Homeಮುಖಪುಟ‘ಮಾ, ಮಟಿ, ಮನುಷ್‌’ ಎಂದು ಮೂರು ಬೆರಳೆತ್ತಿ ದಿಗ್ವಿಜಯ ಸಂಭ್ರಮಿಸಿದ ದೀದಿ

‘ಮಾ, ಮಟಿ, ಮನುಷ್‌’ ಎಂದು ಮೂರು ಬೆರಳೆತ್ತಿ ದಿಗ್ವಿಜಯ ಸಂಭ್ರಮಿಸಿದ ದೀದಿ

58,832 ಮತಗಳ ಅಂತರದಲ್ಲಿ ಗೆಲುವು, ಮಮತಾ ಬ್ಯಾನರ್ಜಿಯವರ ಮುಖ್ಯಮಂತ್ರಿ ಕುರ್ಚಿ ಭದ್ರ; ಸೋಲಿನ ಬಳಿಕ ‘ನಕಲಿ ಮತ’ ಆರೋಪ ಮಾಡಿದ ಬಿಜೆಪಿ ಅಭ್ಯರ್ಥಿ

- Advertisement -
- Advertisement -

ಪಶ್ಚಿಮ ಬಂಗಾಳದ ಭಬನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿಯಾಗಿ ಮುಂದುವರಿಯಲು ಇದ್ದ ತೊಡಕು ನಿವಾರಣೆಯಾಗಿದೆ.

ಮಾರ್ಚ್-ಏಪ್ರಿಲ್‌‌ನಲ್ಲಿ ನಡೆದ ಚುನಾವಣೆಯಲ್ಲಿ ನಂದೀಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಯವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲು ಕಂಡಿದ್ದರು. ಬಹುಮತ ಪಡೆದ ಟಿಎಂಸಿ ಅಧಿಕಾರ ಹಿಡಿದಿತ್ತು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಮತಾ ಅವರು, ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ಆರು ತಿಂಗಳ ನಂತರ ಶಾಸಕರಾಗಿ ಆಯ್ಕೆಯಾಗುವುದು ಅನಿವಾರ್ಯವಾಗಿತ್ತು. ಹೀಗಾಗಿ ತಮ್ಮ ಸಾಂಪ್ರದಾಯಿಕ ಕ್ಷೇತ್ರದಲ್ಲಿಯೇ ಚುನಾವಣೆ ಎದುರಿಸಲು ನಿರ್ಧರಿಸಿ, ಸಚಿವ ಹಾಗೂ ಶಾಸಕ  ಸೋವಂದೇಬ್ ಚಟ್ಟೋಪಾಧ್ಯಾಯ ಅವರಿಂದ ರಾಜೀನಾಮೆ ಕೊಡಿಸಿದ್ದರು. ಸೆ.30ರಂದು (ಗುರುವಾರ) ಮತದಾನ ನಡೆದಿದ್ದು, ಆ.3ರಂದು (ಭಾನುವಾರ) ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪ್ರಿಯಾಂಕ ತಿಬ್ರೇವಾಲ್‌ ಅವರನ್ನು ಸುಲಭವಾಗಿ ಸೋಲಿಸಿರುವ ದೀದಿ, ತಮ್ಮ ಸಿಎಂ ಸ್ಥಾನವನ್ನು ಭದ್ರ ಮಾಡಿಕೊಂಡಿದ್ದಾರೆ.

58,832 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದು, “ಇದು ನಂದಿಗ್ರಾಮದಲ್ಲಿ ನನ್ನನ್ನು ಸೋಲಿಸಲು ರೂಪಿಸಿದ ಪಿತೂರಿಯ ವಿರುದ್ಧದ ಗೆಲುವು ಇದು. ನನಗೆ ಇಷ್ಟು ದೊಡ್ಡ ಜನಾದೇಶ ನೀಡಿದ ಭಬನಿಪುರದ ಜನರಿಗೆ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ. 2011ರ ಚುನಾವಣೆಯಲ್ಲಿ ಪಡೆದ ಮತಗಳಿಂದ ಹೆಚ್ಚು ಮತಗಳನ್ನು ಮಮತಾ ಬ್ಯಾನರ್ಜಿ ಈ ಚುನಾವಣೆಯಲ್ಲಿ ಪಡೆದಿದ್ದಾರೆ ಎನ್ನಲಾಗಿದೆ.

“ಅತ್ಯಂತ ಹೃದಯಸ್ಪರ್ಶಿ ಸಂಗತಿಯೆಂದರೆ, ನಾನು ಕ್ಷೇತ್ರದಲ್ಲಿ ಒಂದೇ ಒಂದು ವಾರ್ಡ್‌ನಲ್ಲಿಯೂ ಸೋತಿಲ್ಲ. ಕಳೆದ ಬಾರಿ, ನಾನು ಒಂದೆರಡು ವಾರ್ಡ್‌ಗಳಲ್ಲಿ ಹಿಂದುಳಿದಿದ್ದೆ. ಏಪ್ರಿಲ್ ಚುನಾವಣೆಯಲ್ಲಿ ನಮ್ಮ ವಿರುದ್ಧ ಸಾಕಷ್ಟು ಪಿತೂರಿಗಳು ನಡೆದಿವೆ. ನಾವು ಗೆದ್ದಿದ್ದಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನಂದಿಗ್ರಾಮದಲ್ಲಿ ನಾನು ಸೋತಿದ್ದೇನೆ ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿರಿ: ಭಾರತವನ್ನು ತಾಲಿಬಾನ್, ಪಾಕಿಸ್ತಾನ ಆಗಲು ಬಿಡುವುದಿಲ್ಲ- ಮಮತಾ ಬ್ಯಾನರ್ಜಿ

ಸೋಲಿನ ನಂತರ ‘ನಕಲಿ ಮತ’ ಆರೋಪ

ಇದರ ನಡುವೆ ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್ ತಮ್ಮ ಸೋಲಿಗೆ ‘ನಕಲಿ ಮತದಾರರು ಕಾರಣ’ ಎಂದು ಆರೋಪಿಸಿದ್ದಾರೆ. “ಜನರು ಮತ ಚಲಾಯಿಸಲು ಅವಕಾಶ ನೀಡಿದ್ದರೆ, ಫಲಿತಾಂಶವು ವಿಭಿನ್ನವಾಗಿರುತ್ತಿತ್ತು. ಮತದಾನದ ದಿನವೂ ನಾನು ನಕಲಿ ಮತದಾರರನ್ನು ಹಿಡಿದಿದ್ದೇನೆ. ಹಲವು ಬೂತ್‌ಗಳಲ್ಲಿ ಮತಯಂತ್ರಗಳನ್ನು ಕಳ್ಳತನ ಮಾಡಲಾಗಿದೆ. ಆದರೆ ಭಬಾನಿಪುರದಲ್ಲಿ ನಮ್ಮ ಸಂಘಟನೆ ದುರ್ಬಲವಾಗಿತ್ತು ಎಂದು ನಾನು ಒಪ್ಪಿಕೊಳ್ಳುತ್ತೇನೆ. ನಾವು ಇದನ್ನು ಸುಧಾರಿಸಬೇಕು” ಎಂದು ತಿಬ್ರೇವಾಲ್‌ ಆರೋಪಿಸಿದ್ದಾರೆ.

ಮುರ್ಶಾಬಾದ್‌ ಜಿಲ್ಲೆಯ ಜಂಗೀಪುರ ಮತ್ತು ಸಂಸರ್‌ಗಂಜ್ ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮುರ್ಶಾಬಾದ್‌ ಜಿಲ್ಲೆಯ ಜಂಗೀಪುರ ಮತ್ತು ಸಂಸರ್‌ಗಂಜ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ತೃಣಮೂಲ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಸಂಸರ್‌ಜಂಗ್‌ನ ಟಿಎಂಸಿ ಅಭ್ಯರ್ಥಿ ಐದನೇ ಸುತ್ತಿನ ಮತ ಎಣಿಕೆ 3,768 ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಜಂಗೀಪರದ ಟಿಎಂಸಿ ಅಭ್ಯರ್ಥಿ ಎರಡನೇ ಸುತ್ತಿನ ಮತ ಎಣಿಕೆಯಲ್ಲಿ 15,643 ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಬಿಗಿ ಭದ್ರತೆ

ಮತ ಎಣಿಕೆ ಕೇಂದ್ರದ ಸುತ್ತ ಬಿಗಿ ಭದ್ರತೆಯನ್ನು ಪೊಲೀಸರು ಕೈಗೊಂಡಿದ್ದರು. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿತ್ತು. 24 ಕಂಪನಿಗಳ ಕೇಂದ್ರ ಪಡೆಗಳನ್ನು ಎಣಿಕೆ ಕೇಂದ್ರಗಳಲ್ಲಿ ನಿಯೋಜಿಸಲಾಗಿತ್ತು. ಇಡೀ ಪ್ರದೇಶವನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇಡಲಾಗಿತ್ತು.

ಇದನ್ನೂ ಓದಿ: ರೋಮ್‌ ಭೇಟಿಗೆ ಅನುಮತಿ ನಿರಾಕರಣೆ: ಕೇಂದ್ರದ ‘ಅಸೂಯೆ’ ಎಂದ ದೀದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈಗ ನೋಡಿ ಗೆದ್ದ ಟಿಎಂಸಿ ಸೋತ ಬಿಜೆಪಿ ಅಭ್ಯರ್ಥಿ ಮನೆ ಸುಡುವುದು,ಬೆಂಕಿ ಹಚ್ಚುವುದು, ಬಿಜೆಪಿ ಪರ ಓಡಾಡಿದ ಮಹಿಳೆ ರೇಪ್ ಮಾಡುವುದು ಸಾಮಾನ್ಯ ಕಾರ್ಯ ಎನಿಸುತ್ತೇ ಇದನ್ನು ನೋಡಿ ಸಾಕಾಗಿ ಬಿಜೆಪಿಗೆ ಓಡಾಡಿದ ಜನ ಸದ್ದಿಲ್ಲದೆ ಟಿಎಂಸಿ ಸೇರಿ ಕೊಂಡು ಉಸಿರು ಬಿಡುತ್ತಾರೆ…!!
    #wastePM #GreatSecularTMC

LEAVE A REPLY

Please enter your comment!
Please enter your name here

- Advertisment -

Must Read

2023ರಲ್ಲಿ ತೀವ್ರ ಹಸಿವಿನಿಂದ ತತ್ತರಿಸಿದ 282 ಮಿಲಿಯನ್ ಜನರು: ಆಹಾರದ ಅಭಾವಕ್ಕೆ ವಿಶ್ವಸಂಸ್ಥೆ ಉಲ್ಲೇಖಿಸಿದ...

0
ಕಳೆದ ವರ್ಷ ಪ್ರಪಂಚದಾದ್ಯಂತ ಆಹಾರ ಅಭದ್ರತೆ ಸ್ಥಿತಿ ಭಾರೀ ಹದಗೆಟ್ಟಿದೆ, 2023ರಲ್ಲಿ ಸುಮಾರು 282 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲಿದ್ದಾರೆ, ಇದರಲ್ಲಿ ವಿಶೇಷವಾಗಿ ಯುದ್ಧಪೀಡಿತ ಗಾಝಾ ಮತ್ತು ಸುಡಾನ್‌ನಲ್ಲಿ ಹೆಚ್ಚಿನ ಜನರು...