹುಟ್ಟುಹಬ್ಬವನ್ನು ಆಚರಿಸಲು ಬಯಸುವ ಅನೇಕರಿಗೆ ಪಬ್ ಸಂಸ್ಕೃತಿಯ ಮೇಲೆ ವ್ಯಾಮೋಹ ಬೆಳೆಸಿರುವುದರಿಂದ ಕೆಲವರು ವಯಸ್ಸಿನ ಸಡಿಲಿಕೆಯ ಪರವಾಗಿದ್ದಾರೆ.

ವಿಶ್ವದಲ್ಲಿ ನಡೆಯುವ ಅಕಾಲಿಕ ಮರಣ ಮತ್ತು ಅಂಗವೈಕಲ್ಯಕ್ಕೆ 5 ನೇ ಪ್ರಮುಖ ಕಾರಣ ಆಲ್ಕೋಹಾಲ್ ಬಳಕೆಯಾಗಿದೆ ಎಂದು ವರದಿಗಳು ಹೇಳುತ್ತವೆ. ಆಲ್ಕೋಹಾಲ್ ಬಳಕೆಯಿಂದಾಗಿ 200 ಕ್ಕೂ ಹೆಚ್ಚು ಕಾಯಿಲೆಗಳು ಅದರಲ್ಲೂ ಮುಖ್ಯವಾಗಿ ಲಿವರ್ ಸಿರೋಸಿಸ್, ಕ್ಯಾನ್ಸರ್ ಕಾಯಿಲೆಗಳು ಬರುವ ಸಂಭವವಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...