ರಾಜ್ಯ ಲೋಕಾಯುಕ್ತ ಗುರುವಾರ ನಾಲ್ಕು ಜಿಲ್ಲೆಗಳ ನಾಲ್ವರು ಸರ್ಕಾರಿ ಅಧಿಕಾರಿಗಳ ಆಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದೆ. ಅಕ್ರಮ ಆಸ್ತಿ ಪ್ರಕರಣಗಳ ತನಿಖೆಯ ಭಾಗವಾಗಿ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಿಗೆ ಸಂಬಂಧಿಸಿದ 10 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ವರದಿಯಾಗಿದೆ.
ಲೋಕಾಯುಕ್ತ ಮೂಲಗಳ ಪ್ರಕಾರ, ಬೆಂಗಳೂರು, ಕೋಲಾರ, ಯಾದಗಿರಿ ಮತ್ತು ದಾವಣಗೆರೆಯಲ್ಲಿ ದಾಳಿಗಳು ನಡೆಯುತ್ತಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ದಾಳಿಯಗೆ ಒಳಪಟ್ಟವರಲ್ಲಿ, ಕೋಲಾರದ ಎಡಿಎಲ್‌ಆರ್‌ನ ಸರ್ವೇ ಮೇಲ್ವಿಚಾರಕ ಸುರೇಶ್ ಬಾಬು ಜಿ; ಯಾದಗಿರಿಯ ಸುರಪುರದ ತಾಲ್ಲೂಕು ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ್; ದಾವಣಗೆರೆಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಬಿ. ರವಿ ಇದ್ದಾರೆ.
ಅಲ್ಲದೆ, ಮಹಾದೇವಪುರದ ಜಲಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ. ಶ್ರೀನಿವಾಸ ಮೂರ್ತಿ ಅವರ ಆಸ್ತಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳಿಗೆ ಸೇರಿದ ದಾಖಲೆಗಳು, ಆಸ್ತಿಗಳು, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಉತ್ತರ ಕನ್ನಡ| ಬಾಲಕಿ ಮೇಲೆ ಅತ್ಯಾಚಾರ; ತಲೆಮರೆಸಿಕೊಂಡ ಆರೋಪಿ ವಿಶ್ವನಾಥ್ ಹೆಗಡೆ
ಉತ್ತರ ಕನ್ನಡ| ಬಾಲಕಿ ಮೇಲೆ ಅತ್ಯಾಚಾರ; ತಲೆಮರೆಸಿಕೊಂಡ ಆರೋಪಿ ವಿಶ್ವನಾಥ್ ಹೆಗಡೆ

