Homeಮುಖಪುಟ'ಅತ್ಯುನ್ನತ ಭಾರತ ರತ್ನವನ್ನು ಸಾವರ್ಕರ್‌ಗೆ ಅಷ್ಟೇ ಯಾಕೆ, ಗೋಡ್ಸೆಗೂ ಕೊಟ್ಟಬಿಡಿ’..!

‘ಅತ್ಯುನ್ನತ ಭಾರತ ರತ್ನವನ್ನು ಸಾವರ್ಕರ್‌ಗೆ ಅಷ್ಟೇ ಯಾಕೆ, ಗೋಡ್ಸೆಗೂ ಕೊಟ್ಟಬಿಡಿ’..!

- Advertisement -

ಇನ್ನೇನು ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಹಿನ್ನೆಲೆ ಬಿಜೆಪಿ ಪ್ರಣಾಳಿಕೆಯಲ್ಲಿ “ಹಿಂದೂ ಮಹಾಸಭಾದ ಅಧ್ಯಕ್ಷನಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವುದಾಗಿ” ಬಿಜೆಪಿ ಹೇಳಿದೆ. ಇದಕ್ಕೆ ಎಲ್ಲೆಡೆಯಿಂದ ಸಾಕಷ್ಟು ವಿರೋಧ ಕೇಳಿಬಂದಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ಸೇರ್ಪಡೆಯಾದ ಈ ವಿಷಯಕ್ಕೆ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಸ್ವಲ್ಪ ಕಟುವಾಗಿಯೇ ವ್ಯಂಗ್ಯವಾಡಿದ್ದಾರೆ. “ದೇಶದ ನಾಗರಿಕರಿಗೆ ಕೊಡುವ ಅತ್ಯುನ್ನತ ಗೌರವ ಪ್ರಶಸ್ತಿ ಭಾರತರತ್ನವನ್ನು ಬೇಕಿದ್ದರೆ ನೇರವಾಗಿ ನಾಥೂರಾಮ್ ಗೋಡ್ಸೆಗೆ ನೀಡಲಿ” ಎಂದು ಟೀಕಿಸಿದ್ದಾರೆ.

ನಾಗ್ಪುರದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮನೀಶ್ ತಿವಾರಿ, ’ಸಾವರ್ಕರ್ ಅವರು ಮಹಾತ್ಮಾ ಗಾಂಧೀಜಿಯವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂಬ ಆರೋಪಗಳಿದ್ದವು. ಆದರೆ ನಾಥೂರಾಮ್ ಗೋಡ್ಸೆ ನೇರವಾಗಿಯೇ ಗಾಂಧೀಜಿಯವರನ್ನು ಹತ್ಯೆಗೈದು ಸಿಕ್ಕಿಬಿದ್ದ ಅಪರಾಧಿಯಾಗಿದ್ದಾನೆ. ಈಗ ನಾವು ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಎನ್.ಡಿ.ಎ ಸರ್ಕಾರ ಬೇಕಿದ್ದರೆ ಸಾವರ್ಕರ್ ಬದಲು ನಾಥೂರಾಮ್ ಗೋಡ್ಸೆಗೆ ನೇರವಾಗಿ ಭಾರತರತ್ನ ನೀಡಲಿ’ ಎಂದು ವ್ಯಂಗ್ಯವಾಡಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಮನೀಶ್ ತಿವಾರಿ, ಬಿಜೆಪಿ ಸರ್ಕಾರ ಭಾರತರತ್ನಕ್ಕೆ ಗೋಡ್ಸೆ ಬದಲಿಗೆ ಸಾವರ್ಕರ್ ನ್ನು ಆಯ್ಕೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಗಾಂಧೀಜಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಕ್ಕೆ ಸಾವರ್ಕರ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಲಾಗಿತ್ತು ಎಂದು ಬರೆದಿದ್ದಾರೆ.

ಸಾರ್ವರ್ಕರ್‌ ಅಂಡಮಾನ್‌ ಜೈಲಿನಲ್ಲಿ ರಾಜಕೀಯ ಖೈದಿಯಾಗಿದ್ದ ವೇಳೆ ಬ್ರಿಟೀಷರಿಗೆ “ಇನ್ನೆಂದೂ ಸ್ವಾತಂತ್ರ್ಯ ಹೋರಾಟದಲ್ಲಿ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದ ದ್ರೋಹಿಯಾಗಿದ್ದಾರೆ” ಅಂತವರಿಗೆ ಭಾರತ ರತ್ನ ನೀಡುವ ಮೂಲಕ ಆ ಪ್ರಶಸ್ತಿಗೆ ಅವಮಾನ ಮಾಡುತ್ತಿದ್ದಾರೆ ಎಂದು ನೂರಾರು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಎರಡು ದಿನದ ಹಿಂದಷ್ಟೇ ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಕೂಡ ಭಾರತರತ್ನ ವಿಚಾರವಾಗಿ ಮಾತನಾಡಿ, ಸದ್ಯ ನಾಥೂರಾಮ್ ಗೋಡ್ಸೆ ಹೆಸರು ಉಲ್ಲೇಖಿಸಿಲ್ಲ ಎಂದು ಲೇವಡಿ ಮಾಡಿದ್ದರು. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಾವರ್ಕರ್ ಬಗ್ಗೆ ಗೊತ್ತಿದೆ. ಗಾಂಧಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಆರೋಪ ಅವರ ಮೇಲಿತ್ತು. ಈಗ ಬಿಜೆಪಿ ಸರ್ಕಾರ ಅಂಥವರಿಗೆ ಭಾರತರತ್ನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಗೋಡ್ಸೆ ಹೆಸರು ಭಾರತರತ್ನಕ್ಕೆ ಆಯ್ಕೆಯಾಗದಿದ್ದರೆ ಸಾಕು ಎಂದು ಕಳವಳ ವ್ಯಕ್ತಪಡಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial