ಮಹಾರಾಷ್ಟ್ರ | ಎಲ್ಲಾ ಸರ್ಕಾರಿ ಸಂವಹನಗಳಿಗೆ ಮರಾಠಿ ಭಾಷೆ ಬಳಕೆ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ!

ಸರ್ಕಾರಿ ಕಚೇರಿಗಳು ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಎಲ್ಲಾ ಅಧಿಕೃತ ಸಂವಹನಗಳಿಗೆ ಮರಾಠಿ ಬಳಕೆಯನ್ನು ಕಡ್ಡಾಯಗೊಳಿಸಿ ಮಹಾರಾಷ್ಟ್ರ ಸರ್ಕಾರ ಸೋಮವಾರ ಅಧಿಸೂಚನೆ ಹೊರಡಿಸಿದೆ ಎಂದು ಪಿಟಿಐ ವರದಿ ಮಾಡಿದೆ. ರಾಜ್ಯ ಯೋಜನಾ ಇಲಾಖೆ ಹೊರಡಿಸಿದ ಈ ಅಧಿಸೂಚನೆಯಲ್ಲಿ, ನಿರ್ದೇಶನವನ್ನು ಪಾಲಿಸದ ಸರ್ಕಾರಿ ನೌಕರರು ಶಿಸ್ತು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಆದೇಶ ಪಾಲಿಸದಿರುವ ಬಗ್ಗೆ ಅಗತ್ಯ ಕ್ರಮಕ್ಕಾಗಿ ಕಚೇರಿ ಅಥವಾ ಇಲಾಖಾ ಮುಖ್ಯಸ್ಥರಿಗೆ ದೂರುಗಳನ್ನು ಸಲ್ಲಿಸಬಹುದು ಎಂದು ಅಧಿಸೂಚನೆ ಹೇಳಿದೆ. … Continue reading ಮಹಾರಾಷ್ಟ್ರ | ಎಲ್ಲಾ ಸರ್ಕಾರಿ ಸಂವಹನಗಳಿಗೆ ಮರಾಠಿ ಭಾಷೆ ಬಳಕೆ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ!