ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ಬಗ್ಗೆ ಸುಳ್ಳು ಮತ್ತು ತಪ್ಪಾದ ಮಾಹಿತಿಯನ್ನು ಹರಡಿದ ಸುದ್ದಿ ವರದಿಗಳ ವಿರುದ್ಧ ನಿಷೇಧಾಜ್ಞೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ವಜಾಗೊಳಿಸಿದೆ ಎಂದು ಲೈವ್ ಲಾ ಗುರುವಾರ ವರದಿ ಮಾಡಿದೆ. ಎರಡು ಹಿಂದಿ ಪತ್ರಿಕೆಗಳ ಸಂಪಾದಕರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವನ್ನು ರಿಟ್ ಅರ್ಜಿಯಲ್ಲಿ ಕೋರಲಾಗಿತ್ತು. ಮಧ್ಯಪ್ರದೇಶ ಹೈಕೋರ್ಟ್
ಪತ್ರಿಕೆಗಳು ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ನೋಯಿಸಲು ಮತ್ತು ಕೋಮು ದ್ವೇಷವನ್ನು ಹರಡಲು “ಲವ್ ಜಿಹಾದ್” ನಂತಹ ಪದಗಳನ್ನು ಬಳಸಿವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ ಎಂದು ವರದಿ ಹೇಳಿದೆ. ಮುಸ್ಲಿಮರು ಮತ್ತು ಇಸ್ಲಾಂ ಧರ್ಮದ ವಿರುದ್ಧ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ತಪ್ಪಾದ ಮತ್ತು ಸುಳ್ಳು ಮಾಹಿತಿಯನ್ನು ತಡೆಯಲು ಮಾರ್ಗಸೂಚಿಗಳನ್ನು ಹೊರಡಿಸುವಂತೆಯೂ ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.
“ಲವ್ ಜಿಹಾದ್” ಎಂಬುದು ಬಿಜೆಪಿ ಮತ್ತು ಆರೆಸ್ಸೆಸ್ ಪ್ರೇರಿತ ಕಾಲ್ಪನಿಕ ಕಟ್ಟುಕತೆಯಾಗಿದೆ. ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ಪ್ರೇಮಿಸಿ ಮೋಸಗೊಳಿಸಿ ಅಂತಿಮವಾಗಿ ಅವರನ್ನು ಇಸ್ಲಾಂಗೆ ಮತಾಂತರಿಸುವ ಸಂಘಟಿತ ಸಂಚು ಮಾಡುತ್ತಿದ್ದಾರೆ ಎಂದು ಇದರಲ್ಲಿ ಆರೋಪಿಸಲಾಗುತ್ತದೆ.
ಅದಾಗ್ಯೂ, ಇಂತಹ ಯಾವುದೇ ಪ್ರಕರಣ ಈ ವರೆಗೆ ದಾಖಲಾಗಿಲ್ಲ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಭಾರತೀಯ ಕಾನೂನಿನಲ್ಲಿ ಅಂತಹ ಪದವನ್ನು ವ್ಯಾಖ್ಯಾನಿಸಲು ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸಂಸತ್ತಿಗೆ ತಿಳಿಸಿದೆ.
ನ್ಯಾಯಮೂರ್ತಿ ವಿಶಾಲ್ ಮಿಶ್ರಾ ಅವರ ನ್ಯಾಯಪೀಠವು, ಅರ್ಜಿಯಲ್ಲಿ ಕೋರಲಾದ ವಿಷಯಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಾಗಿ ದಾಖಲಿಸಬೇಕಾಗಿತ್ತು, ಮ್ಯಾಂಡಮಸ್ ಅರ್ಜಿಯಾಗಿ ಅಲ್ಲ ಎಂದು ಹೇಳಿದೆ. ಅರ್ಜಿಯನ್ನು ಅನುಚಿತವಾಗಿ ಸಲ್ಲಿಸಲಾಗಿರುವುದರಿಂದ ಅದನ್ನು ವಜಾಗೊಳಿಸಲಾಯಿತು.
ಮ್ಯಾಂಡಮಸ್ ಎನ್ನುವುದು ಉನ್ನತ ನ್ಯಾಯಾಲಯವು ಹೊರಡಿಸಿದ ನ್ಯಾಯಾಲಯದ ಆದೇಶವಾಗಿದ್ದು, ಕೆಳ ನ್ಯಾಯಾಲಯ ಅಥವಾ ಸಾರ್ವಜನಿಕ ಅಧಿಕಾರಿ ಕಾನೂನುಬದ್ಧವಾಗಿ ಮಾಡಬೇಕಾದ ಕರ್ತವ್ಯವನ್ನು ನಿರ್ವಹಿಸಲು ಆದೇಶಿಸುತ್ತದೆ.
ವಿಚಾರಣೆಯ ಸಮಯದಲ್ಲಿ, ರಾಜ್ಯ ಸರ್ಕಾರದ ವಕೀಲರು ಅರ್ಜಿದಾರರ ಬೇಡಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು, ಮತ್ತು ಇಂತಹ ವಿಶಾಲ ಪರಿಹಾರಗಳನ್ನು ಕೇಳಲು ಅವರಿಗೆ ಯಾವುದೇ ಕಾನೂನು ಸ್ಥಾನಮಾನವಿಲ್ಲ ಎಂದು ವಾದಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು, ಮುಸ್ಲಿಂ ಸಮುದಾಯದ ಸದಸ್ಯರಾಗಿ ಆಪಾದಿತ ಆಕ್ರಮಣಕಾರಿ ವರದಿಯಿಂದ ಭಾದಿತನಾಗಿದ್ದಾಗಿ ಹೇಳಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಪೊಲೀಸರು ಪ್ರತಿಕ್ರಿಯಿಸದಿದ್ದರೆ, ಅರ್ಜಿದಾರರು ಉನ್ನತ ಅಧಿಕಾರಿಗಳಿಗೆ ದೂರು ಸಲ್ಲಿಸುವುದು ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತದ ನಿಬಂಧನೆಗಳ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸುವುದು ಸೇರಿದಂತೆ ಇತರ ಕಾನೂನು ಆಯ್ಕೆಗಳನ್ನು ಅನುಸರಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಮಧ್ಯಪ್ರದೇಶ ಹೈಕೋರ್ಟ್
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಬಿಹಾರ: ಮಹಾಘಟಬಂಧನದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್– ಕನ್ಹಯ್ಯಾ ಕುಮಾರ್ ಸ್ಪಷ್ಟನೆ
ಬಿಹಾರ: ಮಹಾಘಟಬಂಧನದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್– ಕನ್ಹಯ್ಯಾ ಕುಮಾರ್ ಸ್ಪಷ್ಟನೆ

