ಮಧ್ಯಪ್ರದೇಶದಲ್ಲಿ “ಲವ್ ಜಿಹಾದ್” ಪ್ರಕರಣಗಳ ತನಿಖೆಗಾಗಿ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. “ಅಂತಹ ಯಾವುದೇ ಪ್ರಕರಣವನ್ನು ಸಹಿಸಲಾಗುವುದಿಲ್ಲ ಮತ್ತು ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ರಾಜ್ಯ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ. ಮಧ್ಯಪ್ರದೇಶ
“ಲವ್ ಜಿಹಾದ್” ಎಂಬುದು ಬಿಜೆಪಿ ಮತ್ತು ಆರೆಸ್ಸೆಸ್ ಪ್ರೇರಿತ ಕಾಲ್ಪನಿಕ ಕಟ್ಟುಕತೆಯಾಗಿದೆ. ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಪ್ರೇಮಿಸಿ ಮೋಸಗೊಳಿಸಿ ಅಂತಿಮವಾಗಿ ಅವರನ್ನು ಇಸ್ಲಾಂಗೆ ಮತಾಂತರಿಸುವ ಸಂಘಟಿತ ಸಂಚು ಮಾಡುತ್ತಿದ್ದಾರೆ ಎಂದು ಇದರಲ್ಲಿ ಆರೋಪಿಸಲಾಗುತ್ತದೆ.
ಅದಾಗ್ಯೂ, ಇಂತಹ ಯಾವುದೇ ಪ್ರಕರಣ ಈ ವರೆಗೆ ದಾಖಲಾಗಿಲ್ಲ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಭಾರತೀಯ ಕಾನೂನಿನಲ್ಲಿ ಅಂತಹ ಪದವನ್ನು ವ್ಯಾಖ್ಯಾನಿಸಲು ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
VIDEO | Bhopal: Madhya Pradesh Minister Vishwas Sarang on recent love jihad cases in the state said, “In response to such cases, the hon’ble Chief Minister has constituted an SIT. No such case will be tolerated-strictest action will be taken.”
On Congress leader Ajay Rai's… pic.twitter.com/XOVCLVjgrr
— Press Trust of India (@PTI_News) May 5, 2025
ಭೋಪಾಲ್‌ನಲ್ಲಿ ನಡೆದ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿನಿಯರು ಏಪ್ರಿಲ್‌ನಲ್ಲಿ ತಮ್ಮ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ವೀಡಿಯೊಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.
ಪೊಲೀಸರ ಪ್ರಕಾರ, ಈ ವಿಷಯದಲ್ಲಿ ಆರೋಪಿಗಳು ತಮ್ಮ ಧಾರ್ಮಿಕ ಗುರುತನ್ನು ಮರೆಮಾಡಿ ನಂತರ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ. ಈ ಪ್ರಕರಣದ ನಂತರ ಭೋಪಾಲ್‌ನಲ್ಲಿ ಬಿಜೆಪಿ ಪರ ದುಷ್ಕರ್ಮಿಗಳ ಗುಂಪು ಪ್ರತಿಭಟನೆಗೆ ನಡೆಸಿದ್ದು, ಅವರು ಈ ಅಪರಾಧವನ್ನು “ಲವ್ ಜಿಹಾದ್” ಎಂದು ಆರೋಪಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರಕರಣದ ಸಂದರ್ಭದಲ್ಲಿ, ಮಧ್ಯಪ್ರದೇಶ ಪೊಲೀಸ್ ಪ್ರಧಾನ ಕಚೇರಿಯು, ಸಾಮಾಜಿಕವಾಗಿ ದುರ್ಬಲ ಹಿನ್ನೆಲೆಯ ಹುಡುಗಿಯರು ಮತ್ತು ಮಹಿಳೆಯರನ್ನು “ಪ್ರೀತಿಯ ಬಲೆಗೆ ಬೀಳಿಸುವುದು, ವಂಚನೆ, ಬೆದರಿಕೆಗಳು ಅಥವಾ ಇತರ ಪ್ರಚೋದನೆಗಳಂತಹ ತಂತ್ರಗಳ ಮೂಲಕ ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿದ್ದಾರೆ. ಇದು ಅವರ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಶೋಷಣೆಗೆ ಕಾರಣವಾಗುತ್ತದೆ” ಎಂದು ಗುಪ್ತಚರ ಮಾಹಿತಿಗಳನ್ನು ಹೊಂದಿದೆ ಎಂದು ಹೇಳಿದೆ.
ಸಂತ್ರಸ್ತ ಹುಡುಗಿಯರು ಮತ್ತು ಮಹಿಳೆಯರನ್ನು ಭಯ, ಒತ್ತಡ ಅಥವಾ ವಂಚನೆಯ ಮೂಲಕ ತಮ್ಮನ್ನು ಮತಾಂತರಿಸಲಾಗುತ್ತಿದೆ ಎಂದು ಪೊಲೀಸರು ಹೇಳಿಕೊಂಡಿದ್ದಾರೆ. “ಇಂತಹ ಘಟನೆಗಳು ಸಮಾಜದಲ್ಲಿ ಅಪರಾಧ ಮಾತ್ರವಲ್ಲ, ಮಹಿಳೆಯರ ಘನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಸವಾಲನ್ನು ಒಡ್ಡುತ್ತವೆ” ಎಂದು ಪೊಲೀಸರು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಲವಂತದ ಮತಾಂತರದ ಆಪಾದಿತ ಘಟನೆಗಳನ್ನು ಗುರುತಿಸುವ ಮತ್ತು ತನಿಖೆ ಮಾಡುವ, ಭಾಗಿಯಾಗಿರಬಹುದಾದ ವ್ಯಕ್ತಿಗಳು ಮತ್ತು ಗುಂಪುಗಳನ್ನು ಪತ್ತೆಹಚ್ಚುವ ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾರ್ಯವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲಾಗಿದೆ.
ಬಲವಂತದ ಧಾರ್ಮಿಕ ಮತಾಂತರದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಅಂತರರಾಜ್ಯ ಅಥವಾ ಅಂತರರಾಷ್ಟ್ರೀಯ ಜಾಲಗಳನ್ನು ಸಹ ತಂಡವು ತನಿಖೆ ಮಾಡುತ್ತದೆ ಮತ್ತು ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡುತ್ತದೆ.
ಭೋಪಾಲ್ (ಗ್ರಾಮೀಣ) ಪೊಲೀಸ್ ಮಹಾನಿರ್ದೇಶಕರು ವಿಶೇಷ ತನಿಖಾ ತಂಡದ ನೇತೃತ್ವ ವಹಿಸಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ತಂಡದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಪ್ರಧಾನ ಕಚೇರಿ), ಮಹಿಳಾ ಸುರಕ್ಷತಾ ಶಾಖೆಯ ಸಹಾಯಕ ಪೊಲೀಸ್ ಮಹಾನಿರ್ದೇಶಕರು ಮತ್ತು ರಾಜ್ಯ ಸೈಬರ್ ಸೆಲ್‌ನ ಪೊಲೀಸ್ ವರಿಷ್ಠಾಧಿಕಾರಿಗಳು ಸಹ ಇರುತ್ತಾರೆ. ಮಧ್ಯಪ್ರದೇಶ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತಮಿಳುನಾಡು| ಎರಡು ಸಮುದಾಯಗಳ ನಡುವೆ ಘರ್ಷಣೆ: ದಲಿತ ಕುಟುಂಬದ ಗುಡಿಸಲಿಗೆ ಬೆಂಕಿ
ತಮಿಳುನಾಡು| ಎರಡು ಸಮುದಾಯಗಳ ನಡುವೆ ಘರ್ಷಣೆ: ದಲಿತ ಕುಟುಂಬದ ಗುಡಿಸಲಿಗೆ ಬೆಂಕಿ

