Homeಮುಖಪುಟಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾ. ಸ್ವಾಮಿನಾಥನ್ ಸಂವಿಧಾನದ ವಿರುದ್ದ ಮಾತನಾಡಿದ್ದಾರೆ: ನಿವೃತ್ತ ನ್ಯಾ. ಕೆ....

ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾ. ಸ್ವಾಮಿನಾಥನ್ ಸಂವಿಧಾನದ ವಿರುದ್ದ ಮಾತನಾಡಿದ್ದಾರೆ: ನಿವೃತ್ತ ನ್ಯಾ. ಕೆ. ಚಂದ್ರು

- Advertisement -
- Advertisement -

ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಜಾತ್ಯತೀತತೆ ಮತ್ತು ಕಾನೂನಿನ ನಿಯಮಕ್ಕೆ ವಿರುದ್ಧವಾದ ವಿಚಾರಗಳ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ ಸಂವಿಧಾನಕ್ಕೆ ಮತ್ತು ತಮ್ಮ ಪ್ರಮಾಣವಚನಕ್ಕೆ ದ್ರೋಹ ಎಸಗಿದ್ದಾರೆ ಎಂದು ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ಅಕ್ಟೋಬರ್ 22ರಂದು ಚೆನ್ನೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಹಾಲಿ ನ್ಯಾಯಾಧೀಶರ ವಿರುದ್ಧ ಕಟು ಟೀಕೆ ಮಾಡಿದ ನ್ಯಾಯಮೂರ್ತಿ ಚಂದ್ರು, ನ್ಯಾಯಮೂರ್ತಿ ಸ್ವಾಮಿನಾಥನ್ ಅವರನ್ನು ಒಬ್ಬ ‘ವಿಚಿತ್ರ ವ್ಯಕ್ತಿ’ ಎಂದಿದ್ದು, ಅವರು ನ್ಯಾಯಾಧೀಶರಾಗಿ ಸಂವಿಧಾನವನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕ್ರಮದಲ್ಲಿ ಸಂವಿಧಾನದ ವಿರುದ್ಧ ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ.

“ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ರಕ್ಷಣೆ” ಎಂಬ ಶೀರ್ಷಿಕೆಯಡಿ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ವಕೀಲರ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಚಂದ್ರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

“ಆ ಜಿ.ಆರ್. ಸ್ವಾಮಿನಾಥನ್ ಒಬ್ಬ ವಿಚಿತ್ರ ವ್ಯಕ್ತಿ. ನಾನು ಇದನ್ನು ಹೇಳಲು ಕಾರಣ ಸಂವಿಧಾನದ ಪ್ರಕಾರ ನಾವು ನ್ಯಾಯಾಧೀಶರಾದಾಗ ‘ನಾನು ಭಯ ಅಥವಾ ಪಕ್ಷಪಾತವಿಲ್ಲದೆ, ದ್ವೇಷವಿಲ್ಲದೆ ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ’ ಎಂದು ನಾವು ದೃಢವಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಆದರೆ, ಸ್ವಾಮಿನಾಥನ್ ಅದನ್ನು ಉಲ್ಲಂಘಿಸಿದ್ದಾರೆ. ಅವರ ಹೇಳಿಕೆಗಳು ಪ್ರಮಾಣ ವಚನಕ್ಕೆ ವಿರುದ್ಧವಾಗಿದೆ” ಎಂದು ಚಂದ್ರು ಹೇಳಿದ್ದಾರೆ. 

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಮತ್ತು ಭಾರತದ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. “ನಮ್ಮ ಸಂವಿಧಾನ 1935ರ ಭಾರತ ಸರ್ಕಾರಿ ಕಾಯ್ದೆಯಿಂದ ನಕಲು ಮಾಡಿ ಪುಸ್ತಕವಾಗಿದೆ” ಎಂದು ಹೇಳಿದ್ದಾರೆ ಎಂದು ಚಂದ್ರು ಆರೋಪಿಸಿದ್ದಾರೆ.

“ಹರಿಯಾಣದಲ್ಲಿ ನಡೆದ ಆರ್‌ಎಸ್‌ಎಸ್ ಸಭೆಯಲ್ಲಿ, ಭಾರತದ ಸಂವಿಧಾನವನ್ನು 1935ರ ಕಾನೂನಿನಿಂದ ನಕಲು ಮಾಡಲಾಗಿದೆ ಮತ್ತು ನಮ್ಮ ಸಂವಿಧಾನದಲ್ಲಿ ಯಾವುದೇ ಸ್ವಂತಿಕೆ ಇಲ್ಲ ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಅಂತಹ ಜನರಿಗೆ ಪ್ರತಿಕ್ರಿಯಿಸಲು ಸಮಯ ವ್ಯರ್ಥ ಮಾಡುವುದಿಲ್ಲ ಎಂದು ಡಾ. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಆದರೂ, ಹಾಲಿ ಹೈಕೋರ್ಟ್ ನ್ಯಾಯಾಧೀಶರು ಈ ರೀತಿ ಮಾತನಾಡುತ್ತಾರೆ. ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.

ಹಾಲಿ ನ್ಯಾಯಾಧೀಶರ ಇಂತಹ ಮಾತುಗಳು ಡಾ. ಬಿ.ಆರ್. ಅಂಬೇಡ್ಕರ್ ರೂಪಿಸಿದ ಸಂವಿಧಾನದ ಮೂಲ ಉದ್ದೇಶವನ್ನೇ ಕೆಡಿಸುತ್ತವೆ. ಸಂವಿಧಾನವು ಎಲ್ಲರಿಗೂ ಸಮಾನತೆಯನ್ನು ನೀಡಿ, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ನ್ಯಾಯಮೂರ್ತಿ ಚಂದ್ದು ಹೇಳಿದ್ದಾರೆ.

“ಕಾನೂನಿನ ನಿಯಮವನ್ನು ಉಲ್ಲಂಘಿಸುವ ಮತ್ತು ಅಂಬೇಡ್ಕರ್ ಅವರ ಪರಂಪರೆಯನ್ನು ನಿರಾಕರಿಸುವವರನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಚಂದ್ರು ಗುಡುಗಿದ್ದಾರೆ

“ಸಮಾನತೆ ಮತ್ತು ಶ್ರೇಣಿಕೃತ ವ್ಯವಸ್ಥೆಯ ನಡುವಿನ ದೊಡ್ಡ ಸೈದ್ಧಾಂತಿಕ ಹೋರಾಟ”ಕ್ಕೆ ಸಿದ್ಧರಾಗುವಂತೆ ಅವರು ವಕೀಲರು ಮತ್ತು ನಾಗರಿಕರಿಗೆ ಕರೆ ನೀಡಿದ್ದಾರೆ.

ನ್ಯಾಯಮೂರ್ತಿ ಚಂದ್ರು ಅವರು ಭಾಗವಹಿಸಿದ್ದ ಕಾರ್ಯಕ್ರಮ ಚೆನ್ನೈನ ವಲ್ಲುವರ್ ಕೊಟ್ಟಂನಲ್ಲಿ ನಡೆದಿದೆ. ಇದನ್ನು ‘ಸಮತುವ ವಾಝ್ಕಾರಿಣ್ಯರ್ ಸಂಗಮ್’ ಮತ್ತು ‘ವಿಸಿಕೆ ವಕೀಲರ ವಿಭಾಗ’ ಜಂಟಿಯಾಗಿ ಆಯೋಜಿಸಿತ್ತು. ಲೋಕಸಭಾ ಸಂಸದ ಥೋಲ್ ತಿರುಮಾವಲವನ್ ನೇತೃತ್ವದ ವಿಸಿಕೆ, ಆಡಳಿತಾರೂಢ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡ ದಲಿತ-ಹಕ್ಕುಗಳ ರಾಜಕೀಯ ಪಕ್ಷವಾಗಿದೆ.

ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಿ ಹರಿಪರಂತಮನ್ ಮತ್ತು ನ್ಯಾಯಮೂರ್ತಿ ಕೆ ಚಂದ್ರು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿದ್ದರು. ವಿಸಿಕೆ ಜೊತೆ ಸಂಯೋಜಿತವಾಗಿರುವ ಎಳಿಲ್ ಕ್ಯಾರೋಲಿನ್, ಪಿ ತಮಿಳಿನಿಯನ್ ಮತ್ತು ಎಸ್‌ಎ ರಜನಿಕಾಂತ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಕುತೂಹಲಕಾರಿಯಾಗಿ, ಕಾರ್ಯಕ್ರಮದ ಪ್ರಚಾರಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿಆರ್ ಗವಾಯಿ ಅವರ ಫೋಟೋ ಮತ್ತು ವಿಸಿಕೆ ಲೋಗೋವನ್ನು ಒಳಗೊಂಡ ಪೋಸ್ಟರ್ ಅನ್ನು ಮದ್ರಾಸ್ ಹೈಕೋರ್ಟ್‌ನ ಹೊರಗೆ ಪ್ರದರ್ಶಿಸಲಾಗಿತ್ತು. ಆದರೆ, ಸಿಜೆಐ ಕಾರ್ಯಕ್ರಮದಲ್ಲಿ ಭಾಗವಹಿಸುವ ಯಾವುದೇ ಸೂಚನೆ ಇರಲಿಲ್ಲ. ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋ ಸಿಜೆಐ ಗವಾಯಿ ಅವರು ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎಂಬುವುದನ್ನು ದೃಢಪಡಿಸಿದೆ.

ನ್ಯಾಯಮೂರ್ತಿ ಚಂದ್ರು ಅವರ ತನ್ನ ಭಾಷಣದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರಾದ ಸಿಜೆಐ ಬಿ.ಆರ್ ಗವಾಯಿ ಅವರ ಮೇಲಿನ ದಾಳಿ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ನ್ಯಾಯಾಂಗದ ಉನ್ನತ ಹಂತಗಳಲ್ಲಿಯೂ ಕೂಡ ದಲಿತರಿಗೆ ಗೌರವ ಇಲ್ಲ ಎನ್ನುವುದನ್ನು ಚಂದ್ರು ಖಂಡಿಸಿದ್ದಾರೆ.

ಜಾತಿ ವಿರೋಧಿ ಚಳವಳಿಯಲ್ಲಿ ಪಾದರಕ್ಷೆ ಅಥವಾ ಚಪ್ಪಲಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದು, ಅದನ್ನು ಕೇವಲ ಅವಮಾನವೆಂದು ನೋಡಬಾರದು ಎಂದು ಚಂದ್ರು ಪ್ರತಿಪಾದಿಸಿದ್ದಾರೆ.

“ಒಂದು ವೇಳೆ ಪಾದರಕ್ಷೆಯನ್ನು ಎಸೆದರೆ ಅದು ಅಗೌರವವಲ್ಲ. ಪಾದರಕ್ಷೆಗಳನ್ನು ಅಗೌರವಿಸುವವರು ಪ್ರಬಲ ಜಾತಿಯ ಜನರು. ನಾವು ಪಾದರಕ್ಷೆಗಳನ್ನು ಧರಿಸುತ್ತೇವೆ; ಅದರಿಂದ ನಾವು ಏನು ಬೇಕಾದರೂ ಮಾಡುತ್ತೇವೆ” ಎಂದು ಪೆರಿಯಾರ್ ಇ.ವಿ ರಾಮಸಾಮಿ ಮೇಲೆ ಚಪ್ಪಲಿ ಎಸೆದಾಗ ರಾಮಸ್ವಾಮಿ ನೀಡಿದ ಹೇಳಿಕೆಯನ್ನು ಚಂದ್ರು ಉಲ್ಲೇಖಿಸಿದ್ದಾರೆ.

ಚಪ್ಪಲಿ ಎಸೆದಾಗ ಅದನ್ನು ಎತ್ತಿಕೊಂಡು ಇನ್ನೊಂದು ಜೋಡಿ ಧರಿಸುವುದಾಗಿ ಪೆರಿಯಾರ್ ಹೇಳಿದರು ಎಂದು ನೆನಪಿಸಿದ “ಚಂದ್ರು, ಪಾದರಕ್ಷೆಗಳ ಸಂಕೇತವು ಅವಮಾನಕ್ಕಿಂತ ಸಮಾನತೆ ಮತ್ತು ಪ್ರತಿರೋಧವನ್ನು ಪ್ರತಿನಿಧಿಸುತ್ತದೆ” ಎಂದಿದ್ದಾರೆ. 

“ಭಾರತದ ಹಾಲಿ ಮುಖ್ಯ ನ್ಯಾಯಮೂರ್ತಿಯೊಬ್ಬರ ಮೇಲೆ ನ್ಯಾಯಾಲಯದೊಳಗಡೆಯೇ ಶೂ ಎಸೆದಾಗ, ಅದು ಮೌನವಾಗುವ ಬದಲು ರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಬೇಕಿತ್ತು. ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠದ ಬಳಿ ಅವರ ಮೇಲೆಯೇ ಶೂ ಎಸೆಯುವಾಗ ನಾವು ಸುಮ್ಮನಿದ್ದರೆ, ಅದು ನ್ಯಾಯಾಂಗದ ಮೇಲೆ ನಮಗಿರುವ ಗೌರವದ ಕುರಿತು ಯಾವ ಸಂದೇಶ ನೀಡುತ್ತದೆ” ಎಂದು ಚಂದ್ರು ಪ್ರಶ್ನಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಿಜೆಐ ಗವಾಯಿ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡಿದಾಗ ಅಧಿಕೃತ ಶಿಷ್ಟಾಚಾರದ ವೈಫಲ್ಯವನ್ನು ಚಂದ್ರು ಟೀಕಿಸಿದ್ದಾರೆ. ಹಿರಿಯ ಅಧಿಕಾರಿಗಳು ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿಲ್ಲ ಎಂದು ದೂರಿದ್ದಾರೆ.

“ಪರಿಶಿಷ್ಟ ಜಾತಿಯ ವ್ಯಕ್ತಿಯೊಬ್ಬರು ಭಾರತದ ಮುಖ್ಯ ನ್ಯಾಯಾಧೀಶರಾದರೂ, ಅವರನ್ನು ಅವರ ಹುದ್ದೆಗೆ ಸಲ್ಲುವ ಘನತೆಯಿಂದ ನಡೆಸಿಕೊಳ್ಳುತ್ತಿಲ್ಲ” ಎಂದಿದ್ದಾರೆ.

Courtesy: barandbench.com

ಮುಂದಿನ ಸಿಜೆಐ ನೇಮಕ ಪ್ರಕ್ರಿಯೆಗೆ ಚಾಲನೆ; ನ.3 ರಂದು ಬಿ.ಆರ್. ಗವಾಯಿ ನಿವೃತ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ದಯವಿಟ್ಟು ನನಗೆ ಸಹಾಯ ಮಾಡಿ, ಇಲ್ಲಿ ನಾನು ಸಾಯುತ್ತೇನೆ..’; ಸೌದಿಯಿಂದ ಉತ್ತರ ಪ್ರದೇಶದ ವ್ಯಕ್ತಿಯ ಭಾವನಾತ್ಮಕ ಸಂದೇಶ

ಇಚ್ಛೆಗೆ ವಿರುದ್ಧವಾಗಿ ತನ್ನನ್ನು ಇಲ್ಲಿ ಬಂಧಿಸಿಡಲಾಗಿದೆ ಎಂದು ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಹೇಳಿಕೊಂಡಿರುವ ಹೃದಯ ವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತೀಯ ರಾಯಭಾರ ಕಚೇರಿಯು ಗಮನಿಸಿ ಅವರಿಗಾಗಿ ಹುಡುಕಾಟ ಆರಂಭಿಸಿದೆ. ಉದ್ಯೋಗದಾತರು...

ಸತಾರ ವೈದ್ಯೆ ಆತ್ಮಹತ್ಯೆ ಪ್ರಕರಣ: ಟೆಕ್ಕಿ ಬಂಧನ; ಅತ್ಯಾಚಾರ ಆರೋಪಿ ಪೊಲೀಸ್ ಅಧಿಕಾರಿಗಾಗಿ ಹುಡುಕಾಟ

ಸತಾರ ಸರ್ಕಾರಿ ಆಸ್ಪತ್ರೆ ವೈದ್ಯೆಯ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಪ್ರಗತಿಯಲ್ಲಿ, ಮಹಿಳಾ ವೈದ್ಯೆಯ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ ಆರೋಪ ಹೊತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಬಂಕರ್ ಅವರನ್ನು ಪೊಲೀಸರು...

ಕರ್ನೂಲ್ ಬಸ್ ದುರಂತ: ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾದ 20 ಜನ

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗಿನ ಜಾವ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿ 20 ಜನರು ಸಾವನ್ನಪ್ಪಿದ ಭೀಕರ ರಸ್ತೆ ಅಪಘಾತಕ್ಕೆ ಚಾಲಕನೇ ನಿರ್ಲಕ್ಷ್ಯವೇ ಕಾರಣ ಎಂದು ಮೋಲ್ನೋಟಕ್ಕೆ ಕಂಡುಬಂದಿದೆ. ಶುಕ್ರವಾರ ಬೆಳಗಿನ...

ಬಂಧನಕ್ಕೊಳಗಾದ ನಾಲ್ಕು ತಿಂಗಳ ನಂತರ ಅಸ್ಸಾಂ ಮಹಿಳೆ ಬಾಂಗ್ಲಾದಲ್ಲಿ ಪತ್ತೆ

ಬಿಬಿಸಿ ತಂಡವು ಬಾಂಗ್ಲಾದೇಶದ ಢಾಕಾದ ಮಿರ್ಪುರಾ ಪ್ರದೇಶದಲ್ಲಿ 68 ವರ್ಷದ ಸಕಿನಾ ಬೇಗಂ ಅವರನ್ನು ಪತ್ತೆ ಮಾಡಿದೆ. ಬಂಗಾಳಿ ಅರ್ಥವಾಗದ ಮತ್ತು ಪೂರ್ವ ಅಸ್ಸಾಂನ ನಲ್ಬರಿ ಜಿಲ್ಲೆಯ ಜನರು ಹೆಚ್ಚಾಗಿ ಮಾತನಾಡುವ ಅಸ್ಸಾಮಿ...

ಕೋಟಾ: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಎಂಬಿಬಿಎಸ್ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ರಾಜಸ್ಥಾನದ ಕೋಟಾದಿಂದ ಮತ್ತೊಂದು ದುರಂತ ಘಟನೆ ವರದಿಯಾಗಿದೆ, ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಶುಕ್ರವಾರ ಆಕಾಶವಾಣಿ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ. ಪ್ರಾಚಿ ಮೀನಾ ಇತ್ತೀಚಿನ...

ದಲಿತ ಎಂಬ ಕಾರಣಕ್ಕೆ ಬಂಗಲೆಯಿಂದ ಬಲವಂತವಾಗಿ ಹೊರಹಾಕಲಾಗಿದೆ: ಕಾಂಗ್ರೆಸ್ ನಾಯಕ ಉದಿತ್ ರಾಜ್ ಆರೋಪ

ವಿಷಯವು ಸಬ್-ನ್ಯಾಯಾಲಯದಲ್ಲಿದ್ದರೂ, ಅಧಿಕಾರಿಗಳು ತಮ್ಮ ಕುಟುಂಬವನ್ನು ನವದೆಹಲಿಯಲ್ಲಿರುವ ಪಂಡಾರ ಪಾರ್ಕ್ ಬಂಗಲೆಯಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಉದಿತ್ ರಾಜ್ ಶುಕ್ರವಾರ ಆರೋಪಿಸಿದ್ದಾರೆ. ಮಾಜಿ ಸಂಸದರ ಪತ್ನಿ, ನಿವೃತ್ತ...

ವಿಜಯಪುರ| ಜನನಿಬಿಡ ರಸ್ತೆಯಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆಗೈದ 60 ವರ್ಷದ ವ್ಯಕ್ತಿ

ವಿಜಯಪುರ ನಗರದ ಸಿಂದಗಿ ಪಟ್ಟಣದ ಜನನಿಬಿಡ ರಸ್ತೆಯ ಮಧ್ಯದಲ್ಲಿ ಕ್ಯಾಪ್ ಧರಿಸಿ, ಒಂದು ಕೈಯಲ್ಲಿ ಮಚ್ಚಿನಿಂದ ಮತ್ತು ಇನ್ನೊಂದು ಕೈಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಹಿಡಿದುಕೊಂಡು ತನ್ನ ಪತ್ನಿಯ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ...

ಛತ್ತೀಸ್‌ಗಢ| 40 ಸಾವಿರ ರೂಪಾಯಿ ನಾಣ್ಯದಲ್ಲಿ ಪಾವತಿಸಿ ಮಗಳಿಗೆ ಸ್ಕೂಟರ್ ಕೊಡಿಸಿದ ರೈತ

ಛತ್ತೀಸ್‌ಗಢದ ಜಶ್‌ಪುರದಲ್ಲಿ, ರೈತನೊಬ್ಬ ತನ್ನ ಮಗಳಿಗಾಗಿ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಸಿದ್ದಾರೆ. ವಿಶೇಷವೆಂದರೆ, ಅದಕ್ಕಾಗಿ ಅವರು ಈವರೆಗೆ ತಾವು ಉಳಿತಾಯ ಮಾಡಿದ್ದ 40,000 ರೂಪಾಯಿಗಳನ್ನು ನಾಣ್ಯಗಳಲ್ಲಿ ಪಾವತಿಸಿದ್ದಾರೆ. ಕೇಸರಪತ್ ಗ್ರಾಮದಲ್ಲಿ ದಿನಸಿ ಮಾರಾಟ ಮಾಡುವ...

ಆರ್‌ಎಸ್‌ಎಸ್‌ ಪಥಸಂಚಲನ ವಿವಾದ: ಅ.28ರಂದು ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್, ಕಾರ್ಯಕ್ರಮ ಸಂಘಟಕರ ಜೊತೆ ಅಕ್ಟೋಬರ್‌ 28ರಂದು ಶಾಂತಿ ಸಭೆ ನಡೆಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ಸಬೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು...

ಪಶ್ಚಿಮ ದಂಡೆ ಸ್ವಾಧೀನಪಡಿಸಿಕೊಂಡರೆ ಇಸ್ರೇಲ್ ಅಮೆರಿಕದ ಬೆಂಬಲ ಕಳೆದುಕೊಳ್ಳಲಿದೆ : ಟ್ರಂಪ್ ಎಚ್ಚರಿಕೆ

ಆಕ್ರಮಿತ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಕೊಂಡರೆ ಇಸ್ರೇಲ್ ಅಮೆರಿಕದ ನಿರ್ಣಾಯಕ ಬೆಂಬಲವನ್ನು ಕಳೆದುಕೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಗುರುವಾರ (ಅ.23) ಪ್ರಕಟಗೊಂಡ ಟೈಮ್ ನಿಯತಕಾಲಿಕೆಯ ಸಂದರ್ಶನದಲ್ಲಿ, "ಪಶ್ಚಿಮ ದಂಡೆ ಸ್ವಾಧೀನಪಡಿಸಿಕೊಂಡರೆ ಪರಿಣಾಮಗಳು...